ಯರಗಟ್ಟಿ

ಆಧ್ಯಾತ್ಮಿಕ ಸಂದೇಶ ಸಾರುವ ಕಾರ್ಯಕ್ರಮಕ್ಕೆ ಚಾಲನೆ

ಆಧ್ಯಾತ್ಮಿಕ ಸಂದೇಶ ಸಾರುವ ಕಾರ್ಯಕ್ರಮಕ್ಕೆ ಚಾಲನೆ

ಯರಗಟ್ಟಿ 11: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಪರಮಾತ್ಮ ಶಿವ ತಂದೆಯ ಸಂದೇಶವನ್ನು ಸಾರುವ ವಾಹನವನ್ನು ಆಧ್ಯಾತ್ಮಿಕ ಚಿತ್ರಗಳಿಂದ ಅಲಂಕೃತವಾದ ಶಿವ ಸಂದೇಶ ವಾಹನಕ್ಕೆ ಚಾಲನೆ ನೀಡಲಾಯಿತು. 

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಬ್ರಹ್ಮಕುಮಾರಿ ಜಯಶ್ರೀ ಅಕ್ಕನ್ನವರು ಇಡಿ ಜಗತ್ತಿನ ಸರ್ವ ಆತ್ಮ ತಂದೆಯಾದ ಪರಮಾತ್ಮ ಶಿವ ಸಂದೇಶವುಳ್ಳ ವಾಹನದ ಮೂಲಕ ಪ್ರತಿಯೊಂದು ಗ್ರಾಮದ ಮನುಷ್ಯಾತ್ಮರಿಗೆ ವ್ಯಸಗಳಿಂದ ಮುಕ್ತರಾಗುವ ಅಭಿಯಾನ ಅನೇಕ ದುಃಖ, ಅಶಾಂತಿಗಳಿಂದ ದುಃಖಗಳಾಗಿರುವಂತ ಮನುಷ್ಯಾತ್ಮರಿಗೆ ಶಾಂತಿ ಸಂದೇಶ ಅಭಿಯಾನ ಹಾಗೂ ಆದ್ಯಾತ್ಮಿಕ ಭಕ್ತರಿಗೆ ಆತ್ಮ ಪರಮಾತ್ಮರ ಸತ್ಯ ಜ್ಞಾನದ ಸಂದೇಶಗಳನ್ನು ಸಾರುತ್ತ ಇಡಿ ಜಗತ್ತಿನ ಆತ್ಮದ ಕಲ್ಯಾಣ ಮಾಡುವ ಸಂದೇಶವನ್ನು ಸಾರುವ ವಾಹನಕ್ಕೆ ಚಾಲನೆ ನೀಡಿದೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಡಾ. ವಿಶ್ವನಾಥ ತಾಂವಶಿ, ಸಿ. ಡಿ. ಹಾದಿಮನಿ, ಮಾರುತಿ ಪಂಚಕರ, ಬಸಪ್ಪ ಚುಳಕಿ, ಚಂದ್ರು ತೋರಣಗಟ್ಟಿ, ಈರಣ್ಣಾ ಹುಲ್ಲೂರ ಸೇರಿದಂತೆ ಯರಗಟ್ಟಿ, ತಲ್ಲೂರ, ಸತ್ತಿಗೇರಿ, ರೈನಾಪೂರ, ಗ್ರಾಮಗಳ ಸಹೋದರ, ಸಹೋದರಿಯರು ಇದ್ದರು. 


ಸುದ್ದಿ ಓದಿ