ಬತ್ತಿದ ಕೃಷ್ಣಾನದಿ: ಇಂಗಳಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ
ಮಾಂಜರಿ 27: ಮುಂಗಾರು ಮಳೆ ಕೈಕೊಟ್ಟಿದರಿಂದ ಎಲ್ಲೆಡೆಯೂ ಬರದ ಛಾಯೆ ನಿರ್ಮಾಣವಾಗಿದೆ. ಇತ್ತ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಕೃಷ್ಣಾನದಿಯು ಬತ್ತಿ ಹೋಗಿದ್ದು ನೀರಿಗಾಗಿ ಹಾಹಾಕಾರ ಉಂಟಾಗಿದೆ.
ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟಿದರಿಂದ ಕೃಷ್ಣಾನದಿಯು ಬತ್ತಿಹೋಗಿದ್ದು, ಜನಜಾನುವಾರುಗಳಿಗೆ, ಬೆಳೆಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ನದಿಯಲ್ಲಿನ ನೀರು ಸಂಪೂರ್ಣವಾಗಿ ಖಾಲಿಯಾಗಿದೆ. ರೈತರು ಅಲ್ಪ ಸ್ವಲ್ಪ ಉಳಿದಂತಹ ನೀರಿನಲ್ಲಿ ತಗ್ಗು, ಗುಂಡಿಗಳನ್ನು ಅಗೆದು ಮೋಟಾರ ಪಂಪಸೇಟ್ ಗಳ ಮೂಲಕ ಕುಡಿಯುವುದಕ್ಕೆ, ಬೆಳೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಇದು ಸಹ ಒಂದೆರಡು ದಿನಗಳಲ್ಲಿ ನೀರು ಖಾಲಿಯಾಗುತ್ತೆ. ಮುಂದೆ ನಮ್ಮ ಗತಿ ಎನೂ ಎಂಬುದು ರೈತರಲ್ಲಿ ಆತಂಕವನ್ನು ಸೃಷ್ಠಿಸಿದೆ. ಸಾಲಸೂಲ ಮಾಡಿ ಬೆಳೆಯನ್ನು ಬೆಳೆದಿದೇವೆ. ನೀರು ಇಲ್ಲದೆ ಬೆಳೆಗಳು ಒಣಗಲು ಪ್ರಾರಂಭಿಸಿದೆ. ಅದಕ್ಕಾಗಿ ಕೂಡಲೇ ಕೃಷ್ಣಾನದಿಗೆ ನೀರು ಹರಿಸಬೇಕೆಂದು ರೈತರು ಮನವಿಯನ್ನು ಮಾಡಿಕೊಂಡಿದ್ದಾರೆ.
ಈ ವರ್ಷ ಅಕಾಲಿಕ ಮತ್ತು ಮುಂಗಾರುಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಕೃಷ್ಣಾ ನದಿ ನೀರು ಸಂಪೂರ್ಣವಾಗಿ ಖಾಲಿಯಾಗಿದೆ. ಇದರಿಂದ ಲಕ್ಷಾಂತರ ರೂ. ಖರ್ಚು ಮಾಡಿ ಕಬ್ಬು ಬೆಳೆದಿದ್ದೇವೆ. ಆದರೆ ಈ ವರ್ಷ ನೀರಿನ ಅಭಾವದಿಂದ ಬೆಳೆದು ಕಬ್ಬು ಬಿಸಿಲಿನ ತಾಪಕ್ಕೆ ಒಣಗಿ ಹೋಗಿದೆ. ಆದ್ದರಿಂದ ರಾಜ್ಯ ಸರ್ಕಾರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತೇವೆ
ರಮೇಶ್ ಮಾನೆ ಪ್ರಗತಿಪರ ರೈತ ಇಂಗಳಿ