ಧಾರವಾಡ - ಹುಬ್ಬಳ್ಳಿ

ಡಾ. ಹೇಮಾ ಪಟ್ಟಣಶೆಟ್ಟಿ ಭೇಟಿ ಮಾಡಿದ ಹೊರಕೇರಿ ಮಾಸ್ತರ ಶಿಕ್ಷಣ ಸಮಿತಿ

ಡಾ. ಹೇಮಾ ಪಟ್ಟಣಶೆಟ್ಟಿ ಭೇಟಿ ಮಾಡಿದ ಹೊರಕೇರಿ ಮಾಸ್ತರ ಶಿಕ್ಷಣ ಸಮಿತಿ

ಹುಬ್ಬಳ್ಳಿ 04 :   ಹಿರಿಯ ಸಾಹಿತಿ  ಡಾ. ಹೇಮಾ ಪಟ್ಟಣಶೆಟ್ಟಿ ಅವರು ಧಾರವಾಡ ಜಿಲ್ಲಾ 18ನೆಯ  ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಶುಭ ಸಂಧರ್ಭದಲ್ಲಿ   ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ  ಡಾ.  ಹೇಮಾ ಪಟ್ಟಣಶೆಟ್ಟಿ ಅವರನ್ನು ಭೇಟಿ ಮಾಡಿದ  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು  ಡಾ.   ಹೇಮಾ ಪಟ್ಟಣಶೆಟ್ಟಿ ಅವರಿಗೆ  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ  ವತಿಯಿಂದ  ಪ್ರೀತಿ, ಆತ್ಮೀಯತೆಯಿಂದ  ಹೃದಯಪೂರ್ವಕವಾಗಿ ಗೌರವದಿಂದ  ಅಭಿನಂದನೆಗಳನ್ನು ಸಲ್ಲಿಸಿ ಶುಭ ಕೋರಿದರು.

ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಸಾಹಿತಿ ಪ್ರೊ ಎಸ್ ಆರ್ ಆಶಿ, ಸಾಹಿತಿ ಪ್ರೊ ಕೆ ಎ  ದೊಡ್ಡಮನಿ,  ಪ್ರಾಚಾರ್ಯ ಡಾ ಮಹೇಶ ಡಿ ಹೊರಕೇರಿ,   ಶಿಕ್ಷಕಿ  ಶಕುಂತಲಾ ಎಸ್ ಹೂಗಾರ , ಎ ದರ್ಗಾ , ಸಿದ್ಧರಾಮ ಹಿಪ್ಪರಗಿ, ಸುಧಾ ಕಬ್ಬೂರ,  ಮುಂತಾದವರು ಇದ್ದರು., 


ಸುದ್ದಿ ಓದಿ