ಸಂಗಮೇಶ್ವರ ವಾಯು ಮಾಲಿನ್ಯ ತಪಾಸಣೆ ಕೇಂದ್ರಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಚಾಲನೆ
ಬ್ಯಾಡಗಿ 02: ಸಾರಿಗೆ ಇಲಾಖೆ ಹೊರಡಿಸಿರುವ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಅಧಿಕಾರಿಗಳಿಂದ ದಂಡ ವಸೂಲಿಗೆ ಒಳಗಾಗದಂತೆ ನೋಡಿಕೊಳ್ಳುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ವಾಹನ ಸವಾರರಿಗೆ ಕರೆ ನೀಡಿದರು.
ಪಟ್ಟಣದ ಸ್ಟೇಶನ್ ರಸ್ತೆಯಲ್ಲಿ ನೂತನವಾಗಿ ಆರಂಭವಾದ ಸಂಗಮೇಶ್ವರ ವಾಯು ಮಾಲಿನ್ಯ ತಪಾಸಣೆ ಕೇಂದ್ರ ಶಾಸಕ ವಿರೂಪಾಕ್ಷಪ್ಪ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ನೋಂದಾಯಿತ ವಾಹನಗಳು ರಸ್ತೆಗಿಳಿದ ತಕ್ಷಣವೇ, ರಿಜಿಸ್ಟ್ರೇಶನ್ ಕಾರ್ಡ, (ಆರ್ಸಿ) ಚಾಲನಾ ಪರವಾನಗಿ ಪತ್ರ (ಡಿಎಲ್) ಇನ್ಸೂರೆನ್ಸ್, ವಾಯು ಮಾಲಿನ್ಯ ತಪಾಸಣೆ ಕಾರ್ಡ (ಎಮಿಶನ್ ಟೆಸ್ಟ್ ಸರ್ಟಿಫಿಕೇಟ್) ಹೊಂದಿರಬೇಕು ಒಂದು ವೇಳೆ ಟ್ಯಾಕ್ಸಿ, ಗೂಡ್ಸ್ ಕ್ಯಾರಿಯರ ವಾಹನಗಳಾಗಿದ್ದಲ್ಲಿ ಮೇಲಿನವುಗಳ ಜೊತೆಗೆ ಟ್ಯಾಕ್ಸ್ ತುಂಬಿದ ಪಾವತಿ, ಫಿಟ್ನೆಸ್ ಸರ್ಟಿಫಿಕೇಟ್ಗಳನ್ನು ಕಡ್ಡಾಯವಾಗಿ ಹೊಂದಿರಲೇಬೇಕು ಅಂದಾಗ ಮಾತ್ರ ರಸ್ತೆಗಳ ಮೇಲೆ ವಾಹನ ಸಂಚಾರಕ್ಕೆ ಅನುಮತಿ ಸಿಕ್ಕಂತೆ ಇವುಗಳಲ್ಲಿ ಯಾವುದೇ ಒಂದು ಪತ್ರವಿಲ್ಲದಿದ್ದರೂ ಕಾನೂನಿನ ಪ್ರಕಾರ ನಿಮ್ಮಿಂದ ದಂಡ ವಸೂಲಿ ಮಾಡಬಹುದಾಗಿದೆ ಎಂದರು.
ಕೇಂದ್ರ ಆರಂಭ ಸ್ವಾಗತಾರ್ಹ: ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ವಾಯು ಮಾಲಿನ್ಯ ತಪಾಸಣೆ ಕೇಂದ್ರ ಗಳಿಲ್ಲ, ಇದರಿಂದ ಪಟ್ಟಣದ ಸಾಕಷ್ಟು ಜನರು ಇದಕ್ಕಾಗಿ ಬೇರೊಂದು ಪರಸ್ಥಳಕ್ಕೆ ತೆರಳಬೇಕಾಗಿತ್ತು, ಆದರೆ ಪಟ್ಟಣದಲ್ಲೊಂದು ಇಂತಹದೊಂದು ತಪಾಸಣೆ ಕೇಂದ್ರ ಆರಂಭಿಸುವ ಮೂಲಕ ಮಾಲೀಕರಾದ ಶಿವಾನಂದ ಮಲ್ಲನಗೌಡರ ಹಾಗೂ ದಾನಪ್ಪ ಯಲಿಗಾರ ಅವರ ನಿರ್ಧಾರ ಸ್ವಾಗತಾರ್ಹ ಎಂದ ಅವರು, ಇಲ್ಲಿನ ಜನರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಮುಪ್ಪಿನೇಶ್ವರ ಮಠದ ಚೆನ್ನಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಪ್ರಾಕೃತಿಕ ಸಂಪತ್ತು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮನುಷ್ಯ ಬೇಜವಾಬ್ದಾರಿತನ ತೋರುತ್ತಿದ್ದಾನೆ ಇದರ ಪರಿಣಾಮವಾಗಿ ಮಾರ ಣಾಂತಿಕ ಖಾಯಿಲೆಗಳು ನಮ್ಮನ್ನು ಕಾಡುತ್ತಿವೆ, ಪರಿಸರ ದೇವರಿಗೆ ಸಮಾನವಾದಂತಹ ವಸ್ತುವಾಗಿದ್ದು, ವಾಯು ಮಾಲಿನ್ಯ ತಪಾಸಣೆ ಕೇಂದ್ರದ ವರದಿಯಿಂದ ಅತೀಹೆಚ್ಚು ಹೊಗೆಯುಗುಳುವ ವಾಹನಗಳ ಲೈಸೆನ್ಸ್ ರದ್ದತಿಗೆ ಸಹಕಾರಿಯಾಗಲಿ ಎಂದರು. ಈ ಸಂದರ್ಭದಲ್ಲಿ ಸುರೇಶ ಯತ್ನಳ್ಳಿ, ಅಟಲ್ ವಾಜಪೇಯಿ ಅಂಗಡಿ, ವಿಜಯಕುಮಾರ ಎಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.