ಡಾ. ಪ್ರಭುಗೌಡರ ಸೇವೆ ಸ್ಮರಣೀಯ: ಅಪ್ಪಾಜಿ ನಾಡಗೌಡ
ತಾಳಿಕೋಟಿ: ಕಳೆದ 21 ವರ್ಷಗಳಿಂದ ನಿರಂತರವಾಗಿ ವೈದ್ಯಕೀಯ ರಂಗದಲ್ಲಿ ನಿಸ್ವಾರ್ಥತೆಯ ಸೇವೆಯನ್ನು ಸಲ್ಲಿಸುತ್ತಿರುವ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ)ರವರ ಕಾರ್ಯ ಸ್ಮರಣೀಯವಾಗಿದೆ ಎಂದು ಮಾಜಿ ಸಚಿವರಾದ ಸಿ. ಎಸ್. ನಾಡಗೌಡ(ಅಪ್ಪಾಜಿ) ತಿಳಿಸಿದರು.
ದೇವಿಕಾ ಸುಬ್ಬರಾವ್ ಫೌಂಡೇಶನ್ ಮುದ್ದೇಬಿಹಾಳ ಇವರ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರದಲ್ಲಿ ಡಾ. ಪ್ರಭುಗೌಡರನ್ನು ಸನ್ಮಾನಿಸಿ ಅವರು ಮಾತನಾಡಿ ಹಣವೇ ಪ್ರಮುಖ ಎಂಬ ಇಂದಿನ ವ್ಯಾಪಾರೀ ಯುಗದಲ್ಲಿ ದುಡ್ಡಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದೇ ಸೇವೆಗೆ ಮಾತ್ರವೇ ಪ್ರಥಮ ಆದ್ಯತೆ ಕೊಟ್ಟು ಗ್ರಾಮೀಣ ಭಾಗದಲ್ಲಿ ಉಚಿತ ಶಿಬಿರಗಳನ್ನು ನಡೆಸುತ್ತಿರುವುದು ಅವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪ್ರಭುಗೌಡರು ನಿಮ್ಮ ಈ ಪ್ರೀತಿ, ವಿಶ್ವಾಸ ಹಾಗೂ ಸಹಕಾರವು ನನಗೆ ನಿರಂತರವಾಗಿ ಕೆಲಸ ಮಾಡಲು ಪ್ರೇರಣೆಯಾಗಿದೆ ನಾನು ಮಾಡಿದ್ದು ಕಡಿಮೆ ಮಾಡಬೇಕಾದದ್ದು ಇನ್ನೂ ಬಹಳಷ್ಟಿದೆ ಎಂದು ಹೇಳಿದರು.
ಮುಖಂಡರಾದ ಆನಂದಗೌಡ ದೊಡಮನಿ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ(ನಾವದಗಿ), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಕೆ. ಚೋರಗಸ್ತಿ, ಚಿನ್ನು ಧಣಿ(ಬಸರಕೋಡ), ಖಾಸೀಮ್ ಪಟೇಲ್(ಮೂಕೀಹಾಳ), ಆರೀಫ ಹೊನ್ನೂಟಗಿ, ಮೋದಿನಸಾಬ ನಗಾರ್ಚಿ ಇದ್ದರು.