ಶ್ರಮದಾನದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಲೋಕದರ್ಶನ ವರದಿ
ಶಿಗ್ಗಾವಿ 09: ತಾಲೂಕಿನ ಗಂಗೀಭಾವಿ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶೀಧರ ಯಲಿಗಾರ ವಿಶೇಷವಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶ್ರಮದಾನದ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಮೂಲಕ ತಮ್ಮ 57 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಶಶೀಧರ ಯಲಿಗಾರ ಸ್ವಚ್ಚತಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ನಾನು ಉಚಿತವಾಗಿ ಶಿಗ್ಗಾವಿ ಮತ್ತು ಸವಣೂರ ತಾಲೂಕಿನಲ್ಲಿ ವಿಧ್ಯಾರ್ಥಿಗಳಿಗೆ ಪಾಸ ವಿತರಿಸುವ ಸಂದರ್ಭದಲ್ಲಿ ಶಿಗ್ಗಾವಿ ಪಟ್ಟಣದ ಸರಕಾರಿ ಅಂಕಲಕೋಟಿ ಕಾಲೇಜಿನ ಸುತ್ತಮುತ್ತಲಿರುವ ವಾತಾವರಣವನ್ನು ನೋಡಿ ಅಂದೇ ತೀರ್ಮಾನಿಸಿದರು ಈ ಪ್ರದೇಶವನ್ನು ಸ್ವಚ್ಚಗೋಳಿಸಿ ವಿಧ್ಯಾರ್ಥಿ, ವಿಧ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಸಂಕಲ್ಪ ಇತ್ತು ಅಲ್ಲದೇ ಭಯದ ವಾತಾವರಣವನ್ನು ಸಾಕಾರಗೋಳಿಸಬೇಕು ಎಂದರು.
ಕಾಲೇಜಿಗೆ ಬರಲು ವಿಧ್ಯಾರ್ಥಿಗಳಿಗೆ ಸರಿಯಾದ ರಸ್ತೆ ಇಲ್ಲ ಬರುವ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ರಸ್ತೆಯಲ್ಲಿರುವ ವ್ಯಾಜ್ಯವನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಆ ನಿಟ್ಟಿನಲ್ಲಿ ಇಂದು ಕಾಲೇಜ ವಿಧ್ಯಾರ್ಥಿ, ವಿಧ್ಯಾರ್ಥಿನಿಯರೊಂದಿಗೆ ಶ್ರಮದಾನ ಮೂಲಕ ಸ್ವಚ್ಚತೆ ಮಾಡಿ ನಂತರ ತಮ್ಮದೇ ಜೆ.ಸಿ.ಬಿ ವಾಹನದ ಮೂಲಕ ಸುಮಾರು ಬೆಳಿಗ್ಗೆ 10 ಗಂಟೆಯಿಂದ 5 ಗಂಟೆಯವರಿಗೆ ಸ್ವಚ್ಚತಾ ಕಾರ್ಯ ಜರುಗಿತು.
ಈ ಸಂದರ್ಭದಲ್ಲಿ ಕಾಲೇಜಿನ ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಶಶೀಧರ ಯಲಿಗಾರ ಸರಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿ ನಂತರ ಸ್ವಚ್ಚತಾ ಕಾರ್ಯ ಮಾಡಿ ವಿಧ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ಅವರ ಪ್ರೀತಿ ವಿಶ್ವಾಸಕ್ಕೆ ವಿಧ್ಯಾರ್ಥಿಗಳು ನಿಮ್ಮ ಕಾರ್ಯಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದು ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಭಾರಿ ಪ್ರಾಂಶುಪಾಲ ಪ್ರೋ ಎಂ.ಬಿ.ನಾಗಲಾಪೂರ, ಸಹಾಯಕ ಪ್ರಾದ್ಯಾಪಕ ಡಾ ಎಸ್.ಜಿ.ವಿಭೂತಿ, ಗ್ರಾ.ಪಂ. ಸದಸ್ಯ ನಾಗರಾಜ ಸೂರಗೊಂಡ, ರೇಣುಕಾಚಾರ್ಯ ಸೊಸೈಟಿ ಅಧ್ಯಕ್ಷ ಈರಣ್ಣಾ ಬಡ್ಡಿ, ಕ.ರಾ.ಕಾ.ವಿ.ವೇದಿಕೆ ಗೌರವಾಧ್ಯಕ್ಷ ಜಿಲಾನಿ ಜಂಗ್ಲಿ, ತಾಲೂಕ ಅಧ್ಯಕ್ಷ ಈಮಾಮಹುಸೇನ ಆದಂಬಾಯಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಮತ್ತು ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಉಪಸ್ಥಿತರಿದ್ದರು.