ತಾಳಿಕೋಟಿ

ಆರೋಗ್ಯದ ಕುರಿತು ನಿರ್ಲಕ್ಷ್ಯ ಬೇಡ: ಮಾಜಿ ಸಚಿವ ನಾಡಗೌಡ

ಆರೋಗ್ಯದ ಕುರಿತು ನಿರ್ಲಕ್ಷ್ಯ ಬೇಡ: ಮಾಜಿ ಸಚಿವ ನಾಡಗೌಡ

ತಾಳಿಕೋಟಿ 05 : ಆರೋಗ್ಯದ ಕುರಿತು ಇಂದು ನಾವು ಹೆಚ್ಚು ಜಾಗೃತರಾಗುವ ಅಗತ್ಯ ಇದೆ. ವಾತಾವರಣ ಹಾಗೂ ಆಹಾರ ಪದ್ಧತಿಯಲ್ಲಿಯ ತೀವ್ರ ಬದಲಾವಣೆಯಿಂದಾಗಿ ಗಂಭೀರವಾದ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತೀವೆ. ಯಾವಕಾರಣಕ್ಕೂ ಆರೋಗ್ಯದ ಬಗ್ಗೆ ನಿಷ್ಕಾಳಜಿ ಬೇಡ ಎಂದು ಮಾಜಿ ಸಚಿವ ಸಿ ಎಸ್ ನಾಡಗೌಡ (ಅಪ್ಪಾಜಿ) ಹೇಳಿದರು. 

ಸಮೀಪದ ಹಂದ್ರಾಳ ಗ್ರಾಮದಲ್ಲಿ ಸೋಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಕಾ ಸುಬ್ಬರಾವ್ ಪೌಂಡೇಶನ್ ಮುದ್ದೇಬಿಹಾಳ, ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಸ್ಪಂಧನಾ ಆಸ್ಪತ್ರೆ ವಿಜಯಪೂರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಗ್ರಾಮೀಣ ಪ್ರದೇಶದ ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ನಿರಂತರವಾಗಿ ಇಂತಹ ಉಚಿತ ಶಿಬಿರಗಳನ್ನು ನಡೆಸುತ್ತಿರುವ ದೇವಿಕಾ ಸುಬ್ಬರಾವ್ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಪಲ್ಲವಿ ನಾಡಗೌಡ, ಅನುಗ್ರಹ ಕಣ್ಣಿನ ಆಸ್ಪತ್ರ್ರೆ ಮುಖ್ಯಸ್ಥ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹಾಗೂ ಈ ಶಿಬಿರವನ್ನು ಸಂಘಟಿಸಿದ ಇಂಜೀನೀಯರ್ ವಿಶ್ವನಾಥ ಬಿರಾದಾರ ಇವರ ಕಾರ್ಯ ಶ್ಲಾಘನೀಯವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು. 

ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್ ಎಸ್ ಪಾಟೀಲ(ಕೂಚಬಾಳ) ಮಾತನಾಡಿ ಇಂದು ನಾವು ಐಶಾರಾಮಿ ಬದುಕಿನ ಹಿಂದೆ ಬಿದ್ದು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಇಂದು ನಮ್ಮ ಬಳಿ ಸಂಪತ್ತಿದೆ ಆದರೆ ನೆಮ್ಮದಿ ಇಲ್ಲ ನೆಮ್ಮದಿಯ ಬದುಕಿಗೆ ಮನುಷ್ಯನ ಆರೋಗ್ಯ ಮತ್ತು ಮನಸ್ಸು ಉತ್ತಮವಾಗಿರಬೇಕು. ಬದುಕಿನ ಒತ್ತಡದಿಂದಾಗಿಯೇ ಇಂದು ನಾವು ಗಂಭಿರ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಆರೋಗ್ಯದ ಮಹತ್ವ ನಾವೇಲ್ಲರೂ ತಿಳಿದುಕೊಳ್ಳಬೇಕಾಗಿದೆ ಎಂದರು. 

ಜಿ.ಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ ನಮ್ಮ ಬದುಕು ಸಾರ್ಥಕ ಬದುಕಾಗಬೇಕಾದರೆ. ನಾವೇಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ ಆರೋಗ್ಯವಂತ ಸಮಾಜದಿಂದ ಮಾತ್ರ ಸಧೃಡ ದೇಶ ಕಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.  

ಈ ಶಿಬಿರದಲ್ಲಿ ಸುಮಾರು 750ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು. ಸುಮಾರು 50 ಜನರನ್ನು ನೇತ್ರ ಚಿಕಿತ್ಸೆಗಾಗಿ ಆಯ್ಕೆ ಮಾಡಲಾಯಿತು.  

ತಜ್ಞ ವೈದ್ಯ ಡಾ. ಪ್ರಭುಗೌಡ ಲಿಂಗದಳ್ಳಿ, ಡಾ. ಮಾಲಿನಿ ಪ್ರಭುಗೌಡ, ಡಾ. ಸಂತೋಷ ಪಾಟೀಲ, ಡಾ. ರೋಹಿಣಿ ಪಾಟೀಲ, ಡಾ. ರಾಮನಗೌಡ ಬಿರಾದಾರ, ಡಾ. ಅನೀತಾ ಬಿರಾದಾರ, ಡಾ. ಸಮೀರ ಕಾಚೂರ, ಡಾ. ಬಾಲಪ್ಪಗೌಡ ಪಾಟೀಲ, ಡಾ. ಅನೀಲ ಸಜ್ಜನ, ಅವರು ತಪಾಸಣೆ ನಡೆಸಿದರು. 

ಗಣ್ಯರಾದ ಬಸನಗೌಡ ಲಿಂಗದಳ್ಳಿ, ಸಿದ್ಧನಗೌಡ ಬಿರಾದಾರ, ವಿಶ್ವನಾಥ ಬಿರಾದಾರ, ಡಾ. ಸಂತೋಸ ಬಿರಾದಾರ, ಚಿನ್ನುಧಣಿ (ಬಸರಕೋಡ), ರಾಹುಲ ನಾಡಗೌಡ, ಶರಣಗೌಡ ದೇಶಮುಖ, ಪ್ರಭುಗೌಡ ಮದರಕಲ್ಲ, ಸಂಗನಗೌಡ ಅಸ್ಕಿ, ಶಿಕ್ಷಕರಾದ ಎನ್ ಎಸ್ ರಾಮಗಿರಿಮಠ, ಶರಣಗೌಡ ಚೀರಲದಿನ್ನಿ ಇದ್ದರು. 


ಸುದ್ದಿ ಓದಿ