ಜುಗೂಳ ಗ್ರಾಮದ ವಿದ್ಯುತ್ ಅವಘಡದಿಂದ ಹಾನಿಗೊಳಗಾದವರಿಗೆ ಸಹಾಯ ಹಸ್ತ ಚಾಚಿದ ಡಾ. ಅಮೋಲ ಸರಡೆ..!
ಲೋಕದರ್ಶನ ವರದಿ
ಕಾಗವಾಡ 29 : ತಾಲೂಕಿನ ಜುಗೂಳ ಗ್ರಾಮದಲ್ಲಿ ಮಾ.21 ರಂದು ರಾತ್ರಿ ಬಜಾರ ಪೇಟೆಯಲ್ಲಿ ವಿದ್ಯುತ್ ಶಾರ್ಟ ಸರ್ಕಿಟ್‌ನಿಂದಾಗಿ ಸುಮಾರು 15 ಅಂಗಡಿಗಳು ಭಸ್ಮಗೊಂಡು, ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಅವರಿಗೆ ಶುಕ್ರವಾರ ದಿ.27 ರಂದು ಶಿರಗುಪ್ಪಿ ಗ್ರಾಮದ ಅಮೋಲ ಜನಕಲ್ಯಾಣ ಪ್ರತಿಷ್ಠಾನದ ಸಂಸ್ಥಾಪಕ ಡಾ. ಅಮೋಲ ಸರಡೆ ಸಾಮಾಜಿಕ ಬದ್ಧತೆಯೊಂದಿಗೆ ಆರ್ಥಿಕ ಸಹಾಯ ಮತ್ತು ಹೊಸ ವ್ಯವಹಾರವನ್ನು ಸ್ಥಾಪಿಸಲು ಅಗತ್ಯ ವಸ್ತುಗಳನ್ನು ವಿತರಿಸಿದ್ದು, ಗ್ರಾಮಸ್ಥರ ಪ್ರಶಂಸೆಗೆ ಪಾತ್ರಾವಾಗಿದೆ.
ಈ ವೇಳೆ ಗ್ರಾಮದ ಮುಖಂಡರಾದ ಅನೀಲ ಸುಂಕೆ, ಅನೀಲ ಕಡೋಲೆ, ಉದಯ ದೇಸಾಯಿ ಮಾತನಾಡಿ, ಡಾ. ಅಮೋಲ ಸರಡೆ ಅವರ ಕಾರ್ಯಗಳನ್ನು ಕೊಂಡಾಡಿದರು. ಇನ್ನೂ ಡಾ. ಅಮೋಲ ಸರಡೆ ಮಾತನಾಡಿ, ಬಿಕ್ಕಟ್ಟಿನ ಸಮಯದಲ್ಲಿ ಪರಸ್ಪರರ ಜೊತೆಗೆ ನಿಲ್ಲುವುದು ನಿಜವಾದ ಸಮಾಜ ಸೇವೆವಾಗಿದ್ದು, ವ್ಯಾಪಾರಿಗಳು ತಮ್ಮ ಕಾಲ ಮೇಲೆ ನಿಲ್ಲಲು ಇದೊಂದು ಸಣ್ಣ ಸಹಾಯವಾಗಿದೆ ಎಂದು ಹೇಳಿದರು.
ಈ ವೇಳೆ ಹಾನಿಗೊಳಗಾದ ಅಂಗಡಿ ಮಾಲೀಕರಾದ ಅಡಿವೆಪ್ಪ ಭನಾಜ, ಮಾರುತಿ ಮಿಣಚೆ, ರಮೇಶ ಬಿಳ್ಳೂರೆ, ಪ್ರಕಾಶ ಅಗಸರ, ಅಮೀತ ಶಿರಕೆ, ಶಿವಲಿಂಗ ಘಟಗೆ, ಭೊಲೆನಾಥ ರಾಜಸ್ಥಾನಿ, ಗೋಮಟೇಶ ನೀರಾವರಿ ಸಂಘ ಮತ್ತು ಸಾಗರ ನೀರಾವರಿ ಸಂಘದ ಸಿಬ್ಬಂದಿಗಳು, ಮುಖಂಡರಾದ ಕಾಕಾಸಾಹೇಬ ಪಾಟೀಲ, ಅನಿಲ ಕಡೋಲೆ, ಅನೀಲ ಸುಂಕೆ, ಸುರೇಶ ಪಾಟೀಲ, ಉದಯ ದೇಸಾಯಿ, ಪೋಪಟ್ ಅಂಬಿ, ರಾಜು ಅಳತೆ, ಚಿದಾನಂದ ತಾರದಾಳೆ, ಅಶೋಕ ಕುಮಟೋಳೆ, ಕಾಕಾಸಾಹೇಬ ಕುಮಟೋಳೆ, ಲಕ್ಷ್ಮಣ ಗುಂಜಾಳೆ, ಕಾಡಗೌಡ ಪಾಟೀಲ, ರಾಜಗೌಡ ಪಾಟೀಲ, ಸುರೇಶ ಪಾಟೀಲ, ಸತೀಶ ಬೆಕ್ಕೇರಿ, ಸಂದೀಪ ಪಾಟೀಲ, ಮಲ್ಲಪ್ಪಾ ಕೊರವೆ, ರಾಜುಗೌಡಾ ಪಾಟೀಲ, ಅನೀಲ ಮೋಳೆ, ಅನೀಲ ಘಟಗೆ, ಉಮೇಶ ಸರಡೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.