ರಾಣೆಬೆನ್ನೂರ

ಅಂಕಸಾಪುರ ತಾಂಡೆ ರಸ್ತೆ ಅಭಿವೃದ್ಧಿಗೆ ಚಾಲನೆ

ಅಂಕಸಾಪುರ ತಾಂಡೆ ರಸ್ತೆ ಅಭಿವೃದ್ಧಿಗೆ ಚಾಲನೆ
ರಾಣೇಬೆನ್ನೂರು ತಾಲೂಕಿನ ಅಂಕಸಾಪುರ ತಾಂಡೆಯಲ್ಲಿ ಶಾಸಕ ಅರುಣಕುಮಾರ ಪೂಜಾರ ಅವರು ಶನಿವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ

ರಾಣೇಬೆನ್ನೂರ 06: ತಾಂಡೆಗಳ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ದವಿದೆ. ಅದಕ್ಕಾಗಿ ತಾಂಡಾ ಅಭಿವೃದ್ಧಿ ನಿಗಮವು ಸಹ ಸ್ಥಾಪಿಸಲಾಗಿದೆ. ಕೇವಲ ಮುಖ್ಯ ರಸ್ತೆಗಳಿಗೆ ಮಾತ್ರ ಆದ್ಯತೆ ನೀಡುತ್ತಿಲ್ಲ. ಜನ ವಸತಿ ಪ್ರದೇಶಗಳ ಅಭಿವೃದ್ಧಿಗೂ ಆಧ್ಯತೆ ನೀಡಲಾಗಿದೆ. ಭಂಜಾರ ಸಮುದಾಯ ಇತರರಂತೆ ಸಮಾನತೆಯಿಂದ ಆರೋಗ್ಯಯುತ ಬದುಕು ಸಾಗಿಸಲು ಮುಂದಾಗಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ಅವರು ತಾಲೂಕಿನ ಅಂಕಸಾಪುರ ತಾಂಡೆಯಲ್ಲಿ ಶನಿವಾರ ನಡೆದ ಜನವಸತಿ ಪ್ರದೇಶ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದರು. 

ರಸ್ತೆಗಳು ಯಾವುದೇ ಕಾರಣಕ್ಕೂ ಕಳಪೆಯಾಗದಂತೆ ನೋಡಿಕೊಳ್ಳಬೇಕು. ಮತ್ತು ಗುಣಮಟ್ಟವನ್ನು ಸಂಪೂರ್ಣವಾಗಿ ಕಾಯ್ದುಕೊಳ್ಳಬೇಕು. ಕಳಪೆಯಾಗಿದ್ದು ಕಂಡು ಬಂದರೆ ತಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಖಡಕ್ಕಾಗಿ ಎಚ್ಚರಿಸಿದ ಶಾಸಕರು, ಗ್ರಾಮದ ಜನತೆ ಇಲ್ಲಿರುವ ಯಾವುದೇ ಸಮಸ್ಯೆಗಳು ಅಭಿವೃದ್ದಿ ಕಾಮಗಾರಿಗಳಿಗೆ ಕುಂಠಿತವಾಗಬಾರದು. ರಾಜಕಾರಣ ಅಭಿವೃದ್ಧಿ ವಿಚಾರದಲ್ಲಿ ಬರಬಾರದು. ಏನೇ ಸಮಸ್ಯೆಗಳು ಇದ್ದರೂ ಸೂಕ್ಷ್ಮತೆಯಿಂದ ಪರಿಹರಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಸಹಕಾರ ನೀಡಬೇಕು ಎಂದರು. 

ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರು, ಪ್ರಕಾಶ ಪೂಜಾರ, ಜಿಪಂ ಮಾಜಿ ಅಧ್ಯಕ್ಷ  ಮಂಜುನಾಥ್ ಓಲೇಕಾರ, ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ, ಬೇಲೂರು ಗ್ರಾಪಂನ ಶೇಖಪ್ಪ, ಪಾಪಣ್ಣ ಲಮಾಣಿ, ಲೋಹಿತ್ ಲಮಾಣಿ, ಕುಬೇರಪ್ಪ ಲಮಾಣಿ, ಗಜೇಂದ್ರ ಲಮಾಣಿ, ಲಕ್ಷ್ಮಣ ಲಮಾಣಿ, ಪೀರಪ್ಪ ಲಮಾಣಿ, ಹನುಮಂತಪ್ಪ ಲಮಾಣಿ, ಪ್ರಕಾಶ ಲಮಾಣಿ, ಪಿ.ಈ.ಲಮಾಣಿ, ಹಾಲಪ್ಪ ಲಮಾಣಿ, ಶಿವಪ್ಪ ಲಮಾಣಿ, ಚಂದ್ರಪ್ಪ ಲಮಾಣಿ, ಲೋಕೇಶ ಲಮಾಣಿ, ಪೀರಪ್ಪ ಬಡಗಿ, ಮಾಲತೇಶ್ ಲಮಾಣಿ, ಚಂದ್ರು ಲಮಾಣಿ,  ಗುತ್ತಿಗೆದಾರ ಗೋಪಿ ತಿಮ್ಮಪ್ಪ ಗೊಲ್ಲರ, ರಮೇಶ ನಾಯಕ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಗ್ರಾಮ ಪಂಚಾಯತಿ ಸದಸ್ಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ