ಹೂವಿನಹಡಗಲಿ ವಿಭಾಗೀಯ ಕಚೇರಿ ಸ್ಥಳಾಂತರ ಬೇಡ
ಹೂವಿನಹಡಗಲಿ 28- ಹೂವಿನಹಡಗಲಿಯಲ್ಲಿ ನಾನಾ ಇಲಾಖೆಯ ವಿಭಾಗಿಯ ಕಚೇರಿ ವಿಜಯನಗರ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವ ಆದೇಶವನ್ನು ಸರ್ಕಾರ ಕೈಬಿಡಬೇಕು. ಪಟ್ಟಣದಲ್ಲಿ ಮುಂದುವರಿಸಬೇಕು ಎಂದು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಒತ್ತಾಯಿಸಿದ್ದಾರೆ.
ಡಾ.ಡಿಎಂ.ನಂಜುಂಡಪ್ಪ ಸಮಿತಿ ಹೂವಿನಹಡಗಲಿಯನ್ನು ಅತೀ ಹಿಂದುಳಿದ ತಾಲೂಕು ಎಂದು ಗುರುತಿಸಿದೆ.ಹಿಂದುಳಿದ ತಾಲೂಕು ಅಭಿವೃದ್ದಿ ಪಡಿಸುವ ದಿಸೆಯಲ್ಲಿ ಎಂ.ಪಿ.ಪ್ರಕಾಶ್ ಅವರು ಪೊಲೀಸ ಇಲಾಖೆ ಉಪ ವಿಭಾಗ, ಪಿಡ್ಲೂಡಿ ಕಚೇರಿ ಹಡಗಲಿಗೆ ಮಂಜೂರು ಮಾಡಿಸಿದ್ದರು. ಹೊಸ ಜಿಲ್ಲೆ ಆಗುವ ಮುನ್ನವೇ ಡಿವೈಎಸ್ಪಿ ಕಚೇರಿ ಸ್ಥಳಾಂತರಗೊಂಡಿದ್ದು, ಇದೀಗ ಪಿಡ್ಲೂಡಿ ವಿಭಾಗ ಕಚೇರಿ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಲು ಆದೇಶಸಿರುವುದು ಸರಿಯದ ಕ್ರಮವಲ್ಲ.
ವಿಜಯನಗರ ಜಿಲ್ಲೆ ರಚನೆಗೆ ಪಶ್ಚಿಮ ತಾಲೂಕಿನ ಜನರು ಬೆಂಬಲಿಸಿದ್ದಾರೆ. ಇಲ್ಲಿನ ಕಚೇರಿ ಕಿತ್ತಕೊಳ್ಳುವುದರಿಂದ ಈ ಭಾಗದ ಅಭಿವೃದ್ದಿಗೆ ಹಿನ್ನಡೆಯಾಗಲಿದೆ.ಎಲ್ಲ ಕಚೇರಿಗಳಿಗೂ ಸ್ವಂತ ಕಟ್ಟಡ ,ಮೂಲ ಸೌಲಭ್ಯ ಇರುವುದರಿಂದ ಇಲ್ಲಿಯೇ ಮುಂದುವರಿಸಬೇಕು.ಜಿಲ್ಲಾ ಕೇಂದ್ರಕ್ಕೆ ಹೊಸ ಕಚೇರಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.