ರಾಣೆಬೆನ್ನೂರ

ರೈತ ಸಂಘದ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಗೆ ಚಾಲನೆ

ರೈತ ಸಂಘದ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಗೆ ಚಾಲನೆ

ರಾಣೇಬೆನ್ನೂರು 08: ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಪ್ರೊ. ಲಕ್ಷ್ಮೀನಾರಾಯಣ ಗೌಡ್ರ ಹಾಗೂ ರಾಜ್ಯ ಯುವ ಘಟಕದ ಅಧ್ಯಕ್ಷ ಲಿಂಗರಾಜ ಬ ಅತನೂರ ಅವರು ಈಗಾಗಲೇ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ ರೈತ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷರನ್ನಾಗಿಸಿ ರಾಣೇಬೆನ್ನೂರು ತಾಲೂಕಿನ ಶ್ರೀನಿವಾಸಪುರ ತಾಂಡಾದ ಯುವ ಕಾರ್ಯಕರ್ತ, ರೈತಪರ ಸಾಮಾಜಿಕ ಚಿಂತಕ ಕೃಷ್ಣಮೂರ್ತಿ ಎಸ್ ಲಮಾಣಿ ಅವರನ್ನು ಹಾವೇರಿ ಜಿಲ್ಲೆಯ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಕಾತಿಗೊಳಿಸಲಾಗಿದೆ. 

ನೂತನ ಜಿಲ್ಲಾ ಘಟಕದ ಅಧ್ಯಕ್ಷರಾದ ಕೃಷ್ಣಮೂರ್ತಿ ಲಮಾಣಿ ಅವರು ಹಾವೇರಿ ಜಿಲ್ಲೆಯ ಎಲ್ಲಾ 8 ತಾಲೂಕು ಕೇಂದ್ರಗಳಲ್ಲಿ ತಾಲೂಕ ಘಟಕದ ಅಧ್ಯಕ್ಷರನ್ನು ನೇಮಕಾತಿಗೊಳಿಸುವ ಪ್ರಕ್ರಿಯೆಯಲ್ಲಿ ಮುಂದಾಗಿದ್ದಾರೆ. ರೈತ ಪರ ಹೋರಾಟಗಾರ ಯುವ ನಾಯಕರು, ಸಾಮಾಜಿಕ ಚಿಂತಕರು, ಈ ಸಂಘಟನೆಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಆಸಕ್ತ ಕ್ರಿಯಾಶೀಲ ರೈತಪರ ಕಾಳಜಿಯುಳ್ಳ ಯುವಕರು, ಸಾಮಾಜಿಕ ಚಿಂತಕರು, ಸಂಪರ್ಕಿಸಬಹುದಾಗಿದೆ ಮೊ:7453068432 ಎಂದು ರಾಜ್ಯಾಧ್ಯಕ್ಷ ಲಿಂಗರಾಜ ಅತನೂರ ಅವರು ಕೋರಿದ್ದಾರೆ.

ಸುದ್ದಿ ಓದಿ