ಸಿಂಧಗಿ

ಗ್ರಾಪಂ ಸದಸ್ಯರಿಂದ ಪ್ರಾಥಮಿಕ ಶಾಲೆಗೆ ದೇಣಿಗೆ

ಗ್ರಾಪಂ ಸದಸ್ಯರಿಂದ ಪ್ರಾಥಮಿಕ ಶಾಲೆಗೆ ದೇಣಿಗೆ
ಸಿಂದಗಿ: ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಸ್ಥಳೀಯ ಗ್ರಾಪಂ ಸದಸ್ಯರು ಸೇರೆ ಶಾಲೆಗೆ ಕಂಪ್ಯೂಟರ್ ಖರೀದಿಗೆ 30 ಸಾವಿರ ರೂ

ಸಿಂದಗಿ:  ಸರಕಾರ ಶಾಲೆಗಳಿಗೆ ಸೌಲಭ್ಯಗಳನ್ನು ನೀಡುತ್ತಿದೆ. ದೇಣಿಗೆ ನೀಡಿದರೆ ಗ್ರಾಮೀಣ ಮಟ್ಟದಲ್ಲಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸಿದಂತೆ ಎಂದು ತಾಲೂಕಿನ ಬ್ಯಾಕೋಡ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯಗುರು ಎಸ್‌.ಎಸ್‌. ಮಾಣಸೂಣಗಿ ಹೇಳಿದರು. 

ತಾಲೂಕಿನ ಬ್ಯಾಕೋಡ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಸ್ಥಳೀಯ ಗ್ರಾಪಂ ಸದಸ್ಯರಿಂದ ಶಾಲೆಗೆ ಕಂಪ್ಯೂಟರ್ ಖರೀದಿಗೆ 30 ಸಾವಿರ ರೂ ದೇಣಿಗೆ ಪಡೆದು ಅವರು ಮಾತನಾಡಿದರು. 

ಗ್ರಾಪಂ ಸದಸ್ಯರಾದ ರಾಯಗೊಂಡಪ್ಪಗೌಡ ಬಿರಾದಾರ, ಸಂತೋಷ ಹಳಗೊಂಡ, ಶ್ರೀಶೈಲ ಗೌರ, ಭೀಮಣ್ಣ ಹವಳಗಿ,  ಪರಶುರಾಮ ದೊಡಮನಿ, ಕೃಷ್ಣ ಬಡಿಗೇರ ಇವರಿ ಸೇರಿ ಶಾಲೆಗೆ ಕಂಪ್ಯೂಟರ್ ಖರೀದಿಗೆ 30 ಸಾವಿರ ರೂ. ದೇಣಿಗೆ ನೀಡಿದರು. 

ಶಿಕ್ಷಕರಾದ ಎಸ್‌.ಎಂ. ಪತ್ತಾರ, ಎಸ್‌.ಬಿ. ದೊಡಮನಿ, ಎಸ್‌.ಎಂ. ಹಿಪ್ಪರಗಿ, ಕುಶಾ ಚವ್ಹಾಣ, ಶಿಕ್ಷಕಿಯರಾದ ಎಸ್‌.ಆರ್‌. ಹಿರೇಮಠ, ರೆಹನಾಬೆಗಂ, ಎಂ.ಎಸ್‌. ಬಿರಾದಾರ, ಜೆ.ಬಿ. ಭಾಸಗಿ, ಜೆ.ಎಂ. ಕನ್ನೊಳ್ಳಿ, ಯು.ಬಿ. ಭಾಗವಾನ ಹಾಗೂ ವಿದ್ಯಾರ್ಥಿಗಳು ಇದ್ದರು. 

ಸುದ್ದಿ ಓದಿ