ಯರಗಟ್ಟಿ

ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಯರಗಟ್ಟಿ 29:  ಮೀಪದ ರೈನಾಪೂರ ಗ್ರಾಮದಲ್ಲಿ ಭಗತ್ ಸಿಂಗ್ ಜಯಂತಿ ನಿಮಿತ್ಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಪಿಕೆಪಿಎಸ್ ಅಧ್ಯಕ್ಷ ವಿಠ್ಠಲ ಬಂಟನೂರ ಚಾಲನೆ ನೀಡಿದರು. 

ಯುವಕರು ಕ್ರೀಡೆಯೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಎಂದು ಹೇಳಿದರು. 

2 ವರ್ಷಗಳಿಂದಲೂ ಕ್ರೀಡೆ ಮತ್ತು ಸಾಮಾಜಿಕ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಲದೆ ಭಗತ್ ಸಿಂಗ್ ಯುಥ್ಸ್‌ ಬ್ರಿಗೇಡ್ ವತಿಯಿಂದ ಅನೇಕ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವಕರಿಗೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಗೋವಿಂದ ಕಡೆಮನಿ, ತಿಮ್ಮಣ್ಣಾ ಆಚಮಟ್ಟಿ, ಅಬ್ದುಲ್ ನದಾಫ, ಮುದ್ದಪ್ಪ ಪೂಜೇರ, ಆನಂದ ಬಾಗೋಡಿ, ಆನಂದ ಪಟ್ಟಣಶೆಟ್ಟಿ, ಈರಣ್ಣಾ ತೋರಗಟ್ಟಿ, ಯಂಕಣ್ಣಾ ಹುರಕನ್ನವರ, ರಾಜು ನದಾಫ, ಶಂಕರ ಆಚಮಟ್ಟಿ, ಬಸವರಾಜ ಪಟ್ಟಣಶೆಟ್ಟಿ, ಫಕ್ರು ನದದಾಫ, ಪ್ರಕಾಶ ಮಾಳಗಿ, ರಾಜು ಕಾರೆಪ್ಪನ್ನವರ, ಹನಮಂತ ರವಿ ಮತ್ತು ಭಗತ ಸಿಂಗ್ ಯುಥ್ಸ್‌ ಬ್ರಿಗೇಡ್ ಸದಸ್ಯರು ಇತರರು ಇದ್ದರು. 


ಸುದ್ದಿ ಓದಿ