ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ
ಶಿಗ್ಗಾವಿ 17: ಪಟ್ಟಣದ ಅಂಬೇಡ್ಕರ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 71 ನೇ ಹುಟ್ಟು ಹಬ್ಬದ ಪ್ರಯುಕ್ತ ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿಯವರಿಗೆ ಲಸಿಕೆ ಹಾಕಿಸಿ ತಹಶೀಲ್ದಾರ ಚಾಲನೆ ನೀಡಿದರು.
ತಾಲೂಕ ದಂಡಾಧಿಕಾರಿ ಮಂಜುನಾಥ ಮುನ್ನೋಳ್ಳಿ ಲಸಿಕೆ ಅಭಿಯಾನ ಉದ್ದೇಶಿಸಿ ಮಾತನಾಡಿ ತಾಲೂಕಿನ ಎಲ್ಲ 18 ವರ್ಷ ಮೇಲ್ಪಟ್ಟವರು ಅವರು ಇವರು ಎನ್ನದೇ ಎಲ್ಲರೂ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಂಡು ಕರೋನಾ ಮುಕ್ತರಾಗಿರಿ ಎಂದರು.
ತಾಲೂಕ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ 71 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ವಿಶ್ವದ ನಂಬರ 1 ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬ ಶುಭಾಶಯಗಳನ್ನು ಕೋರಿ ತಾಲೂಕಿನ ಎಲ್ಲ ಸಾರ್ವಜನಿಕರು ಕೊರೋನಾ ಲಸಿಕೆಯನ್ನು ಹಾಕಿಸಿಕೊಂಡು ಉತ್ತಮ ಆರೋಗ್ಯದತ್ತ ಹೆಜ್ಜೆಯನ್ನು ಇಡೋಣ ಹಾಗೂ ನಮ್ಮ ಮುಖ್ಯಮಂತ್ರಿಯವರ ಕನಸಿನ ಕೂಸಾದ ಲಸಿಕಾ ಅಭಿಯಾನ ಕಾರ್ಯಕ್ರಮ ಯಶಸ್ವಿಗೋಳಿಸೋಣ ಎಂದರು.
ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ ಮಾತನಾಡಿ ಮೂರನೇಯ ಅಲೆಯ ಮುಂಜಾಗ್ರತೆಗಾಗಿ ಹಾಗೂ ಕೊರೋನಾ ಬರದ ಹಾಗೇ ತಡೆಗಟ್ಟಲು ಎಲ್ಲರೂ 18 ವರ್ಷ ಮೇಲ್ಪಟ್ಟವರು ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಿರಿ ಎಂದರು.
ತಾಲೂಕ ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ ಮಾತನಾಡಿ ತಾಲೂಕಿನ ಎಲ್ಲ ಯುವ ಭಾಂದವರು ಲಸಿಕೆಯ ಬಗ್ಗೆ ನಿಷ್ಕಾಳಜಿ ಮಾಡದೇ ಲಸಿಕೆ ಹಾಕಿಸಿಕೊಂಡು ಉತ್ತಮ ಆರೋಗ್ಯಕರ ವಾತಾವರಣವನ್ನು ನಿರ್ಮಾಣ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ ಪಿ.ಹೆಚ್, ಪ್ರಭಾರ ತಾಲೂಕ ಆರೋಗ್ಯಾಧಿಕಾರಿ ಡಾ. ಮನೋಜ ನಾಯ್ಕ, ಭಾಜಪ ಪದಾಧಿಕಾರಿಗಳಾದ ವಿನಯ ಮುಂಡಗೋಡ, ಕಾಶೀನಾಥ ಕಳ್ಳೀಮನಿ, ಸಂತೋಷ ದೊಡ್ಡಮನಿ, ಸರೋಜ ಹರಿಜನ, ಮಹ್ಮದಜಾಫರ ಎಂ.ಆಯ್, ಶುಶ್ರೂಷಾ ಅಧಿಕಾರಿಗಳಾದ ಆಸ್ಮಾ, ಚೆನ್ನಮ್ಮ, ರತ್ನಾ, ಸುಮಿತ್ರಾ, ಹುಚ್ಚಮ್ಮಾ, ಶಿಕ್ಷಕ ಬಸವರಾಜ ಸವಡಿ, ಜೆ.ಬಿ.ದೇವರಮನಿ, ಆಶಾ, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.