ಡೋಣಿ ನದಿ ಆರ್ಭಟ, ಸಾರ್ವಜನಿಕರ ಪರದಾಟ
ತಾಳಿಕೋಟೆ12: ಮೂರ್ನಾಲ್ಕು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಆರ್ಭಟ ಹೆಚ್ಚಿಸಿದ್ದು ಡೋಣಿ ನದಿಗೆ ಭಾರಿ ಪ್ರಮಾಣದ ಪ್ರವಾಹ ಉಂಟಾಗಿ ತಾಳಿಕೋಟೆ ಪಟ್ಟಣಕ್ಕೆ ಹೊಂದಿಕೊಂಡಿರುವ ಸೇತುವೆ ಮುಳಗಡೆಯಾಗಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.
ಜಿಲ್ಲೆ ಸೇರಿದಂತೆ ತಾಲೂಕಿನಾಧ್ಯಂತ ಭಾರಿ ಪ್ರಮಾಣದ ಮಳೆಯಾಗಿದೆ. ಇದರಿಂದ ಡೋಣಿ ನದಿಗೆ ಭಾರಿ ಪ್ರಮಾಣದ ನೀರು ಹರಿಯತೊಡಗಿದೆ. ಡೋಣಿ ನದಿ ಪ್ರವಾಹ ಹೆಚ್ಚಾಗಿರುವದರಿಂದ ತಾಳಿಕೋಟೆ-ವಿಜಯಪುರ ಸಂಪರ್ಕ ಕಲ್ಪಿಸುವ ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿ ಸೇತುವೆ ಮುಳಗಡೆಯಾಗಿದೆ. ಡೋಣಿ ನದಿ ಮೇಲ್ಮಟ್ಟದ ಸೇತುವೆ ಶಿಥಿಲಗೊಂಡಿದ್ದರಿಂದ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು. ಬ್ರಿಟಿಷರ್ ಕಾಲದಲ್ಲಿ ನಿಮರ್ಾಣ ಮಾಡಲಾದ ಸೇತುವೆ ಮೇಲೆ ಸಂಚಾರ ಆರಂಭಿಸಲಾಗಿತ್ತು. ಆ ಸೇತುವೆಯು ಮುಳಗಡೆಯಾಗಿದ್ದರಿಂದ ತಾಳಿಕೋಟೆ ಸಂಪರ್ಕ ಕಡಿತಗೊಂಡಿದೆ.
ಹಡಗಿನಾಳ ರಸ್ತೆಯಲ್ಲಿ ಮೇಲ್ಮಟ್ಟದ ಸೇತುವೆ ನಿಮರ್ಾಣ ಮಾಡಲಾಗಿದ್ದರೂ ಸಹ ಮೂಕಿಹಾಳ ಬಳಿ ಸೋಗಲಿ ಹಳ್ಳದ ಸೇತುವೆ ಕೊಚ್ಚಿಕೊಂಡು ಹೋಗಿರುವದರಿಂದಾಗಿ ಅಲ್ಲಿಯೂ ಸಂಚಾರ ಬಂದ್ ಮಾಡಲಾಗಿದೆ. ಬಿಜ್ಜಳ ರಾಜ್ಯ ಹೆದ್ದಾರಿಯೂ ವಿಜಯಪುರ, ಬಾಗಲಕೋಟೆ, ಬೆಳಗಾವಿಗೆ ಸಂಪರ್ಕ ಕಲ್ಪಿಸುವ ಮೂಲಕ ಮಹಾರಾಷ್ಟ್ರ, ಗೋವಾ ಮತ್ತು ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳ ಮೂಲಕ ಆಂದ್ರಪ್ರದೇಶ, ತೆಲಂಗಾಣ ಸಂಪರ್ಕ ಕಲ್ಪಿಸುವ ಪ್ರಮುಖ ಬಿಜ್ಜಳ ಹೆದ್ದಾರಿಯಾಗಿದೆ. ಡೋಣಿ ನದಿ ಪ್ರವಾಹದ ಸ್ಥಿತಿ ಅರಿಯದ ಹಲವು ವಾಹನಗಳು ಆಗಮಿಸಿ ಪರದಾಟ ನಡೆಸುತ್ತಿದ್ದಾರೆ. ಪ್ರವಾಹ ಇಳಿಯುವದಿಲ್ಲ ಎನ್ನುವದನ್ನು ಅರಿತ ಪ್ರಯಾಣಿಕರು ಮುದ್ದೇಬಿಹಾಳ, ನಾಲತವಾಡ, ನಾರಾಯಣಪುರ, ಕೊಡೆಕಲ್ ಮೂಲಕ ಪಟ್ಟಣಕ್ಕೆ ಆಗಮಿಸಿದರೆ ಪಟ್ಟಣದಿಂದ ನಿರ್ಗಮಿಸುವವರು ದೇವರ ಹಿಪ್ಪರಗಿ ಮೂಲಕ ಸುತ್ತುವರೆದು ಪ್ರಯಾಣ ಮಾಡಿದರು. ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದ್ದರಿಂದ ಪಕ್ಕದಲ್ಲಿರುವ ಹಳ್ಳಿಗಳಿಂದ ಬರಲು ಸಹ ಸಾರ್ವಜನಿಕರು ಪರದಾಟ ನಡೆಸುವಂತಾಯಿತು. ಪ್ರಮುಖ ವಾಣಿಜ್ಯ ನಗರವಾಗಿರುವ ತಾಳಿಕೋಟೆಗೆ ಸಂಪರ್ಕ ಇಲ್ಲದೇ ಹಲವು ಜನ ಪರದಾಡಿದರು. ಸದ್ಯ ಡೋಣಿ ನದಿಗೆ ಎತ್ತರದಲ್ಲಿ ಸೇತುವೆಗಳಿರದ ಕಾರಣ ಪದೇ ಪದೇ ಬರುವ ಪ್ರವಾಹದಿಂದ ಸಾರ್ವಜನಿಕರನ್ನು ಹೈರಾಣಾಗಿಸುವಂತೆ ಮಾಡಿದೆ.
ವಿಜಯಪುರ, ಬಾಗಲಕೋಟೆಗೆ ಹೋಗಲು ಸಾರಿಗೆ ಇಲಾಖೆಯಿಂದ ಡೋಣಿ ನದಿಯಾಚೆಯಿಂದ ಬಸ್ ಸಂಪರ್ಕ ಕಲ್ಪಿಸಲಾಗಿತ್ತು. ಹಿಗಾಗಿ ಅನಿವಾರ್ಯವಾಗಿ ಹೋಗಬೇಕಾದವರು ತಾಳಿಕೋಟೆ ಪಟ್ಟಣದಿಂದ ಡೋಣಿ ನದಿಯವರೆಗೆ ನಡೆಗೆಯಲ್ಲಿ ನಡೆದುಕೊಂಡು ಹೋಗಿ ಡೋಣಿಯಾಚೆಗಿನ ಬಸ್ ಹತ್ತಿ ಹೋಗಬೇಕಾಯಿತು. ಆಗಮಿಸುವರು ಡೋಣಿ ನದಿಗೆ ಇಳಿದು ನಡೆದುಕೊಂಡು ಪಟ್ಟಣವನ್ನು ಸೇರಬೇಕಾಯಿತು. ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗಡಿಸೋಮನಳ, ಸಾಸನೂರ, ಕಲಕೇರಿ, ಅಸ್ಕಿ, ತುಂಬಗಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ತೊಗರಿ, ಹತ್ತಿ, ಸೂರ್ಯಕಾಂತಿ ಸೇರಿದಂತೆ ಬಹುತೇಕ ಬೆಳೆಗಳು ನೀರಿನಲ್ಲಿ ನಿಂತಿದ್ದು ಬೆಳೆ ನಷ್ಟವಾಗುವ ಭೀತಿ ರೈತರಲ್ಲಿ ಮೂಡಿದೆ. ಇನ್ನು ತಾಲೂಕಿನಾದ್ಯಂತ ಇಂದು 6 ಮನೆಗಳು ಬಿದ್ದ ವರಿದಿಗಳಾಗಿವೆ.