ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ
ಶಿಗ್ಗಾವಿ 11: ಪಟ್ಟಣದ ವಾರ್ಡ ಸಂಖೈ 10,12,23 ರ ಕರ್ನಾಟಕ ರಾಜ್ಯ ನೀರಾವರಿ ನಿಯಮಿತ ನಿಗಮ ಯೋಜನೆಯಡಿ ಎಸ್.ಸಿ. ಫಲಾನುಭವಿಗಳ ಕಾಲೋನಿಗೆ ಕಾಂಕ್ರೇಟ್ ರಸ್ತೆ, ಚರಂಡಿ ನಿರ್ಮಾಣ 30 ಲಕ್ಷದ ಕಾಮಗಾರಿಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೇರವೇರಿಸಿದರು. ಈ ಸಂದರ್ಭದಲ್ಲಿ ವಾರ್ಡಿನ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದರು. ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷ ಮಂಜು ಬ್ಯಾಹಟ್ಟಿ, ಸದಸ್ಯೆ ಶಾಂತಾಬಾಯಿ ಸುಭೇದಾರ, ಸಂಗೀತಾ ವಾಲ್ಮೀಕಿ, ಬಿಜೆಪಿ ಮಂಡಲದ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ, ಗುತ್ತಿಗೆದಾರ ಅರ್ಜುನ ಹಂಚಿನಮನಿ, ಆನಂದ ಸುಬೇದಾರ, ಮುಖಂಡ ಶರೀಫ ನದಾಫ, ಕರೆಯಪ್ಪ ಕಟ್ಟಿಮನಿ, ಡಾ.ಮಲ್ಲೇಶಪ್ಪ ಹರಿಜನ, ಹನುಮಂತಪ್ಪ ಹರಿಜನ ಪಿಡಬ್ಲೂಡಿ ಎಇಇ ಚಿಕ್ಕಮಠ, ಇಓ ಪ್ರಶಾಂತ ತುರಕಾಣಿ ಮತ್ತಿತರರು ಉಪಸ್ಥಿತರಿದ್ದರು.