ತಾಳಿಕೋಟಿ

ಡಾ. ಪ್ರಭುಗೌಡರ ಸೇವೆ ಶ್ಲಾಘನೀಯ: ದೇಶಮುಖ

ಡಾ. ಪ್ರಭುಗೌಡರ ಸೇವೆ ಶ್ಲಾಘನೀಯ: ದೇಶಮುಖ

ತಾಳಿಕೋಟಿ: ದೇ.ಹಿಪ್ಪರಗಿ ಮತಕ್ಷೇತ್ರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಗ್ರಾಮೀಣ ಜನರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ಶಿಬಿರಗಳನ್ನು ನಡೆಸಿ ಜನರಲ್ಲಿ ಆರೋಗ್ಯದ ಕುರಿತು ಜಾಗೃತಿಯನ್ನು ಮೂಡಿಸುತ್ತಿರುವ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ) ಇವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಬೇಲೂರ ಧಣಿಗಳಾದ ಶರಣಗೌಡ ದೇಶಮುಖ ತಿಳಿಸಿದರು. 

ತಾಲೂಕಿನ ಬೇಲೂರ ಗ್ರಾಮದಲ್ಲಿ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ) ಇವರ ಆರೋಗ್ಯ ಅಭಿಯಾನದಡಿಯಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪೂರ ಹಾಗೂ ಬಿಎಲ್‌ಡಿಇ ಸಂಸ್ಥೆಯವರ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಉಚಿತ ಆರೋಗ್ಯ ಅಭಿಯಾನ ಹಾಗೂ ಆರೋಗ್ಯ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.  

ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿ ಗ್ರಾಮೀಣ ಜನರು ತಮ್ಮ ರೋಗಗಳ ಉಪಚಾರಕ್ಕಾಗಿ ನಗರ ಪ್ರದೇಶಗಳ ಆಸ್ಪತ್ರೆಗಳಿಗೆ ಬರಲು ವಿಳಂಬವಾಗುವುದರಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಾರೆ. ಹಿಗಾಗಬಾರದೆಂದು ನಾನು ಈ ಅಭಿಯಾನವನ್ನು ಹಮ್ಮಿಕೊಂಡಿದ್ದೆನೆ ಒಂದು ಆರೋಗ್ಯ ಪೂರ್ಣವಾದ ಸಮಾಜವನ್ನು ನಿರ್ಮಿಸುವುದು ನನ್ನ ಉದ್ದೇಶವಾಗಿದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.  

ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ಸಂಜೀವಪ್ಪ ಭಪ್ಪರಗಿ, ಬಾಲು ತಳವಾರ(ಅಸ್ಕಿ), ಮಲ್ಲನಗೌಡ ಆನೇಸೂರ(ಭಂಟನೂರ), ಮಲ್ಲನಗೌಡ ಪಾಟೀಲ, ಜುನೇದ ನದಾಫ, ಸಂಗಮೇಶ ಪಾಟೀಲ, ಮಲ್ಲನಗೌಡ ಬಿರಾದಾರ, ಸಚಿನ ಚಡಚಣ ಇದ್ದರು. 


ಸುದ್ದಿ ಓದಿ