ರಾಣೆಬೆನ್ನೂರ

ಮಾನಸ ಗ್ರೂಪ್ ಅಧ್ಯಕ್ಷ ಡಾ.ಆನಂದ್‍ಕುಮಾರ್ ಗೆ ಡಾ.ಅಬ್ದುಲ್ ಕಲಾಂ ಪ್ರಶಸ್ತಿ

ಮಾನಸ ಗ್ರೂಪ್ ಅಧ್ಯಕ್ಷ ಡಾ.ಆನಂದ್‍ಕುಮಾರ್ ಗೆ ಡಾ.ಅಬ್ದುಲ್ ಕಲಾಂ ಪ್ರಶಸ್ತಿ
ರಾಣೆಬೆನ್ನೂರು ಅ 20 ಬೆಂಗಳೂರಿನ ಪ್ರತಿಷ್ಠಿತ ಮಾನಸ ಗ್ರೂಪ್ ಸಂಸ್ಥೆಯ ಅಧ್ಯಕ್ಷರು, ಹಾಗೂ ಸಾಮಾಜಿಕ ಕಾರ್ಯಕರ್ತರಾದ ಸ್ನೇಹಜೀವಿ ಡಾ : ಆನಂದ್ ಕುಮಾರ್ ಅವರು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ,( ಬಂಗಾರದ ಪದಕ )ಗೆ ಭಾಜನರಾಗಿದ್ದಾರೆ. ಸಿಟಿಜನ್ ಇಂಟಿಗ್ರೇಷನ್ ಪಿಸ್ ಇನ್ಸ್ಟಿಟ್ಯೂಷನ್ ಸಂಸ್ಥೆ ಕೊಡಮಾಡುವ ಭಾರತರತ್ನ ಡಾ : ಅಬ್ದುಲ್ ಕಲಾಂ ಪ್ರಶಸ್ತಿ ಬಂಗಾರದ ಪದಕವನ್ನೂಳಗೊಂಡಿದ್ದು, ಇತ್ತೀಚೆಗೆ  ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಮಾರಂಭದಲ್ಲಿ, ಡಾ ಆನಂದ್ ಕುಮಾರ್  ಅವರಿಗೆ, ಅವರ ಸಾಮಾಜಿಕ,ಶೈಕ್ಷಣಿಕ,ಸಾಂಸ್ಕೃತಿಕ,   ಸೇವೆಯನ್ನು ಪರಿಗಣಿಸಿದ ಸಂಸ್ಥೆಯು ಸಾರ್ವಜನಿಕವಾಗಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಾಡಿನ ವಿವಿಧ ಸಂಘ-ಸಂಸ್ಥೆಗಳು ಸಮಾಜಮುಖಿ ಸೇವಾ ಕಾರ್ಯಕರ್ತರು  ಮಾನಸ ಗ್ರೂಪ್ ಸಂಸ್ಥೆ ಅಧ್ಯಕ್ಷರು, ಪದಾಧಿಕಾರಿಗಳು ಸಿಟಿಜನ್ಸ್ ಇಂಟಿಗ್ರೇಷನ್ ಪೀಸ್ ಇನ್ಸ್‍ಟಿಟ್ಯೂಷನ್ ಸಂಸ್ಥೆ ಪದಾಧಿಕಾರಿಗಳು,  ಉದ್ದಿಮೆಗಳು ಗಣ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ, ಅವರು ಯಾವುದೇ ಕೆಲಸ ಕಾರ್ಯಗಳು ಮಾಡಬೇಕಾದರೆ, ಮೊದಲು ಮನಸ್ಸು ಬೇಕು, ಮನಸಿದ್ದರೆ ಕುಟುಂಬದ ಸಹಕಾರ ಬೇಕು, ಹೆಚ್ಚಾಗಿ ಸ್ನೇಹಿತರ ಸಹಕಾರ ಬೇಕೇ ಬೇಕು. ಎಂದರು. ತಮಗೆ ಸಮಾಜಸೇವೆ  ಮಾಡಲು ಕುಟುಂಬದವರ, ಸಂಸ್ಕಾರ ಪರಂಪರೆ ಮತ್ತು ಹಿನ್ನೆಲೆ ಪ್ರೇರಣೆ ನೀಡಿದೆ. ಪ್ರಶಸ್ತಿಗಾಗಿ ಎಂದು ಅಪೇಕ್ಷ ಪಟ್ಟವನಲ್ಲ ಎಂದ ಡಾ: ಆನಂದ್ ಕುಮಾರ್ ಅವರು, ಬಯಸದೇ ಬಂದ ಭಾಗ್ಯ ನನ್ನದಾಗಿದೆ, ಪ್ರಶಸ್ತಿ ಯಿಂದಾಗಿ ಮತ್ತಷ್ಟು ಸಮಾಜಮುಖಿ ಕೆಲಸ ಕಾರ್ಯಗಳು ಮಾಡುವ ಜವಾಬ್ದಾರಿ ಹೆಚ್ಚಿದೆ. ಎಂದು  ಎಲ್ಲರಿಗೂ ತಮ್ಮ ಕೃತಜ್ಞತೆ ಸಲ್ಲಿಸಿದರು.

ಸುದ್ದಿ ಓದಿ