ಡಾ.ಸೊಲಭಕ್ಕನವರ ಕೊಡುಗೆ ಮಾರ್ಗದರ್ಶಿಯಾಗಿದೆ: ಬಸಾಪೂರ
ಶಿಗ್ಗಾವಿ 23: ಬಯಲಾಟ ರಂಗಭೂಮಿಗೆ ಡಾ.ಟಿ.ಬಿ.ಸೊಲಭಕ್ಕನವರ ಸಲ್ಲಿಸಿದ ಅನ್ಯನ್ಯ ಕೊಡುಗೆ ನಮಗೆ ಮಾರ್ಗದರ್ಶಿಯಾಗಿದೆ ಎಂದು ಭಯಲಾಟ ಅಕಾಡೆಮಿ ಅಧ್ಯಕ್ಷ ಅಜೀತ ಬಸಾಪೂರ ಹೇಳಿದರು.
ತಾಲೂಕಿನ ಗೋಟಗೋಡಿಯ ಶಿಲ್ಪಾ ಕಲಾ ಕುಟೀರ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಉತ್ತರ ಕರ್ನಾಟಕದ ಗಟ್ಟಿ ಕಲೆ ದೊಡ್ಡಾಟವನ್ನು ಉತ್ತುಂಗಕ್ಕೆ ಕೊಂಡಯ್ದ ಸೊಲಭಕ್ಕನವರ ಅವರು ತಮ್ಮ ಇಡೀ ಜೀವನವನ್ನು ದೊಡ್ಡಾಟಕ್ಕೆ ಮೀಸಲಿಟ್ಟವರು, ದೊಡ್ಡಾಟದ ಉಳಿವಿಗೆ ಟ್ರಸ್ಟ ಮೂಲಕ ಶ್ರಮೀಸಿದವರು ದೊಡ್ಡಾಟ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾಗಿದ್ದ ವೇಳೆ ದೊಡ್ಡಾಟ ಕುಣಿತ, ವೇಷಭೂಷಣ, ರಾಗ, ಶೈಲಿ, ಪ್ರದರ್ಶನ ಕುರಿತು ದಾಖಲೀಕರಣಕ್ಕೆ ಮುಂದಾಗಿದ್ದರು. ಈ ಹಿನ್ನಲೆಯಲ್ಲಿ ಅವರು ರೂಪಿಸಿದ ವಿನೂತನ ಚಿಂತನೆಗಳು ನಮಗೆ ಸದಾ ಮುನ್ನಡೆಸಬಲ್ಲವು ಎಂದರು.
ಈ ಸಂದರ್ಭದಲ್ಲಿ ಡಾ.ಟಿ.ಬಿ.ಸೊಲಭಕ್ಕನವರ ದೇಗುಲಕ್ಕೆ ವಿಶೇಷ ಗೌರವ ಅರ್ಿಸಲಾಯಿತು. ಸಾವಿತ್ರೆಮ್ಮ ಸೊಲಭಕ್ಕನವರ, ರಾಜಹರ್ಷ ಸೊಲಭಕ್ಕನವರ, ಜಯಶ್ರೀ ಸೊಲಭಕ್ಕನವರ, ನಿಂಗಪ್ಪ ಗುಡಗೇರಿ, ಸುನೀಲ ಕಾಳೆ, ಗುರುಪಾದ ಹರಿಜನ, ಶಾಂತಪ್ಪ ಬಾಘೇವಾಡಿ, ಗಂಗಾಧರ ಕೆಂಚಣ್ಣವರ ಉಪಸ್ಥಿತರಿದ್ದರು.