ತಾಳಿಕೋಟಿ

ಡಾ. ರಾಧಾಕೃಷ್ಣನ್ ಜನ್ಮದಿನ, ಗುರುವಂದನಾ ಕಾರ್ಯಕ್ರಮ

ಡಾ. ರಾಧಾಕೃಷ್ಣನ್ ಜನ್ಮದಿನ, ಗುರುವಂದನಾ ಕಾರ್ಯಕ್ರಮ

ತಾಳಿಕೋಟಿ:ಡಾ.ರಾಧಾಕೃಷ್ಣನ್ ಜನ್ಮದಿನ (ಶಿಕ್ಷಕರ ದಿನಾಚರಣೆ) ಗುರುವಂದನಾ ಹಾಗೂ 108 ಶಿಕ್ಷಕ ಮಿತ್ರರಿಗೆ ಗೌರವ ಸಮರಾ​‍್ಣ ಸಮಾರಂಭ ಸೆ. 6 ರಂದು ಕೊಣ್ಣೂರ ಗ್ರಾಮದಲ್ಲಿ  ನಡೆಯಲಿದೆ.  

ಅಂದು ಕೊಣ್ಣೂರ ಗ್ರಾಮದ ಎಸ್‌.ಬಿ.ಎಚ್‌. ಪ್ರೌಢಶಾಲೆಯಲ್ಲಿ ಬೆಳಿಗ್ಗೆ 10-30 ಘಂಟೆಗೆ ನಡೆಯಲಿರುವ ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಬಿದರಕುಂದಿ ಶಿವಯೋಗಾಶ್ರಮದ ಪ.ಪೂ. ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸಲಿದ್ದು, ಕೊಣ್ಣೂರಿನ ವೇ.ಮೂ. ಶ್ರೀನಾಥಯ್ಯ. ಬ. ಹಿರೇಮಠ ಸಮ್ಮುಖ ವಹಿಸುವರು.  

ಕೊಣ್ಣೂರ ವೀರೇಶ್ವರ ಸೇವಾಸಮಿತಿ ಅಧ್ಯಕ್ಷ ಶ್ರೀ ಸಿದ್ದನಗೌಡ ದೇಸಾಯಿ ಅಧ್ಯಕ್ಷತೆ ವಹಿಸುವರು. ಹಿರಿಯ ಅತಿಥಿಗಳಾಗಿ ಸಿದ್ದನಗೌಡ ಹರನಾಳ, ಕುಬೇರ​‍್ಪಗೌಡ ಅಸ್ಕಿ, ಮುಖ್ಯ ಅತಿಥಿಗಳಾಗಿ ನಿವೃತ್ತ ಸಿಪಿಐ ಸಿ.ಬಿ. ಅಸ್ಕಿ, ಸರಕಾರಿ ಫಾರ್ಮಾಸಿಸ್ಟ್‌ ರಾಷ್ಟ್ರೀಯ ಅಧ್ಯಕ್ಷ ಬಿ.ಎಸ್‌. ದೇಸಾಯಿ, ನಿವೃತ್ತ ದೈಹಿಕ ಶಿಕ್ಷಕ ಬಿ.ಆರ್‌. ಪೋಲಿಸ್‌ಪಾಟೀಲ ಡಿಡಿಪಿಐ ಆಯುಕ್ತರ ಕಾರ್ಯಾಲಯ ಧಾರವಾಡ, ಎಸ್‌.ಬಿ. ಬಿಂಗೇರಿ(ಕೊಣ್ಣೂರ) ರೆಡ್ಡಿ ನೌಕರರ ಸಂಘದ ಅಧ್ಯಕ್ಷ ಎಸ್‌.ಆಯ್‌. ಕಡಕೋಳ ಆಗಮಿಸಲಿದ್ದಾರೆ.  

ನಿವೃತ್ತ ದೈಹಿಕ ಶಿಕ್ಷಕ ಬಿ.ಬಿ. ಅಸ್ಕಿ, ನಿವೃತ್ತ ಶಿಕ್ಷಕ ಬಿ.ಎಸ್‌. ಬಿರಾದಾರ ಹಾಗೂ ನಿವೃತ್ತ ಅಧಿಕಾರಿ ಸಿ.ಆರ್‌. ಪೋಲಿಸ್‌ಪಾಟೀಲರಿಗೆ ವಿಶೇಷ ಗೌರವ ಸಮರೆ​‍್ಣ ನಡೆಯಲಿದೆ. 

ಈ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಆಯೋಜಕರಾದ ಪ್ರಾಧ್ಯಾಪಕ ಡಾ.ಬಸವರಾಜ ಅಸ್ಕಿ ಜಿ.ಪಂ. ಮಾಜಿ ಸದದಸ್ಯೆ ಜ್ಯೋತಿ ಬಸವರಾಜ ಅಸ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ