ಗೋಕಾಕ್

ವಿದ್ಯುತ್ ಪರಿವರ್ತಕಗಳ ಸ್ಥಳಾಂತರಿಸುವ ಕಾಮಗಾರಿಗಳಿಗೆ ಚಾಲನೆ

ವಿದ್ಯುತ್ ಪರಿವರ್ತಕಗಳ ಸ್ಥಳಾಂತರಿಸುವ ಕಾಮಗಾರಿಗಳಿಗೆ ಚಾಲನೆ

ಗೋಕಾಕ 26: ನಗರಸಭೆಯಿಂದ ಹೆಸ್ಕಾಂ ಇಲಾಖೆಯ ಮೇಲ್ವಿಚಾರಣೆಯಲ್ಲಿ 1.8ಲಕ್ಷ ರೂ.ಗಳ ವೆಚ್ಚದಲ್ಲಿ ನಾಕಾ ನಂ. 1ರಿಂದ ಬಸವೇಶ್ವರ ವೃತ್ತದವರೆಗೆ ವಿದ್ಯುತ್ ಮಾರ್ಗ ಪರಿವರ್ತಕಗಳ ಸ್ಥಳಾಂತರಿಸುವ ಕಾಮಗಾರಿಗಳಿಗೆ ಬುಧವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಚಾಲನೆ ನೀಡಲಾಯಿತು. 

ಯುವ ಧುರೀಣ ಅಮರನಾಥ ಜಾರಕಿಹೊಳಿ, ನಗರಸಭೆ ಸದಸ್ಯರಾದ ಜಯಾನಂದ ಹುಣಚ್ಯಾಳ, ಬಸವರಾಜ ಆರೇನ್ನವರ, ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ವಿಜಯ ಜತ್ತಿ, ಮಹ್ಮದಯುಸುಫ ಅಂಕಲಗಿ, ಅಬ್ದುಲಸತ್ತಾರ ಶಭಾಶಖಾನ, ಸಂತೋಷ ಮಂತ್ರಣ್ಣವರ, ಹೆಸ್ಕಾಂನ ಎಸ್ ಪಿ ವರಾಳೆ, ನಗರಸಭೆಯ ವಿನೋದ ಪಾಟೀಲ, ಎಮ್ ಎಚ್ ಗಜಾಕೋಶ, ರಮೇಶ ಕೊಣಿ, ಗುತ್ತಿಗೆದಾರ ಸುರೇಶ ಹುಲಿಕಟ್ಟಿ ಇದ್ದರು. 


ಸುದ್ದಿ ಓದಿ