ತಾಳಿಕೋಟಿ

ರಕ್ತದಾನವು ಅತ್ಯಂತ ಪವಿತ್ರವಾದ ಕಾರ್ಯ: ಪಾಟೀಲ

ರಕ್ತದಾನವು ಅತ್ಯಂತ ಪವಿತ್ರವಾದ ಕಾರ್ಯ: ಪಾಟೀಲ

ತಾಳಿಕೋಟೆ 24: ರಕ್ತದಾನವು ಅತ್ಯಂತ ಪವಿತ್ರವಾದ ಕಾರ್ಯವಾಗಿದ್ದು, ಇಂದಿನ ಯುವಕರು ರಕ್ತದಾನದಂತಹ ಮಹಾನ್ ಕಾರ್ಯಗಳಲ್ಲಿ ಭಾಗಿಯಾಗುವುದರ ಜತೆಗೆ ಬಲಿಷ್ಠ ದೇಶದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಮುದಾಯ ಆರೊಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್‌.ಬಿ.ಪಾಟೀಲ ಹೇಳಿದರು. 

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿ.ರಯಲ್ ಸ್ಪೋರ್ಟ್ಸ ಅಸೋಶಿಯನ್‌ನ 3 ನೇ ವಾಷಿಕೋತ್ಸವ ಅಂಗವಾಗಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 

ರಕ್ತದಾನದಿಂದ ಅಪಘಾತ ಸೇರಿದಂತೆ ಇನ್ನೀತರ ಕಾಯಿಲೆಗಳಿಂದ ನರಳುವ ರೋಗಿಗಳಿಗೆ ಮರು ಜೀವ ನೀಡಿದಂತಾಗುತ್ತದೆ. ಅನ್ನದಾನಕ್ಕಿಂತ ರಕ್ತದಾನವು ಶ್ರೇಷ್ಠವಾಗಿದೆ. ಉತ್ತಮ ಹವ್ಯಾಸಗಳಿಂದ ಬಲಿಷ್ಠ ದೇಹ ಮತ್ತು ಮನಸ್ಸು ಹೊಂದಲು ಸಾಧ್ಯವಾಗುತ್ತದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿರಕ್ತದಾನ ಮಾಡುವ ಮೂಲಕ ಆರೋಗ್ಯಯುತವಾದ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. 

ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ.ಮಲ್ಲನಗೌಡ ಬಿರಾದಾರ ಮಾತನಾಡಿ, ದಿನೇ ದಿನೇ ಹೆಚ್ಚುತ್ತಿರುವ ಅಪಘಾತ, ತುರ್ತು ಅವಘಡ, ಅಕಾಲಿಕ ಕಾಯಿಲೆಗಳಿಂದಾಗಿ ರಕ್ತದಾನದ ಅವಶ್ಯ ಬಹಳಷ್ಟಿದೆ. ಈ ಬಗ್ಗೆ ಸಾರ್ವಜನಿಕರು ಕೂಡಾ ಜಾಗೃತರಾಗಿ ಹೆಚ್ಚೆಚ್ಚು ರಕ್ತದಾನಕ್ಕೆ ಮುಂದಾಗಬೇಕು ಎಂದರು. 

54 ಜನ ಯುವಕರು ರಕ್ತದಾನವನ್ನು ಮಾಡಿದರು. ಈ ಸಂದರ್ಭದಲ್ಲಿ  

ಸ್ರ್ತೀರೋಗ ವೈಧ್ಯಾಧಿಕಾರಿ ಡಾ.ಮಧು ಸಿಂಘಾಲಾ, ಡಾ.ವಿಜಯಲಕ್ಷ್ಮೀ ಹಜೇರಿ, ಡಾ.ಆಯ್‌.ಬಿ.ತಳ್ಳೋಳ್ಳಿ, ದಿ.ರಾಯಲ ಸ್ಪೋರ್ಟ್ಸ ಅಸೋಶಿಯನ್ ಅಧ್ಯಕ್ಷ ಮೈಬೂಬ ಲಾಹೋರಿ, ಕಾರ್ಯದರ್ಶಿ ಜಾವೀದ ಕೆಂಭಾವಿ, ಮಹಮ್ಮದರಫೀಕ, ಅಯ್ಯೂಬ ಮನಗೂಳಿ, ಶಬ್ಬಿರ ನಮಾಜಕಟ್ಟಿ, ವಿಜಯಕುಮಾರ ನಾಡಕರ್ಣಿ, ರಫೀಕ ಬೇಪಾರಿ, ಶಫೀಕ್ ಮುರಾಳ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ