ಇಂಡಿ

ರಾಷ್ಟ್ರದ ಅಭಿವೃದ್ಧಿಗೆ ಜಗಜೀವನರಾಮ್ ಕೊಡುಗೆ ಅಪಾರ

ರಾಷ್ಟ್ರದ ಅಭಿವೃದ್ಧಿಗೆ ಜಗಜೀವನರಾಮ್ ಕೊಡುಗೆ ಅಪಾರ

ಇಂಡಿ 05: ಬಾಬು ಜಗಜೀವನರಾಮ್ ಅವರು ಪ್ರತಿಯೊಂದು ಹಂತದಲ್ಲಿಯೂ ಹೊಸ ಹೊಸ ವಿಚಾರಧಾರೆಗಳನ್ನು ಕಂಡುಕೊಂಡವರು ಅವರ ಕ್ರಾಂತಿಕಾರಿ ಹೆಜ್ಜೆಗಳು  ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ ಎಂದು ಶಾಸಕ ಯಶವಂತರಾಯಗೌಡ ವಿ ಪಾಟೀಲ ಹೇಳಿದರು.

ಪಟ್ಟಣದ  ತಹಶೀಲ್ದಾರ ಕಚೇರಿಯಲ್ಲ್ಲಿ ತಾಲೂಕಾ ಆಡಳಿತ ವತಿಯಿಂದ ಡಾ. ಬಾಬು ಜಗಜೀವನರಾಮ್  ಅವರ 114ನೇ  ಜಯಂತಿಯನ್ನು ಸೋಮವಾರದಂದು ಅತ್ಯಂತ ಸರಳವಾಗಿ ಆಚರಿಸಿ ಮಾತನಾಡಿದರು.

ಬಾಬು ಜಗಜೀವನರಾಮ್ ಅವರು ಕೃಷಿ ಮಂತ್ರಿಯಾಗಿದ್ದಾಗ ತೆಗೆದಕೊಂಡ ನಿರ್ಣಯಗಳು ಜಾರಿಗೆ ತಂದ ಯೋಜನೆಗಳೆಲ್ಲವು ರೈತರಿಗೆ ಅನುಕೂಲವಾಗಿದ್ದವು ಕೃಷಿಯ ಜೊತೆಗೆ ನೀರಾವರಿ ಕ್ಷೇತ್ರದಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ ರೈತರಿಗೆ ಬೆನ್ನಲುಬಾಗಿ ನಿಂತ ಅವರು ರಾಷ್ಟ್ರದ ಅಭಿವೃದ್ಧಿಗೆ ಸಲ್ಲಿಸಿದ ಕೊಡುಗೆ ಅಪಾರ ಎಂದರು.

ಉಪವಿಭಾಗಾಧಿಕಾರಿ ರಾಹುಲ ಸಿಂದೆ, ತಾಪಂ ಅಧ್ಯಕ್ಷ ಅಣ್ಣಪ್ಪ ಬಿದರಕೊಟಿ, ತಾಪಂ ಇಓ ಸುನೀಲ ಮದ್ದಿನ, ತಹಸಿಲ್ದಾರ ಸಿ.ಎಸ್.ಕುಲಕರ್ಣಿ, ಪುಖ್ಯಾಧಿಕಾರಿ ಶಿವಾನಂದ ಪೂಜಾರಿ, ತಾಪಂ ಸಂಜಯ ಖಡಗೇಕರ, ಸಿಪಿಐ ರಾಜೆಶೇಖರ ಬಡದೇಸಾರ, ಮನೋಜಕುಮಾರ ಗಡಬಳ್ಳಿ,ಕಾಸುಗೌಡ ಬಿರಾದಾರ, ಶ್ರೀಶೈಲ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಸುದ್ದಿ ಓದಿ