ಮಂತ್ರಾಕ್ಷತೆ ಮನೆ ಮನೆಗೆ ಮುಟ್ಟಿಸುವ ಕಾರ್ಯಕ್ರಮಕ್ಕೆ ಚಾಲನೆ
ಶಿಗ್ಗಾವಿ 12: ಪಟ್ಟಣದ ಗ್ರಾಮದೇವತೆ ದ್ಯಾಮವ್ವ ದೇವಸ್ಥಾನದಲ್ಲಿ ವಿರಕ್ತಮಠದ ಸಂಗನಬಸವ ಶ್ರೀಗಳು ಅಯೋಧ್ಯಾಪತಿ ಪ್ರಭು ರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮಮಂದಿರ ಉದ್ಘಾಟನೆ ಆಮಂತ್ರಣ ಪತ್ರಿಕೆ ಹಾಗೂ ಮಂತ್ರಾಕ್ಷತೆ ಮನೆ ಮನೆಗೆ ಮುಟ್ಟಿಸುವ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಲ್ಲ ಹಿಂದೂ ಸಂಘಟನೆಯ ಯುವಕರು ವಾರ್ಡನಲ್ಲಿ ಯುವಕ ಮಿತ್ರರನ್ನು ಸೇರಿಸಿಕೊಂಡು ಮನೆ ಮನೆಗೆ ಮಂತ್ರಾಕ್ಷತೆ ಫೋಟೋ ವಿತರಣೆ, ಆಮಂತ್ರಣ ಪತ್ರಿಕೆ ಮತ್ತು ಮಂತ್ರಾಕ್ಷತೆ ಕೊಡಲಾಯಿತು. ಶ್ರೀರಾಮನ ಅಕ್ಷತೆಯನ್ನು ಮನೆ ಮನೆಗೆ ತಲುಪಿಸಲಾಯಿತು. ಆರ್.ಎಸ್.ಎಸ್. ಮತ್ತು ವಿಶ್ವ ಹಿಂದೂ ಪರಿಷತ್ಎಲ್ಲ ಹಿಂದೂ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಮೇಶ ವನಹಳ್ಳಿ, ಪರುಶರಾಮ ಸೊನ್ನದ, ಮಂಜುನಾಥ ಬ್ಯಾಹಟ್ಟಿ, ಮಹಾದೇವ ಅಡರಕಟ್ಟಿ, ಮಂಜುನಾಥ ಅಸ್ವಾಲೇಕರ, ಶಿವಣ್ಣಾ ಗಂಜೀಗಟ್ಟಿ, ಸೇರಿದಂತೆ ಆರ್.ಎಸ್.ಎಸ್. ಮತ್ತು ವಿಶ್ವ ಹಿಂದೂ ಪರಿಷತ್, ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.