ಡಾ.ಪಂ.ಪುಟ್ಟರಾಜರ ಸಾಹಿತ್ಯೋತ್ಸವ ಕಾರ್ಯಕ್ರಮ
ಬ್ಯಾಡಗಿ 01: ಅಂಧರ ಬಾಳಿನಲ್ಲಿ ಅರಿವಿನ ದೀಪವನ್ನು ಬೆಳಗಿ ಅವರ ಕತ್ತಲೆಯ ಬದುಕಿಗೊಂದು ಭದ್ರ ನೆಲೆಯನ್ನು ಕಲ್ಪಿಸಿ ಪ್ರಸ್ತುತ ಸಮಾಜಕ್ಕೆ ಅನಘ್ರ್ಯ ರತ್ನಗಳನ್ನು ನೀಡಿದ ಕಿತರ್ಿ ಗದುಗಿನ ಮಾಹಾಯೋಗಿ ಡಾ.ಪಂಡಿತ ಪುಟ್ಟರಾಜರ ಗವಾಯಿಗಳವರಿಗೆ ಸಲ್ಲುತ್ತದೆ ಎಂದು ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ರಾಜ್ಯ ಸಂಚಾಲಕರಾದ ಶಶೀಕಲಾ ನಲ್ಕುದುರೆ ಹೇಳಿದರು. ದಾವಣಗೆರೆಯಲ್ಲಿ ಜರುಗಿದ ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ 5ನೇ ಭಕ್ತಿ ಸಾಹಿತ್ಯ ಸಮ್ಮೇಳನ ಹಾಗೂ ಡಾ.ಪಂ.ಪುಟ್ಟರಾಜರ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯ ಸಮಿತಿಯ ಸದಸ್ಯರನ್ನು ಸನ್ಮಾಸಿ ಅವರು ಮಾತನಾಡಿದರು. ಗದಗ ನಗರದಲ್ಲಿ ಸಂಗೀತದ ಗದ್ದುಗೆಯನ್ನು ಕಟ್ಟಿ ಸಾವಿರಾರು ಅಂಧರಿಗೆ ಅನಾಥರಿಗೆ ದೀನದುರ್ಬಲರಿಗೆ ಸಂಗೀತಾಭ್ಯಾಸವನ್ನು ಉಣಿಸಿ ಅವರ ಮುಡಿಗೊಂದು ಗೌರವದ ಕಿರೀಟ ತೊಡಿಸಿದ ಮಹಾ ತಪಸ್ವಿ ಡಾ.ಪಂಡಿತ ಪುಟ್ಟರಾಜ ಶ್ರೀಗಳ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದಾರೆ ಕಲುಷಿತಗೊಂಡ ಮನಗಳನ್ನು ಶುದ್ದ ಮಾಡಲು ಸಾಧ್ಯವಾಗುತ್ತದೆ ಎಂದರು.
ಇಂತಹ ಸಂಗೀತ ಸಾಮ್ರಾಟನ ನೆನಪು ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಪೂಜ್ಯರು ನೀಡಿದ ಕೊಡುಗೆ ಮತ್ತು ಅವರ ಜೀವನ ಸಾಧನೆಯನ್ನು ನಾಡಿನ ಜನ ಸಮುದಾಯಕ್ಕೆ ಹಾಗೂ ಹೊಸ ತಲೆಮಾರಿಗೆ ಪರಿಚಯಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಗದುಗಿನ ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿಯು ಪ್ರತಿ ಜಿಲ್ಲೆಗಳಲ್ಲಿ ಸೇವಾ ಸಮಿತಿಯನ್ನು ಸ್ಥಾಪಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಅವರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪಂ.ಪುಟ್ಟರಾಜ ಪುರಸ್ಕಾರ ಗೌರವವನ್ನು ನೀಡಿ ಅಭಿನಂದಿಸುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಶ್ರೀ ಚನ್ನವೀರಸ್ವಾಮಿ ಹಿರೇಮಠ, ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಶಿವರಾಜ ಉಜ್ಜನಿ, ಕೋಶಾಧ್ಯಕ್ಷ ಪ್ರದೀಪ ನಂದಿಕೇಶವಮಠ, ಪ್ರಧಾನ ಕಾರ್ಯದರ್ಶಿ ಡಾ.ಗೀತಾ ಸುತ್ತಕೋಟಿ, ಬ್ಯಾಡಗಿ ಸಂಚಾಲಕ ಟಿಪ್ಪುಸುಲ್ತಾನ ಹುಲಮನಿ, ಶಿಕ್ಷಕ ಎಂ.ಎಫ್.ಕರಿಯಣ್ಣನವರ, ಜ್ಯೋತಿ ಜಂಬಗಿ, ಪುಷ್ಪಾ ಸೊಲಬಗೌಡ್ರ, ಎ.ಬಿ.ಹರವಿ, ಶಿವಬಸಯ್ಯ ವೀರಕ್ತಮಠ, ರೇವಣಸಿದ್ದಯ್ಯ ಹಿರೇಮಠ ಸೇರಿದಂತೆ ಇನ್ನಿತರರು ಇದ್ದರು