ಬ್ಯಾಡ್ಗಿ

ದುಡಿಯೋಣ ಬಾ ಕಾರ್ಯಕ್ರಮಕ್ಕೆ ಚಾಲನೆ

ದುಡಿಯೋಣ ಬಾ ಕಾರ್ಯಕ್ರಮಕ್ಕೆ ಚಾಲನೆ

ಬ್ಯಾಡಗಿ 16: ನರೇಗಾ ಯೋಜನೆಯಲ್ಲಿ ವಿವಿಧ ಇಲಾಖೆಗಳ ಮೂಲಕ ರೈತರು ಕೂಲಿ ಕಾರ್ಮಿಕರಿಗೆ ಸಹಕಾರಿಯಾಗುವ ಕಾಮಗಾರಿಗಳಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಲತಾ ತಬರೆಡ್ಡಿ ಮನವಿ ಮಾಡಿಕೊಂಡರು.

ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಂಜಿಎನ್‍ಆರ್‍ಇಜಿ ಯೋಜನೆಯಡಿಯಲ್ಲಿ ದುಡಿಯೋಣ ಬಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಅಭಿವೃದ್ಧಿಯೊಂದಿಗೆ  ಕೃಷಿ ಚಟುವಟಿಕೆಗಳಿಗೆ ನರೇಗಾ ಯೋಜನೆಯಲ್ಲಿ ಅನುದಾನ ಲಭ್ಯವಿದ್ದು, ರೈತರು ತಮ್ಮ ಜಮೀನುಗಳಲ್ಲಿ ರೇμÉ್ಮ ಹಾಗೂ ತೋಟಗಾರಿಕೆ ಬೆಳೆಗಳನ್ನು ಜೊತೆಗೆ  ಕೃಷಿ ಹೊಂಡ, ಬದು ನಿರ್ಮಾಣ ಮತ್ತು ನೀರುಗಾಲುವೆಗಳನ್ನು ನಿರ್ಮಿಸಿಕೊಂಡು ಮಣ್ಣಿನ ಸಂರಕ್ಷಣೆಯನ್ನು ಮಾಡಿಕೊಳ್ಳಬಹುದಲ್ಲದೇ ಆರ್ಥಿಕವಾಗಿ ಸದೃಡತೆಯನ್ನು ಹೊಂದುವಂತೆ ಕರೆ ನೀಡಿದರು.

ಎಂಜಿಎನ್‍ಆರ್‍ಇಜಿ ಸಹಾಯಕ ನಿರ್ದೇಶಕ ಶಾನವಾಜ.ಎ.ಸಿ ಯೋಜನೆಯ ಕುರಿತು ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷೆ ಕಮಲವ್ವ ಕಾಕೋಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ದ್ಯಾಮನಗೌಡ ಪೂಜಾರ, ಸದಸ್ಯರಾದ ಹೇಮಂತ ಶೆಟ್ಟರ, ಹನುಮಂತಪ್ಪ ಮಾಳಗಿ, ಷಣ್ಮುಖ ಮುಚ್ಚಟ್ಟಿ, ಕವಿತಾ ಮುಚ್ಚಟ್ಟಿ, ವೀರನಗೌಡ ಗೌಡ್ರ, ಲಲಿತಾ ರಾಮನಗೌಡ್ರ, ಚಿನ್ನಪ್ಪ ಹೊಸಮನಿ, ನೂರಜಾನ ಬೆನ್ನಳ್ಳಿ, ನೇತ್ರಾವತಿ ದೊಡ್ಡಮನಿ, ಭೀಮವ್ವ ಮುಳಗುಂದ, ಈಶ್ವರ ನೇಶ್ವಿ, ನಾಗೇಶಪ್ಪ ಡಮ್ಮಳ್ಳಿ, ಮಲ್ಲಪ್ಪ ಕಡೆಮನಿ ಬನಶಂಕರಿ ಕೆರೂಡಿ, ಕಾರ್ಯದರ್ಶಿ ಬಸವರಾಜ ವರಗಪ್ಪನವರ, ಉಜ್ಜಪ್ಪ ಹೊಸಗೌಡ್ರ, ರೇಣುಕಾ ತೋಟದ, ಶಿವಾನಂದ ಗಟ್ಟಿಮನಿ, ಮಲ್ಲನಗೌಡ ಸೂರಳಿಹಳ್ಳಿ, ಮುಪ್ಪಣ್ಣ ಹೊಸಗೌಡ್ರ, ರಮೇಶ ಓಲೇಕಾರ, ಶಿವರಾಜ ಹವಳಮ್ಮನವರ, ಬಿದ್ದಾಡೆಪ್ಪ ಬ್ಯಾಡಗಿ, ಸುರೇಶ ಮಾಸಣಗಿ ಇದ್ದರು.

ಸುದ್ದಿ ಓದಿ