ಡಾ.ಬಾಬು ಜಗಜೀವನ್ ರಾಮ್ ಆಚರಣೆ
ಸಿಂದಗಿ05 : ಪಟ್ಟಣದ ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ 114ನೇ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಡಾ. ಬಾಬು ಜಗಜೀವನ್ರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಜನೆ ಮಾಡಿದರು. ಸಿಬ್ಬಂದಿ ಪಿ.ಡಿ.ಗುಡದಿನ್ನಿ, ಶಿವಾನಂದ ಕಡೆಮನಿ, ರವಿ ಬಿರಾದಾರ, ಕಲ್ಲಪ್ಪಕುಂಬಾರ, ಕಲ್ಲಪ್ಪ ನಂದರಗಿ ಸೇರಿದಂತೆ ತಾಲೂಕು ಪಂಚಾಯತಿ ಕಾರ್ಯಾಲಯದ ಸಿಬ್ಬಂದಿಗಳು ಹಾಜರಿದ್ದರು.