ಧಾರವಾಡ - ಹುಬ್ಬಳ್ಳಿ

ಡಾ. ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರ'' ಪ್ರದಾನ

ಡಾ. ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರ'' ಪ್ರದಾನ


ಧಾರವಾಡ :  ಜೀವನದ ನೈಜತೆ, ವಾಸ್ತವಿಕತೆ ವಚನಗಳಲ್ಲಿವೆ, ಅವು ಮನುಷ್ಯನ ಸತ್ಯಶುದ್ಧ ಕಾಯಕ, ನಡೆನುಡಿಗಳ ಅನುಭಾವ. ಹನ್ನೆರಡನೆಯ ಶತಮಾನದ ಶರಣರ ಆಶಯಗಳನ್ನು ಶಾಸ್ತ್ರೀಯ ರೂಪದಲ್ಲಿ ರಾಗಕ್ಕೆ ಅಳವಡಿಸಿ ಹಾಡುವುದು ತುಂಬಾ ಕಷ್ಟ, ಸಂಗೀತ ಸಾಗರವಿದ್ದಂತೆ. ಬಸವನಾಡಿನ ಕಲಬುರಗಿಯ ಕುಮಾರಿ ಮಾಲಾಶ್ರೀ ಕಣವಿ ಅತ್ಯಂತ ಮಧುರತೆಯಿಂದ ಸಂಗೀತಮಯವಾಗಿ, ವಚನಗಳನ್ನು ತಮ್ಮ ಸುಮಧುರ ಸಿರಿಕಂಠದಿಂದ ಹಾಡುತ್ತಾ ಶ್ರೇಷ್ಠ ಸಂಗೀತಗಾರರಾಗಿ ಹೊರಹೊಮ್ಮುತ್ತಿರುವುದು ಸಂತೋಷ ಹಾಗೂ ಹೆಮ್ಮೆಯ ವಿಷಯವಾಗಿದೆ. ವಚನಗಳು ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಮತ್ತು ಜನಸಾಮಾನ್ಯರ ಸಚ್ಚಾರಿತ್ರ್ಯ ನಿಮರ್ಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಖ್ಯಾತ ಹಿಂದುಸ್ತಾನಿ ಸಂಗೀತಗಾರ ಪಂ. ಡಾ. ಮೃತ್ಯುಂಜಯ ಶೆಟ್ಟರ ಹೇಳಿದರು. ಅವರು ಕನರ್ಾಟಕ ವಿದ್ಯಾವರ್ಧಕ ಸಂಘವು, ಡಾ. ನಂದಾ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ ``ಡಾ. ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರ-2018'' ಪ್ರದಾನ ಸಮಾರಂಭ ಹಾಗೂ `ಜಾನಪದ ಸಂಗೀತ' ಉಪನ್ಯಾಸ ಕಾರ್ಯಕ್ರಮದಲ್ಲಿ ಕಲಬುರಗಿಯ ಕುಮಾರಿ ಮಾಲಾಶ್ರೀ ಕಣವಿ ಅವರಿಗೆ ``ವಚನ ಸಂಗೀತ ಪುರಸ್ಕಾರ-2018'' ಪ್ರದಾನ ಮಾಡಿ ಮಾತನಾಡುತ್ತಿದ್ದರು. 

ಮುಂದುವರೆದು ಮಾತನಾಡಿದ ಡಾ. ಶೆಟ್ಟರ, ಕಲಬುರಗಿ ಆಕಾಶವಾಣಿಯ ಕಲಾವಿದ ಫಕ್ಕೀರೇಶ ಕಣವಿಯವರ ಪುತ್ರಿಯಾದ ಇವರು ಸಂಗೀತ ಮನೆತನದ ಆನುವಂಶಿಕತೆಯ ಮುಂದುವರಿಕೆ ಭಾಗವಾಗಿ ಹಾಗೂ ಸತತ ಪರಿಶ್ರಮದಿಂದ ಮಾಲಾಶ್ರೀ ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ``ಡಾ. ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರ-2018'' ಕ್ಕೆ ಭಾಜನರಾದ ಇವರನ್ನು ದತ್ತಿದಾನಿಗಳು ಹಾಗೂ ಕನರ್ಾಟಕ ವಿದ್ಯಾವರ್ಧಕ ಸಂಘವು ಆಯ್ಕೆ ಮಾಡಿದ್ದು ಶ್ಲಾಘನೀಯ ಹಾಗೂ ಸೂಕ್ತವಾಗಿದೆ. ಇದು ನನಗೆ ಸಂತೋಷವನ್ನುಂಟುಮಾಡಿದೆ ಎಂದರು. 

  ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಜಾನಪದ ವಿದ್ವಾಂಸ ಡಾ. ಶ್ರೀಶೈಲ ಹುದ್ದಾರ `ಜಾನಪದ ಸಂಗೀತ' ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡುತ್ತ, ಜನಪದ ಸಂಪತ್ತಿನಿಂದ ಕೂಡಿದ ಕಣಜವಾಗಿದೆ. ಆದರೆ ಜನಪದರ ಬದುಕು ಇಂದು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಭೂಮಿ ಮೊದಲು ರೈತನದಾಗಿತ್ತು, ಈಗ ಅದು ಭೂಗಳ್ಳರ ಕೈಯಲ್ಲಿ ಸಿಕ್ಕು ಒದ್ದಾಡುತ್ತಿದೆ. ದಣಿವು, ಶ್ರಮ ಕಳೆದುಕೊಳ್ಳಲು, ಮನರಂಜನೆ ಸೇರಿದಂತೆ ಹಲವಾರು ಬಗೆಯ ಜನಪದ ಇದ್ದದ್ದನ್ನು ಈ ದೇಶದ ಲೋಕಗೀತೆಗಳಲ್ಲಿ ಕಾಣುತ್ತೇವೆ. ಹಾಡು ಒಡಲಿನ ತಾಪವಾಗಿರಬೇಕು ಮತ್ತು ಸರಳವಾಗಿರಬೇಕು ಎಂದು ಹೇಳುತ್ತಾ, ``ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ, ಎಳ್ಳು, ಜೀರಿಗೆ ಬೆಳೆಯುವ ಭೂಮಿ ತಾಯಿನ ಎದ್ದೊಂದು ಘಳಿಗೆ ನೆನೆದೆನ''..... ಶರೀಫರ `ಅಳಬೇಡ ತಂಗಿ ಅಳಬೇಡ'.... ಸೇರಿದಂತೆ ಅನೇಕ ಜನಪದ ಹಾಡುಗಳ ಮೂಲಕ ಚಿಂತನೆಗೊಳಪಡಿಸಿ, ಅರ್ಥಪೂರ್ಣವಾಗಿ, ಸ್ವಾರಸ್ಯಕರವಾಗಿ ಉಪನ್ಯಾಸ ನೀಡಿ ನೆರೆದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದ್ದು ವಿಶೇಷವಾಗಿತ್ತು. 

``ಡಾ. ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರ-2018'' ಸ್ವೀಕರಿಸಿ ಅನಿಸಿಕೆ ಹಂಚಿಕೊಂಡ           ಕು. ಮಾಲಾಶ್ರೀ ಕಣವಿ, ಸಂಗೀತದ ತವರೂರಾದ ಧಾರವಾಡ, ಪ್ರತಿಷ್ಠಿತ ಸಂಸ್ಥೆಯಾದ ಕನರ್ಾಟಕ ವಿದ್ಯಾವರ್ಧಕ ಸಂಘವು ಕೊಡಮಾಡಿದ ಈ ಪುರಸ್ಕಾರ ನನಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆ ತಂದಿದೆ. ಇದರಿಂದ ನನಗೆ ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಪ್ರೋತ್ಸಾಹ ಹಾಗೂ ಉತ್ತೇಜನ ದೊರೆತಂತಾಗಿದೆ ಎಂದು ಹೇಳಿ, ಡಾ. ನಂದಾ ಪಾಟೀಲ ದಂಪತಿಗಳಿಗೆ ಹಾಗೂ ಸಂಘಕ್ಕೆ ತಮ್ಮ ಮನಪೂರ್ವಕ ಕೃತಜ್ಞತೆ ಸಲ್ಲಿಸಿ, ಅತ್ಯಂತ ಸೊಗಸಾಗಿ ತಮ್ಮ ಸುಮಧುರ ಕಂಠದಿಂದ ಸಂಗೀತ ಕಛೇರಿಯನ್ನು ನಡೆಸಿಕೊಟ್ಟು ಸಂಗೀತಾಸಕ್ತರ ಮನಗೆದ್ದರು. ಇವರಿಗೆ ಪಂಚಾಕ್ಷರಿ ಕಣವಿ ತಬಲಾ ಹಾಗೂ ಪರಶುರಾಮ ಕಟ್ಟಿಸಂಗಾವಿ, ಕಲಬುರಗಿ ಹಾಮರ್ೋನಿಯಂ ಸಾಥ್ ನೀಡಿದರು.

ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಡಾ. ನಂದಾ ಪಾಟೀಲ ತಮ್ಮ ಬಾಲ್ಯದಿಂದಲೇ ಸಂಗೀತ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿಕೊಂಡು ಹೆಮ್ಮೆರವಾಗಿ ಬೆಳೆದು ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು, ಅವರ ಹೆಸರಿನಲ್ಲಿ ಕೊಡಮಾಡುತ್ತಿರುವ ಈ ಪುರಸ್ಕಾರ ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ನೀಡಿ, ಅವರನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಪ್ರದಾನ ಪಾತ್ರ ವಹಿಸುತ್ತಿದೆ ಎಂದರು. 

  ವೇದಿಕೆಯಲ್ಲಿ ಖ್ಯಾತ ಹಿಂದುಸ್ತಾನಿ ಗಾಯಕಿ ಡಾ. ನಂದಾ ಪಾಟೀಲ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ದತ್ತಿದಾನಿ ಡಾ. ಮಲ್ಲಿಕಾಜರ್ುನ ಪಾಟೀಲ ಮಾತನಾಡಿ, ದತ್ತಿ ಆಶಯ ಹಂಚಿಕೊಂಡರು. ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಸ್ವಾಗತಿಸಿದರು. ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಅತಿಥಿಗಳನ್ನು ಗೌರವಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಅಗಸ್ಟ್ ತಿಂಗಳ ದತ್ತಿ ಕಾರ್ಯಕ್ರಮಗಳ ಸಂಯೋಜಕರಾದ ಶಿವಾನಂದ ಭಾವಿಕಟ್ಟಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಂಘದ ಕಾ.ಕಾ.ಸಮಿತಿ ಸದಸ್ಯ ಬಸವಪ್ರಭು ಹೊಸಕೇರಿ, ಎಸ್. ಬಿ. ಗಾಮನಗಟ್ಟಿ ಹಾಗೂ ಸಿ. ಎಸ್. ಪಾಟೀಲ, ಸಿ. ಎಂ. ಕುಂದಗೋಳ, ಶಶಿಧರ ಪಾಟೀಲ, ಡಾ. ಎನ್. ಆರ್. ಬಾಳಿಕಾಯಿ,  ಡಾ. ಆರ್. ಬಿ. ಚಿಲುಮಿ, ವೀರಣ್ಣ ಒಡ್ಡೀನ, ಸಿ. ಬಿ. ಹೊಸಕೋಟಿ, ಕುಮಾರೇಶ್ವರ ಹಿರೇಮಠ, ಲೋಕಮಾನ್ಯ ರಾಮದತ್ತ, ಎಂ. ಬಿ.  ಹೆಗ್ಗೇರಿ, ಅವರಾದಿ ಹಾಗೂ ಸಂಗೀತಗಾರರು, ಕಲಾವಿದರು, ವಿದ್ಯಾಥರ್ಿಗಳು, ಪಾಟೀಲ ಪರಿವಾರದವರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.


ಸುದ್ದಿ ಓದಿ