ಕಸಾಪ ಅಧ್ಯಕ್ಷರಾಗಿ ಕನ್ನಡದ ತೇರು ಎಳೆಯುವ ಸಮರ್ಥ ಸೇನಾನಿ ಡಾ. ಜೋಶಿ
ಕೆ.ಎಸ್.ನಾಗರಾಜ
ರಾಣೀಬೆನ್ನೂರ 17: ಸುದೀರ್ಘ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರ ಆಯ್ಕೆಗಾಗಿ ಮೇ ತಿಂಗಳು 9 ರಂದು ಚುನಾವಣೆ ನಡೆಯಲಿದೆ.ಅಧ್ಯಕ್ಷರಾಗಲು ಬಯಸಿ ಅತಿ ರಥ-ಮಹಾರಥರು ನಾಮಪತ್ರ ಸಲ್ಲಿಸಿದ್ದು.ಈಗಾಗಲೇ ಅಧ್ಯಕ್ಷರ ಚುನಾವಣಾ ಅಖಾಡದಲ್ಲಿ 21 ಅಭ್ಯರ್ಥಿಗಳು ಕಣದಲ್ಲಿದ್ದು ಕಳೇದ 4 ತಿಂಗಳಿಂದ ಅವರವರ ವ್ಯಾಪ್ತಿಯಲ್ಲಿ ಮತದಾರರನ್ನು ಮನವೋಲಿಸಲು ಮುದ್ದಾಗಿದ್ದಾರೆ. ಅಧ್ಯಕ್ಷಗಾದಿಗೆ ಯಾರು ಅರ್ಹರು ಎನ್ನುವುದನ್ನು ಮತದಾರ ಪ್ರಭುಗಳ ನಿರ್ಧಾದ ಮೇಲೆ ನಿಂತಿದೆ.ಈ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಗಾದಿಯನ್ನು ಈ ಹಿಂದೆ ನಾಡಿನ ಹೆಸರಾಂತ ಸಾಹಿತಿಗಳು, ಕವಿಗಳು ಅಲಂಕರಿಸಿ ಅಧ್ಯಕ್ಷ ಸ್ಥಾನಕ್ಕೆ ಶ್ರೇಷ್ಠತೆಯನ್ನು ತಂದು ಕೊಟ್ಟಿದ್ದಾರೆ. ದಿ:9 ರಂದು ನಡೆಯುವ ಚುನಾವಣೆಗೆ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಾಡೋಜ ಡಾ.ಮಹೇಶ ಜೋಶಿಯವರು ಅಭ್ಯರ್ಥಿಯಾಗಿ ಈಗಾಗಲೇ ಹಲವು ಜಿಲ್ಲೆ ಗಳಲ್ಲಿ ಮಿಂಚಿನ ಚುನಾವಣಾ ಪ್ರಚಾರವನ್ನು ನಡೆಸಿದ್ದಾರೆ. ಸ್ಥೂಲವಾಗಿ ಮಂಥನ ನಡೆಸಿದರೆ ಡಾ.ಮಹೇಶ ಜೋಶಿಯವರು ಸಮರ್ಥ ಅಭ್ಯರ್ಥಿಯಾಗಿದ್ದು ಅಧ್ಯಕ್ಷರಾಗಿ ಕನ್ನಡದ ತೇರನ್ನು ಎಳೆಯುವ ಎಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರು ಅಧ್ಯಕ್ಷರಾಗಿ ಆಯ್ಕೆ ಗೊಂಡರೆ ಕನ್ನಡ ಸಾಹಿತ್ಯ ಪರಿಷತ್ತಿನ ಖ್ಯಾತಿ ವಿಶ್ವದೆತ್ತರಕ್ಕೆ ಹರಡಲು ಸಾಧ್ಯವಾಗುತ್ತದೆ ಎನ್ನುವುದು ಮತದಾರರ ಸಾರ್ವತ್ರಿಕ ಅಭಿಪ್ರಾಯವಾಗಿದೆ. ಇವರು ಈಗಾಗಲೇ ಕನ್ನಡ ನಾಡಿನ ಸೇವೆಯನ್ನು ಯಾರೂ ನಿರೀಕ್ಷಿಸದ ರೀತಿಯಲ್ಲಿ ಮಾಡಿ ಜನಪ್ರಿಯರಾಗಿರುವುದೇ ಸಾಕ್ಷಿಯಾಗಿದೆ. ದೂರದರ್ಶನ ಚಂದನದಲ್ಲಿ ಮಧುರ-ಮಧುರವಿ ಮಂಜುಳಗಾನ, ಮೂಲಕ ನಾಡಿನುದ್ದಗಲಕ್ಕೂ ತಲುಪಿಸಿ ಕನ್ನಡದ ಸಂಸ್ಕೃತಿ ಹಿರಿಮೆಯನ್ನು ಹೆಚ್ಚಿಸಿ ಜನ ಮಾನಸದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಥಟ್ ಅಂತ ಹೇಳಿ ಕಾರ್ಯಕ್ರಮ ನಡೆಸಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಂಪಿ ಕವಿವಿ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ, ಗುಲ್ಬುರ್ಗಾ ವಿವಿ ಡಾಕ್ಟರೇಟ್ ಪ್ರಶಸ್ತಿ ನೀಡಿದೆ, ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಕೆಂಪೇಗೌಡ ಪ್ರಶಸ್ತಿಗೂ ಬಾಜನರಾಗಿದ್ದಾರೆ, 2013-2017 ರವರೆಗೆ ರಾಷ್ಟ್ರಪತಿ ಪ್ರಧಾನ ಮಂತ್ರಿ ಕಾರ್ಯಕ್ರಮಗಳ ನೇರ ಪ್ರಸಾರದ ಉಸ್ತುವಾರಿ ವಹಿಸಿದ ಪ್ರಥಮ ಕನ್ನಡಿಗರಾಗಿದ್ದಾರೆ. 1990-2017ರವರೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಹಾಗೂ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ನೇರ ಪ್ರಸಾರದ ಮೇಲ್ವಿಚಾರಣೆ ವಹಿಸಿದ ಹಿರಿಮೆ ಇವರದ್ದಾಗಿದೆ. ಶಿಗ್ಗಾಂವಿಯಲ್ಲಿ ನಡೆದ 9ನೇ ಜಿಲ್ಲಾ ಕಸಾಪ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದ ಗೌರವಪಡೆದಿದ್ದಾರೆ. ಸಂತ ಶಿಶುನಾಳ ಶರೀಫರ-ಕಳಸದ ಗುರುಗೋವಿಂದ ಭಟ್ಟರ ಪ್ರತಿಷ್ಠಾನದ ಅಧ್ಯಕ್ಷರಾಗಿ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕರಾಗಿ ದೂರದರ್ಶನ ಚಂದನ, ದೆಹಲಿ-ದಕ್ಷಿಣ ಭಾರತದಲ್ಲಿ ಸೇವೆ ಸಲ್ಲಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾ ಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾದವರು ಯಾರೂ ಇವರಷ್ಟು ಸಾಧನೆ ಮಾಡಿದವರಿಲ್ಲ, ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಸೂಕ್ತವಾಗಿದ್ದು ಇವರಿಗೆ ತಾ.ನ ಎಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುಗಳು ತಪ್ಪದೇ ಮತನೀಡಿ ಅತಿ ಹೆಚ್ಚು ಮತಗಳಿಂದ ಆರಿಸಿ ತರಬೇಕೆಂದು ಡಾ.ಮಹೇಶ ಜೋಶಿ ಯವರ ಅಭಿಮಾನಿಗಳು ನಗರದ ಅಶ್ವತ ಮಾರುತಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಒಕ್ಕೂರಲವಾಗಿ ವಿನಂತಿಸಿಕೊಂಡಿದ್ದಾರೆ. ನಂತರ ಡಾ.ಮಹೇಶ ಜೋಶಿ ಅವರು ತಮ್ಮ ಅಭಿಮಾನಿಗಳೊಂದಿಗೆ ಶಾಲಾ -ಕಾಲೇಜುಗಳು, ಹಿರಿಯ ಕಿರಿಯ ಸಾಹಿತಿಗಳ ಮನೆ ಮನೆಗೆ ಭೇಟಿ ನೀಡಿ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತು ಆಗಬೇಕೆನ್ನುವ ಮಹಾದಾಸೆ ತಮ್ಮದಾಗಿದ್ದು ಕೈಜೋಡಿಸಿ ಮತನೀಡಿ ಸಹಕರಿಸಬೇಕೆಂದು ವಿನಂಮ್ರ ಮನವಿ ಮಾಡಿದರು.
ಅಜೀವ ಸದಸ್ಯರ ಸಭೆಯಲ್ಲಿ ಹೈಕೋರ್ಟ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ, ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ, ಸಿ.ಹೆಚ್. ಕುಲಕರ್ಣಿ, ಎಸ್.ಸಿ.ಷಡಕ್ಷರಿಮಠ, ಸೀತಾರಾಮ ಕಣೇಕಲ್, ಜಿ.ಸಿ.ಕೋರಿ, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ನಭೀಸಾಬ್ ಕುಷ್ಟಗಿ, ಪ್ರಕಾಶ ಬಿ.ಕುಲಕರ್ಣಿ, ಕೆ.ಸಿ.ಕೋಮಲಾಚಾರ್, ಪ್ರಭಾಕರ ಶಿಗ್ಲಿ, ನಾಗರಾಜ ಕುಲಕರ್ಣಿ, ಕೆ.ಎಸ್. ನಾಗರಾಜ, ಆರ್. ಟಿ.ತಾಂಬೆ, ನಾಗೇಶ ಕುಲಕರ್ಣಿ, ಅರ್ಚನಾ ಮಠದ, ಏಕಾಂತ ಮುದಿಗೌಡ್ರ, ಗುರುರಾಜ ಕುಂಚೂರಕರ್, ನಿನಾಸಂ ಮಹೇಶ, ಸೇರಿದಂತೆ ನೂರಾರು ಅಜೀವ ಸದಸ್ಯರು ಪಾಲ್ಗೋಂಡಿದ್ದರು.ಹೆಚ್-ಆರ್ ಎನ್ ಆರ್03:- ರಾಣೇಬೆನ್ನೂರು ಅಶ್ವತ ಮಾರುತಿ ದೇವಸ್ಥಾನದಲ್ಲಿ ನಡೆದ ಕಸಾಪ ಅಜೀವ ಸದಸ್ಯರ ಸಭೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ|| ಮಹೇಶ ಜೋಶಿ ಮಾತನಾಡಿದರು.