ತುಂಗಭದ್ರಾ ನದಿಯಲ್ಲಿ ಕಾಲುಜಾರಿ ಬಿದ್ದು ವೃದ್ದ ಸಾವು
ಹೂವಿನಹಡಗಲಿ 04: ತಾಲ್ಲೂಕಿನಮೈಲಾರ ಜಾತ್ರೆಗೆ ಬಂದಿದ್ದ 65 ವರ್ಷದ ವೃದ್ಧರೊಬ್ಬರು ಗುರುವಾರ ತುಂಗಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಮೃತಪಟ್ಟಿರುವ ವೃದ್ಧರ ವಿಳಾಸ ಪತ್ತೆಯಾಗಿಲ್ಲ. ಅವರು ಸ್ನಾನ ಮಾಡಲು ನದಿಗೆ ಇಳಿದಾಗ ಆಕಸ್ಮಿಕವಾಗಿ ಗುಂಡಿಯಲ್ಲಿ ಮುಳುಗಿದ್ದಾರೆ. ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಬೋಟ್ ನೆರವಿನಿಂದ ಶೋಧ ನಡೆಸಿ ಶವವನ್ನು ಹೊರ ತೆಗೆದಿದ್ದಾರೆ.
ಶವವನ್ನು ಹೊಳಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದ್ದು, ಕುಟುಂಬದವರ ಪತ್ತೆಗಾಗಿ ಪೊಲೀಸರು ಜಾತ್ರಾ ಮ್ಯೆದಾನದಲ್ಲಿ ಧ್ವನಿವರ್ಧಕಗಳಲ್ಲಿ ಮಾಹಿತಿ ನೀಡುತ್ತಿದ್ದಾರೆ.