ಶಿಗ್ಗಾವ್

ಗ್ರೈನೈಟ್ ಅಳವಡಿಸಲು ಅನಿಲ ನಾಯ್ಕರ 50,001.00 ರೂ. ದೇಣಿಗೆ

ಗ್ರೈನೈಟ್ ಅಳವಡಿಸಲು ಅನಿಲ ನಾಯ್ಕರ 50,001.00 ರೂ. ದೇಣಿಗೆ

ಲೋಕದರ್ಶನ ವರದಿ 

ಶಿಗ್ಗಾವಿ 18: ದೇವಾಲಯಗಳ ಪುನರುತ್ಥಾನ ಮಾಡುವ ಮೂಲಕ ಧರ್ಮವನ್ನು ಗಟ್ಟಿಗೊಳಿಸಬೇಕಾಗಿದೆ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬಂತೆ ಧರ್ಮ ಕಾರ್ಯಗಳಿಗೆ ದಾನ ಮಾಡಿ ಜೀವನದ ಸಾರ್ಥಕತೆ ಪಡೆಯಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶಂಕರಗೌಡ ಪಾಟೀಲ ಹೇಳಿದರು. 

ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಗ್ರೈನೈಟ್ ಅಳವಡಿಸಲು ತಮ್ಮ ಮಾತೋಶ್ರೀ ಲಲಿತಾ ಚಂದ್ರಕಾಂತ ನಾಯ್ಕರ ಅವರ ಹೆಸರಿನಲ್ಲಿ ಅನಿಲ ಚಂದ್ರಕಾಂತ ನಾಯ್ಕರ ಅವರು ರೂ. 50,001.00 ಗಳನ್ನು ದೇಣಿಗೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ಇಂಥ ಕೊಡುಗೈ ದಾನಿಗಳು ಮುಂದೆ ಬಂದರೆ ದೇವಾಲಯಗಳ ಅಭಿವೃದ್ಧಿ ಸಾದ್ಯ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಾಲಯದ ಟ್ರಸ್ಟ ಕಮೀಟಿ ಸದಸ್ಯ ನಿಂಗಪ್ಪ ಇಂಗಳಗಿ ಮಾತನಾಡಿ ದೇವಾಲಯ ನಿರ್ಮಾಣ ಕಾರ್ಯ ಪ್ರಗತಿಯ ಹಂತದಲ್ಲಿದ್ದು, ದೇಣಿಗೆ ಕೊಡುವವರು ಮುಂದೆ ಬರಬೇಕೆಂದು ವಿನಂತಿಸಿದರು. 

ಈ ಸಂದರ್ಭದಲ್ಲಿ ಮುತ್ತಪ್ಪ ಪೂಜಾರ, ಉಮೇಶಗೌಡ ಪಾಟೀಲ, ಬಸವರಾಜಚಕಾರಿ, ಸಂಗಪ್ಪ ಕಂಕನವಾಡ, ಸುರೇಶಗೌಡ ಪಾಟೀಲ, ಮಾಲತೇಶ ಯಲವಿಗಿ, ಮಂಜು ಕಟ್ಟಿಮನಿ, ಪ್ರಭುಗೌಡ ಪಾಟೀಲ, ಸೋಮೇಶ ಕಟ್ಟಿಮನಿ ಉಪಸ್ಥಿತರಿದ್ದರು. 


ಸುದ್ದಿ ಓದಿ