ಸಂಗನಬಸವ ಶ್ರೀಗಳಿಂದ ಸಮರ್ಪಣಾ ಅಭಿಯಾನಕ್ಕೆ ಚಾಲನೆ
ಶಿಗ್ಗಾವಿ 20: ನರೇಂದ್ರ ಮೋದಿ 71ನೇ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಭಾರತೀಯ ಜನತಾ ಪಕ್ಷ ಸೇವೆ ಹಾಗೂ ಸಮರ್ಪಣಾ ಅಭಿಯಾನ ಅಂಗವಾಗಿ ರೈತ ಮೋರ್ಚಾ ನೇತೃತ್ವದಲ್ಲಿ ವಿರಕ್ತಮಠದ ಆವರಣದಲ್ಲಿ ಸಂಗನಬಸವ ಮಹಾಸ್ವಾಮಿಗಳು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶಿರ್ವದಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಸದಸ್ಯ ರಮೇಶ ವನಹಳ್ಳಿ, ರಾಜ್ಯ ಯುವ ಮೋರ್ಚಾ ಸದಸ್ಯ ನರಹರಿ ಕಟ್ಟಿ, ಸಮಾಜ ಸೇವಕ ಮಾಲತೇಶ ಯಲಿಗಾರ, ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ, ಪ್ರ.ಕಾರ್ಯದರ್ಶಿ ರೇಣುಕಗೌಡ ಪಾಟೀಲ, ಯುವ ಮೋರ್ಚಾ ಪ್ರ. ಕಾರ್ಯದರ್ಶಿಗಳಾದ ವಿನಯ ಮುಂಡಗೋಡ, ಕಾಶೀನಾಥ ಕಳ್ಳಿಮನಿ, ಸಂತೋಷ ದೊಡ್ಡಮನಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.