ರಾಣೆಬೆನ್ನೂರ

ಡಾ.ಸಾಲಿಮಠರಿಗೆ "ಸಾಹಿತ್ಯ ಸಿರಿ" ಪ್ರಶಸ್ತಿ

ಡಾ.ಸಾಲಿಮಠರಿಗೆ "ಸಾಹಿತ್ಯ ಸಿರಿ" ಪ್ರಶಸ್ತಿ

ಲೋಕದರ್ಶನವರದಿ

ಹಾವೇರಿ: ನಗರದ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ, ಯುವ ಸಾಹಿತಿ, ಚಿಂತಕ ಡಾ. ಗುರುಪಾದಯ್ಯ ವೀ. ಸಾಲಿಮಠರಿಗೆ ಬಾಳೆಹೊನ್ನೂರು ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ಕಿರಿವಯದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಅಮೂಲ್ಯ ಸಾಧನಾ ಸೇವೆಯನ್ನು ಪರಿಗಣಿಸಿ ದಾವಣಗೆರೆ ಮಹಾನಗರದಲ್ಲಿ ಜರುಗಿದ 2019 ನೇ ಸಾಲಿನ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ರಂಭಾಪುರಿ ಡಾ|| ವೀರಸೋಮೇಶ್ವರ ಜಗದ್ಗುರುಗಳವರು ಪರಮಗುರು ಕೃಪಾವಲಂಬಿತರು, ಸಾಹಿತ್ಯ ರಚನಾ ಸಂವರ್ಧಕರು, ಸತ್ಯಶುದ್ಧ ಸಂಸ್ಕೃತಿ ಸಂಸ್ಕಾರೋಜ್ವಲನಾಶೀಲರು, ಧರ್ಮ-ಸಮಾಜ ಸೇವಾಕಾರ್ಯ ಕ್ರಿಯಾವರ್ಧಕರಾಗಿರುವ ಜಿಲ್ಲೆಯ ಸವಣೂರಿನ ಡಾ|| ಗುರುಪಾದಯ್ಯ ಸಾಲಿಮಠರ ಕ್ರಿಯಾಶ್ರಮಶೀಲತೆ, ಸದಾಚಾರನಿಷ್ಠತೆ, ಸಾಹಿತ್ಯಶೀಲತೆ ಸದಾ ಸನ್ಮಂಗಳದಾಯಕವಾಗಿರಲೆಂದು "ಸಾಹಿತ್ಯ ಸಿರಿ" ಎಂಬ ಪ್ರಶಸ್ತಿಯನ್ನು ಅನುಗ್ರಹಿಸಿ ಆಶೀರ್ವದಿಸಿದರು. 

       ಕನರ್ಾಟಕ ಸಕರ್ಾರದ ಗಣಿ ಮತ್ತು ಭೂ ವಿಜ್ಞಾನ ಮತ್ತು ಅರಣ್ಯ ಖಾತೆ ಸಚಿವ ಸಿ. ಸಿ. ಪಾಟೀಲ್, ದಾವಣಗೆರೆ ಸಂಸದ ಜಿ. ಎಮ್. ಸಿದ್ಧೇಶ್ವರ, ಶಾಸಕ ಎಸ್. ಎ. ರವೀಂದ್ರನಾಥ, ಮಾಜಿ ವಿಧಾನ ಪರಿಷತ್ ಸದಸ್ಯ ಡಾ|| ಎ. ಹೆಚ್. ಶಿವಯೋಗಿಸ್ವಾಮಿ, ಹೆಚ್. ಆನಂದಪ್ಪ, ಸಮಿತಿ ಕಾಯರ್ಾಧ್ಯಕ್ಷ ದೇವರಮನೆ ಶಿವಕುಮಾರ್, ಬೆಂಗಳೂರಿನ ಹಿರಿಯ ಸಾಹಿತಿ ಡಾ|| ಎಮ್. ಶಿವಕುಮಾರಸ್ವಾಮಿ, ಕೇರಳದ ಸಾಹಿತಿ ಜಿ. ಕೆ. ನಂಬಿಯಾರ್, ವಿಜಯವಾಣಿ ಉಪ ಸಂಪಾದಕ ಎ. ಆರ್. ರಘುರಾಮ್, ಎಡೆಯೂರು, ಎಸಳೂರು, ಆವರಗೊಳ್ಳ, ಸಿದ್ಧರಬೆಟ್ಟ, ಕಪಿಲಾಧಾರ, ಮಳಲಿ, ಕುಪ್ಪೂರು, ಸಂಗೊಳ್ಳಿ, ಬೀರೂರು, ಚನ್ನಗಿರಿ ಮಠದ ಶ್ರೀಗಳು ಸೇರಿದಂತೆ ಸಾವಿರಾರು ಸದ್ಭಕ್ತರು ಪಾಲ್ಗೊಂಡಿದ್ದರು.



ಸುದ್ದಿ ಓದಿ