ಯರಗಟ್ಟಿ

ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ: ಪ್ರವಚನ ಮತ್ತು ಆಧ್ಯಾತ್ಮದಿಂದ ಮಾತ್ರ ಶಾಂತಿ

ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ: ಪ್ರವಚನ ಮತ್ತು ಆಧ್ಯಾತ್ಮದಿಂದ ಮಾತ್ರ ಶಾಂತಿ

ಲೋಕದರ್ಶನ ವರದಿ 

ಯರಗಟ್ಟಿ: ಪಟ್ಟಣದ ಮಹಾಂತ ದುರದುಂಡೇಶ್ವರ ಮಠದಲ್ಲಿ 15 ದಿನಗಳ  ಕಾಲ ಆಯೋಜಿಸಿರುವ ಗುಡ್ಡಾಪೂರ ದಾನಮ್ಮನ ಚರಿತ್ರೆ ಪ್ರವಚನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. 


ಗುಡ್ಡಾಪೂರದಿಂದ ಶಿವರಶೆಣೆ ದಾನಮ್ಮದೇವಿ ಜ್ಯೋತಿಯನ್ನು ಭಜನಾ ಮಡಂಡಳ, ಸಕಲ ವಾದ್ಯವೃಂದ, ಆರತಿ, ಕುಂಭಮೇಳಗಳೊಂದಿಗೆ ಭ್ಯವ್ಯ ಮೆರವಣಿಗೆಯ ಮೂಲಕ ಪ್ರಮುಖ ಪಟ್ಟಣದ ಬಿದಿಗಳ ಮುಖಾಂತರ ಶ್ರೀಮಠಕ್ಕೆ ತರಲಾಯಿತು.  


ಈ ಸಂದರ್ಭದಲ್ಲಿ ಮಾತನಾಡಿದ, ಕುಮಾರೇಶ್ವರ ವಿರಕ್ತಮಠದ ಪೂಜ್ಯಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು ಜಗತ್ತಿನಲ್ಲಿ ಎಲ್ಲೆಡೆ ಇಂದು ಅಶಾಂತಿ ತಾಂಡವಾಡುತ್ತಿದೆ. ವಿಶ್ವದಲ್ಲಿ ಶಾಂತಿ ನೆಲೆಸುವುದು ಪ್ರವಚನ ಮತ್ತು ಆಧ್ಯಾತ್ಮದಿಂದ ಮಾತ್ರ. ಆಧ್ಯಾತ್ಮಕ್ಕೆ ಅಂತಹ ಶಕ್ತಿ ಇದೆ ಎಂದರು. 


ಮಾನವನಿಗೆ ಇಂದು ಮೂರು ರೀತಿಯ ತಾಪತ್ರಯಗಳು ಇವೆ. ಅಧಿಭೌತಿಕ ತಾಪತ್ರಯ, ಅಧಿದೈವಿಕ ತಾಪತ್ರಯ ಮತ್ತು ಆಧ್ಯಾತ್ಮಿಕ ತಾಪತ್ರಯ ಎಂದು. ಈ ಎಲ್ಲ ತಾಪತ್ರಯ ತೊಡೆಯುವ ಶಕ್ತಿ ಶ್ರೀಗಳ ಪ್ರವಚನದಲ್ಲಿ ಅಡಗಿದೆ ಎಂದರು. 


ನಂತರ ಮಾನಾಡಿದ ಖ್ಯಾತ ಪ್ರವಚನಕಾರ ಮೃತ್ಯುಂಜಯಸ್ವಾಮಿಗಳು ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್ತಿನಲ್ಲಿ ಎಲ್ಲ ವಿಷಯಗಳು ಚರ್ಚೆಯಾಗುತ್ತವೆ. ಆದರೆ ಅಲ್ಲಿ ಆಧ್ಯಾತ್ಮಿಕ ವಿಷಯ ಕುರಿತು ಚರ್ಚೆಯಾಗುತ್ತಿಲ್ಲ. ಪ್ರವಚನ ಮತ್ತು ಆಧ್ಯಾತ್ಮದ ಚರ್ಚೆಯಾದರೆ ದೇಶಕ್ಕೆ ಉತ್ತಮ. ಮಾನವನು ತನ್ನನ್ನು ತಾನೇ ಸ್ವಯಂ ನಿಯಂತ್ರಣ ಮಾಡಿಕೊಳ್ಳುವುದೇ ನಿಜವಾದ ಪ್ರವಚನ ಮತ್ತು ಆಧ್ಯಾತ್ಮ ಎಂದು ಹೇಳಿದರು. 


ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣೆ ಉಮಾತಾಯಿ ಪೂರ್ವಿಮಠ ವಹಿಸಿದ್ದರು, ಶರಣೆ ಹೇಮಾವತಿ ಹಾದಿಮನಿ, ಮಹಾಂತೇಶ ಜಕಾತಿ, ಕುಮಾರ ಹಿರೇಮಠ, ವಿರುಪಾಕ್ಷ ಮದ್ದಾನಿ, ಎಮ್‌. ಬಿ. ವಾಲಿ, ಎ. ಎಂ. ಹಾದಿಮನಿ, ಬಸವರಾಜ ವಾಲಿ, ಸದಾನಂದ ಹಣಬರ, ತಮ್ಮಣ್ಣಾ ವಾಲಿ, ಶಿವಾನಂದ ಯರಗಣವಿ, ಶಿವಾನಂದ ನಿಜಗುಲಿ, ಎಮ್‌. ಎಸ್‌. ಚೆಟ್ಟಿ, ತಮಣ್ಣಾ ಕಾಮಣ್ಣವರ, ಬಿ. ಆಯ್‌. ಚಿನಗುಡಿ, ಎಮ್‌. ಬಿ. ನಂದಿಮಠ ಶಿವಾನಂದ ಕರ್ಜಗಿಮಠ, ಕುಮಾರ ಜಕಾತಿ, ರಾಜೇಂದ್ರ ವಾಲಿ, ಶರಣೆ ಸುನೀತಾ ಪಾರಾಳಶೆಟ್ಟಿ, ಶರಣೆ ನಿರ್ಮಲಾ ನಿಜಗುಲಿ, ಶರಣೆ ಜಯಶ್ರೀ ಅನಂತಪೂರ, ಶರಣೆ ಶಿಲ್ಪಾ ಹಾದಿಮನಿ, ಶರಣೆ ಪ್ರಭಾವತಿ ವಾಲಿ, ಶರಣೆ ರಾಜೇಶ್ವರಿ ಜಕಾತಿ, ಶರಣೆ ಅಶ್ವಿನಿ ಪಟ್ಟಣಶೆಟ್ಟಿ ಸೇರಿದಂತೆ ಅಕ್ಕನ ಬಳಗದ ಶರಣ ಶರಣೆಯರು ಪಟ್ಟಣದ ಸದ್ಭಕ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ