ಡಾ. ವಿರೇಂದ್ರ ಹೆಗಡೆ ಅವರ ಸೇವಾ ಕಾರ್ಯ ಅನುಕರಣೀಯ: ಶಾಸಕ ಕೌಜಲಗಿ
ಬೈಲಹೊಂಗಲ: ಸಮಾಜದ ಸ್ವಾಸ್ಥ್ಯೆ ಕಾಪಾಡುವ ಉದ್ದೇಶದಿಂದ ಸುಮಾರು 40 ವರ್ಷಗಳಿಂದ ಸಮಾಜದಲ್ಲಿ ನಿರಂತರವಾಗಿ ಹಲವು ಯೋಜನೆಗಳನ್ನು ರೂಪಿಸಿ ಆ ಮೂಲಕ ಪ್ರತಿಯೊಬ್ಬರ ಬದುಕಿನ ಯಶಸ್ಸಿಗೆ ಪ್ರಯತ್ನಿಸುತ್ತಿರುವ ಡಾ. ವಿರೇಂದ್ರ ಹೆಗಡೆ ಅವರ ಸೇವಾ ಕಾರ್ಯ ಅನುಕರಣೀಯವಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಶ್ರೀರಾಮ ನಗರ ವಲಯದ ಸ್ವಸಹಾಯ ಪ್ರಗತಿ ಬಂಧು ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಗುರುವಾರ ಜರುಗಿದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜಾ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಯೋಜನೆ ಇಡೀ ಮಹಿಳೆಯರಲ್ಲಿ ಬದಲಾವಣೆ ತಂದು ಸ್ವಾವಲಂಭಿ ಬದುಕು ನೀಡುವದರೊಂದಿಗೆ ಯೋಜನೆಗಳನ್ನು ಸಾರ್ಥಕಪಡಿಸುತ್ತಿದೆ ಎಂದರು.
ಸಾನಿಧ್ಯ ವಹಿಸಿದ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಮಾತನಾಡಿ, ಯೋಜನೆ ಪ್ರಾರಂಭವಾದಾಗಿನಿಂದ ಆರ್ಥಿಕ ಪ್ರಗತಿಗೆ ಮಾತ್ರ ಸೀಮೀತವಾಗಿರದೇ ಸಂಸ್ಥೆಯ ಮೂಲಕ ಪೂಜೆ, ಪ್ರಾರ್ಥನೆ, ಧಾರ್ಮಿಕ ಕಾರ್ಯಗಳನ್ನು ಅನುಷ್ಠಾನಗೊಳಿಸಿ ಜನರನ್ನು ಅಧ್ಯಾತ್ಮದತ್ತ ಸೆಳೆಯುತ್ತಿರುವದು ಮೆಚ್ಚುವಂತಾಗಿದೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಜನೆಗಳು ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಲಿ ಎಂದು ಆಶೀಸಿದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ಪುರಸಭೆ ಸದಸ್ಯರಾದ ಬಸವರಾಜ ಜನ್ಮಟ್ಟಿ, ಅಂಬಿಕಾ ಕೊಟಬಾಗಿ, ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆಯ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ನಿರ್ದೇಶಕಿ ಅನಿತಾ ಮೆಟಗುಡ್ಡ, ಜನಜಾಗೃತಿ ಸಮೀತಿಯ ಜಿಲ್ಲಾ ಮಾಜಿ ಅಧ್ಯಕ್ಷ ವಿಠ್ಠಲ ಪಿಸೆ, ಸಂಸ್ಥೆಯ ತಾಲೂಕಾ ಯೋಜನಾಧಿಕಾರಿ ಎಂ.ವಿಜಯಕುಮಾರ ವೇದಿಕೆ ಮೇಲಿದ್ದರು. ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು, ಮೇಲ್ವಚಾರಕರು, ವಿವಿಧ ಸಂಘಗಳ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಭಕ್ತರು ಪಾಲ್ಗೊಂಡಿದ್ದರು.
ಸಂಸ್ಥೆಯ ಮೇಲ್ವಚಾರಕಿ ಅನ್ನಪೂರ್ಣ ನವಲಗುಂದ ಸ್ವಾಗತಿಸಿದರು. ವಿದ್ಯಾ ನರಸಣ್ಣವರ ನಿರೂಪಿಸಿದರು. ಮೇಲ್ವಚಾರಕ ಲಕ್ಷ್ಮೀಶ ಎನ್ ವಂದಿಸಿದರು. ವೇ.ಮೂ.ಶಕ್ತಿಪ್ರಸಾದ ಹುಲಮನಿ ಸಂಗಡಿಗರಿಂದ ಶ್ರೀ ಸತ್ಯ ನಾರಾಯಣ ಪೂಜಾ ವಿಧಿ ವಿಧಾನಗಳು ನೆರವೇರಿದವು. ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು. ಸ್ವ ಉದ್ಯೋಗ ಕೈಗೊಳ್ಳುವ ಫಲಾನುಭವಿಗಳಿಗೆ ಪ್ರಗತಿ ನಿಧಿ ಚೆಕ್ನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.