ರಾಣೆಬೆನ್ನೂರ

ಡಾ.ಪ್ರಭಾಕರ್ ಕೋರೆ ಜನ್ಮದಿನೋತ್ಸವ: ಅಂದ ಮಕ್ಕಳಿಗೆ ಅನ್ನ ಸಂತರ್ಪಣೆ

ಡಾ.ಪ್ರಭಾಕರ್ ಕೋರೆ ಜನ್ಮದಿನೋತ್ಸವ: ಅಂದ ಮಕ್ಕಳಿಗೆ ಅನ್ನ ಸಂತರ್ಪಣೆ

ರಾಣೇಬೆನ್ನೂರು 03:  ಬೆಳಗಾವಿಯ ಕೆಎಲ್ಇ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಪ್ರಭಾಕರ ಕೋರೆ ಅವರ 76ನೇ ಜನ್ಮದಿನೋತ್ಸವ ಕಾರ್ಯಕ್ರಮವು ಇಲ್ಲಿನ ಕಮಲಾನಗರದಲ್ಲಿರುವ ಸ್ನೇಹ ದೀಪ ಅಂದ, ಅಂಗವಿಕಲರ ಮಕ್ಕಳ ಸಂಸ್ಥೆಯಲ್ಲಿ, ಅನ್ನ ಸಂತರ್ಪಣೆ ಮಾಡುವುದರ ಮೂಲಕ, ಅತ್ಯಂತ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವಿ.ಪಿ. ಲಿಂಗನಗೌಡ್ರ, ಸಂಚಾಲಕ ಉಮೇಶ್ ಗುಂಡಗಟ್ಟಿ, ಚಂದ್ರಶೇಖರ ತಿಳುವಳ್ಳಿ, ಉಮಾಪತಿ ಹೊನ್ನಾಳಿ, ವೀರಣ್ಣ ಅಂಗಡಿ, ಗದಿಗೆಪ್ಪ ಹೂಟ್ಟಿಗೌಡ್ರ, ಸೇರಿದಂತೆ ಡಾ. ಪ್ರಭಾಕರ್ ಕೋರೆ,  ಕ್ರೆಡಿಟ್ ಸೊಸೈಟಿ, ನಿ. ವ್ಯವಸ್ಥಾಪಕ ಪ್ರದೀಪ್ ಸಿಂಗ್ ಬಾಬುಸಿಂಗನವರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ