ಶಿಕ್ಷಣವಂತರಾದರೆ ಸಮಾಜದಲ್ಲಿ ಶಕ್ತಿವಂತರಾಗಬಹುದು: ದುಂಡಿಗೌಡ್ರ
ಶಿಗ್ಗಾವಿ 16: ಪಟ್ಟಣದ ಮಾರುತಿ ನಗರದಲ್ಲಿರುವ ದುರಗಮುರಗೇರ ಜನಾಂಗವನ್ನು ನೋಡಿದರೆ ಸ್ವಾಂತಂತ್ರ ಯಾರಿಗೆ ಸಿಕ್ಕಿದೆ ಎಂದು ತಿಳಿಯದಾಗಿದೆ, 20 ವರ್ಷಗಳಿಂದ ವಾಸವಾಗಿರುವ ಅವರಿಗೆ ಕೂಡಲೇ ಶಾಶ್ವತ ಕಟ್ಟಡದ ವ್ಯವಸ್ಥೆಯನ್ನು ತಾಲೂಕಾ ಆಡಳಿತ ಮತ್ತು ಚುನಾಯಿತ ಪ್ರತಿನಿಧಿಗಳು ಮಾಡಬೇಕು ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಪಟ್ಟಣದ ಮಾರುತಿ ನಗರದಲ್ಲಿರುವ ದುರಗಮುರಗೇರರವರ ಕಾಲೋನಿಯಲ್ಲಿ ಎ,ಆಯ್,ಟಿ,ಸಿ.ಯು,ಸಿ ತಾಲೂಕಾ ಘಟಕದ ವತಿಯಿಂದ ಡಾ ಬಿ ಆರ್ ಅಂಬೇಡ್ಕರ ಜಯಂತಿ ಅಂಗವಾಗಿ ಹೊದಿಕೆ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣವೇ ಶಕ್ತಿ, ಶಿಕ್ಷಣವಂತರಾದರೆ ಸಮಾಜದಲ್ಲಿ ಶಕ್ತಿವಂತರಾಗಬಹುದು, ಆರ್ಥಿಕ ಗುಲಾಮಗಿರಿಯಿಂದ ಪಾರಾಗಬಹುದು ಇಲ್ಲವಾದರೆ ಗುಲಾಮರಾಗಿಯಲ್ಲಿಯೇ ಬದುಕಬೇಕಾಗುತ್ತದೆ. ಅಂಬೇಡ್ಕರ ಅವರು, ಅಸ್ಪೃಶತೆ, ಮೆಲು ಕೀಳು, ಅಸ್ಪಷ್ಟತೆ, ಆರ್ಥಿಕ ಹಿಂದೂಳಿಕೆ ಇವುಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸಂವಿಧಾನ ರಚಿಸಿದವರು, ಪ್ರಪಂಚದಲ್ಲಿ ದೊಡ್ಡ ಶಕ್ತಿ ಎಲ್ಲರಿಗೂ ನ್ಯಾಯ ಒದಗಿಸುವ ಶಕ್ತಿ ಸಂವಿಧಾನ ಎಂದರು.
ನ್ಯಾಯವಾದಿ ಬಸವರಾಜ ಜಕ್ಕನಕಟ್ಟಿ ಮಾತನಾಡಿ ಇಂದು ಅಂಬೇಡ್ಕರರ ಜಯಂತಿಯನ್ನು ಪೋಟೊಗಳಿಗೆ ಮಾತ್ರ ಸಿಮಿತಗೊಳಿಸಲಾಗಿದೆ, ಅಂಬೇಡ್ಕರ ಅವರ ತತ್ವಾಧರ್ಶಗಳನ್ನು ನಾವು ಮರೆಯತ್ತಿದ್ದೆವೆ, ಇಂದು ರಾಜಕಾರಣದ ಅರಾಜಕಥೆ ನಡೆದಿದೆ, ಸರ್ಕಾರದವರು ದಲಿತ ಸಮೂದಾಯವನ್ನು ಕಡೆಗಣಿಸಬಾರದು ಎಂದರು,
ಮಾಜಿ ಎಪಿಎಮ್ಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ ಮಾತನಾಡಿ, ಅಂಬೇಡ್ಕರವರು ಹಕ್ಕು ಮತ್ತು ಕರ್ತವ್ಯಗಳನ್ನು ಚಲಾಯಿಸೋಣ, ಈ ವಸತಿ ರಹಿತ ಜನಾಂಗಕ್ಕೆ ವಸತಿ ಸೌಲಭ್ಯ ಕಲ್ಪಿಸಬೇಕು, ಇಂದು ಹೋರಾಟದಿಂದಲೇ ಎಲ್ಲ ಸೌಮಭ್ಯಗಳನ್ನು ಪಡೆಯುವ ಅನಿವಾರ್ಯತೆ ಉಂಟಾಗಿದೆ ಎಂದರು.
ಕಾರ್ಯಕ್ರಮಲ್ಲಿ ದುರಗಮುರಗೇರ ಕಾಲೋನಿಯ ಎಲ್ಲ ಕುಟುಂಬಗಳಿಗೆ ಹೊದಿಕೆಗಳನ್ನು ಸಂಘಟನೆಯ ವತಿಯಿಂದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎ,ಆಯ್,ಟಿ,ಸಿ.ಯು,ಸಿಯ ತಾಲೂಕಾ ಸಂಚಾಲಕ ಅಶೋಕ ಕಾಳೆ, ಜೀವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ಮುಖಂಡರಾದ ಹನಂತಪ್ಪ ಬಾರಕೇರ, ಹನಮಂತಪ್ಪ ವಾಲಿಕಾರ, ಪಕ್ಕಿರಪ್ಪ ಇರಗಾಣಿ, ಮಂಜಪ್ಪ ಇರಗಾಣಿ, ಶಿವಪ್ಪ ಇರಗಾಣಿ, ನಾಗಪ್ಪ ಗುಜಲೊರ, ನಾಗಮ್ಮ ವಾಲ್ಮೀಕಿ, ಫಕ್ಕಿರವ್ವ ಇರಗಣಿ, ಯಲ್ಲವ್ವ ಯಮ್ಮಿಯವರ ಸೇರಿದಂತೆ ಇತರರು ಇದ್ದರು.