ಇಂಡಿ

ಮಳೆ ಬಂದರೆ ಕುಡಿಯುವ ನೀರಿನ ತೊಂದರೆಯಾಗುವದಿಲ್ಲ: ಶಾಸಕ ಪಾಟೀಲ

ಮಳೆ ಬಂದರೆ ಕುಡಿಯುವ ನೀರಿನ ತೊಂದರೆಯಾಗುವದಿಲ್ಲ: ಶಾಸಕ ಪಾಟೀಲ
ಇಂಡಿ: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದರು.

ಇಂಡಿ: ಮಳೆ ಬಂದರೆ ಕುಡಿಯುವ ನೀರಿನ ತೊಂದರೆಯಾಗುವದಿಲ್ಲ. ಮಳೆ ಬರದೇ ಇದ್ದರೆ ತೊಂದರೆಯಾಗದಂತೆ ಕ್ರಮ ಕೈಕೊಳ್ಳಲು ಕೃಷ್ಣಾ ನಿಗಮದ ನೀರಾವರಿ ಅಧಿಕಾರಿ ಮತ್ತು ಜಿ.ಪಂ ಅಧಿಕಾರಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. 

ಅವರು ಮಂಗಳವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತ್ರೈಮಾಸಿಕ ಪ್ರಗತಿ ಪರೀಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.  

ಕೃಷ್ಣಾ ನಿಗಮದ ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ಗಡಬಳ್ಳಿ ಮಾತನಾಡಿ, ಸಂಗೋಗಿ ಕೆರೆಯಲ್ಲಿ ಒಂದು ವಾರ ಸಾಲುವಷ್ಟು ನೀರಿದೆ. ಅದಲ್ಲದೆ ಬಳಗಾನೂರ ಕೆರೆಯಿಂದ ಸಂಗೋಗಿ ಕೆರೆಗೆ ನೀರು ಬಿಟ್ಟಿದ್ದು ಮುಂದಿನ ದಿನಗಳಲ್ಲಿ ನೀರಿನ ತೊಂದರೆಯಾಗುವದಿಲ್ಲ. ಅದಲ್ಲದೆ ಹಂಜಗಿ ಮತ್ತು ಲೋಣಿ ಕೆರೆಗಳಲ್ಲಿ ನೀರಿದೆ ಎಂದರು. 

ಕರ್ನಾಟಕ ರಸ್ತೆ ಸಾರಿಗೆಯವರು ಗ್ರಾಮೀಣ ಪ್ರದೇಶದಿಂದ ಬಸ್ಸುಗಳನ್ನು ಓಡಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಅದಲ್ಲದೆ ರಸ್ತೆ ಕೆಟ್ಟಿದೆ ಎಂದು ತಡವಲಗಾ ಗ್ರಾಮಕ್ಕೆ ಹೋಗುವ ಎಲ್ಲ ಬಸ್ಸುಗಳನ್ನು ಓಡಿಸದೇ ಇರುವದಕ್ಕೆ ತರಾಟೆಗೆ ತೆಗೆದುಕೊಂಡರು. ಸಂಸ್ಥೆ ಇರುವದು ಸಾರ್ವಜನಿಕ ಸೇವೆಗೆ ಇದ್ದ ವ್ಯವಸ್ಥೆಯಲ್ಲಿಯೇ ಸರಿಪಡಿಸಿ ಕೆಲಸ ಮಾಡಲು ತಿಳಿಸಿದರು. ತಾಲೂಕಿನಲ್ಲಿ ರಸ್ತೆಗಳು ಕೆಟ್ಟಿವೆ ಎಂದು ನಾಮ ನಿರ್ದೇಶನ ಸದಸ್ಯೆ ಭೌರಮ್ಮ ಮುಳಜಿ ಆರೋಪಿಸಿದರು. ನಾದ ಕೆಡಿ ಯಿಂದ ಶಿರಶ್ಯಾಡ ರಸ್ತೆ ಕೆಟ್ಟಿದ್ದು ಟಂ ಟಂ ಬಿದ್ದು ಮಗು ಸತ್ತಿದೆ, ಬಸ್ಸು ಕೂಡ ಬಿದ್ದು ಸೇರಿದಂತೆ ಹಲವಾರು ಘಟನೆಗಳಾಗಿವೆ ಎಂದರು.  

ಶಾಸಕರು ರಸ್ತೆ ರಿಪೇರಿಗೆ 25 ಕೋಟಿ ಅನುದಾನ ಬಂದಿದ್ದು ಇದ್ದುದರಲ್ಲಿಯೇ ಸರಕಾರದಿಂದ ಆಗುವ ಕೆಲಸಗಳನ್ನು ಪ್ರಾಮಾಣಿಕವಾಗಿ ಈಡೇರಿಸಬೇಕೆಂದರು. 

ತಡವಲಗಾ ಕಸ್ತೂರಬಾ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವದು. ಈ ರೀತಿ ಆಗಿರುವದು ಎರಡನೆಯ ಬಾರಿ. ಹೀಗಾಗಿ ಈ ರೀತಿ ಆಗಲು ಕಾರಣವೇನು. ಅದರ ವರದಿ ಕೊಡಲು ಕೇಳಿದರು. ಮತ್ತು ವೈದ್ಯರು ವಸತಿನಿಲಯಗಳಿಗೆ ಹೋಗಿ ವಸತಿ ನಿಲಯದ ಮಕ್ಕಳ ಆರೋಗ್ಯದ ಕುರಿತು ನಿಗಾ ವಹಿಸಲು ಕೇಳಿಕೊಂಡರು.  

ಕೃಷಿ, ಹೆಸ್ಕಾಂ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆ ಪ್ರಗತಿ ಕುರಿತು ಚರ್ಚಿಸಲಾಯಿತು.  

ವೇದಿಕೆಯ ಮೇಲೆ ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ, ತಹಸೀಲ್ದಾರ ನಾಗಯ್ಯ ಹಿರೇಮಠ, ಇಓ ಸುನೀಲ ಮದ್ದಿನ, ಕೆಡಿಪಿ ನಾಮ ನಿರ್ದೇಶಕ ಸದಸ್ಯರಾದ ಭೌರಮ್ಮ ಮುಳಜಿ, ಆದೃಶಪ್ಪ ವಲಿ, ಹಣಮಂತ ಚಾಬುಕಸವರ ಮದ್ದೀನ ಇದ್ದರು. 

ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ, ಟಿಎಚ್‌ಓ ಅರ್ಚನಾ ಕುಲಕರ್ಣಿ, ಸಿಪಿಐ ರಾಜಶೇಖರ ಬಡೆದೇಸಾರ, ಆರ್‌.ಎಸ್‌. ರುದ್ರವಾಡಿ, ಆರ್‌.ಎಸ್‌. ಮೆಂಡೆದಾರ, ಎಸ್‌.ಓ. ಬಿರಾದಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.  


ಸುದ್ದಿ ಓದಿ