ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಪುತ್ರ ಪ್ರೀಯಾಂಶ ಹೆಸರಿನಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ವಿವಿಧ ಸಾಮಗ್ರಿ ದೇಣಿಗೆ
ಲೋಕದರ್ಶನ ವರದಿ
'ಬೈಲಹೊಂಗಲ 17: ಪಟ್ಟಣದ ದುರ್ಗಾಪರಮೇಶ್ವರಿ ದೇವಸ್ಥಾನ ಧರ್ಮದರ್ಶಿ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಅವರ ಪುತ್ರ ಪ್ರೀಯಾಂಶ ಹೆಸರಿನಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಪ್ರೀಜ್, ಫ್ಯಾನ್ ಹಾಗೂ ಬಡ ರೋಗಿಗಳಿಗೆ ಬಿಸ್ಕೇಟ್, ಹಣ್ಣು, ಹಂಪಲ ಸೋಮವಾರ ವಿತರಿಸಲಾಯಿತು.
ಆರಾದ್ರಿಮಠ ಅವರ ಪತ್ನಿ ಪ್ರೀತಿ ಆರಾದ್ರಿಮಠ ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಹೆರಿಗೆಯಾಗಿದ್ದರಿಂದ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳಿಗೆ ಸಿಹಿ ವಿತರಿಸಿ ಕೃತಜ್ಞೆ ತಿಳಿಸಿ ಮಗನ ಹೆಸರಿನಲ್ಲಿ ಪ್ರೀಜ್, ಫ್ಯಾನ್, ಬಡ ರೋಗಿಗಳಿಗೆ ಬಿಸ್ಕೇಟ್, ಹಣ್ಣು, ಹಂಪಲ ವಿತರಿಸಲಾಗುತ್ತಿದೆ. ಮತಕ್ಷೇತ್ರದಲ್ಲಿಯೇ ಸಾರ್ವಜನಿಕ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಿಗಿಂತ ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕ್ಷೇತ್ರದ ಬಡ ಜನತೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ ಬಡ ಜನರ ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬಡ ಜನರ ಆರೋಗ್ಯ ಸುರಕ್ಷತೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್.ಸಿದ್ಧನ್ನವರ, ಆಸ್ಪತ್ರೆ ವೈದ್ಯಾಧಿಕಾರಿ ನಿರ್ಮಲಾ ಮಹಾಂತಶೆಟ್ಟಿ, ಮಹಾಂತೇಶ ತುರಮರಿ, ಪುರಸಭೆ ಸದಸ್ಯ ವಿಜಯ ಬೋಳನ್ನವರ, ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ರಾಜು ಸೊಗಲ, ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಬಿಜೆಪಿ ಮುಖಂಡ ಅಮಿತ ಪಾಟೀಲ, ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಮುಖರಾದ ಬಸವರಾಜ ಕಟ್ಟಿಮನಿ, ಪ್ರಶಾಂತ ಹಿರೇಮಠ, ಈರಣ್ಣಾ ಮೆಳ್ಳಿಕೇರಿ, ಮಂಜುನಾಥ ಜ್ಯೋತಿ, ರವಿ ವನ್ನೂರ, ಆನಂಧ ಹಿರೇಮಠ, ಈರ್ಪ ಕಾಡೇಶನವರ, ಆನಂದ ತೋಟಗಿ, ಆಸ್ಪತ್ರೆ ಸಿಬ್ಬಂದಿ ಇದ್ದರು.