ಹೆಚ್ಐವಿ ಸೋಂಕಿರನ್ನು ಕೀಳಾಗಿ ಕಾಣದಿರಿ: ಜಾಲವಾದಿ
ತಾಳಿಕೋಟೆ 02: ಹೆಚ್ಐವಿ ಸೋಂಕಿತರೊಂದಿಗೆ ಕುಳಿತು ಊಟ ಮಾಡಿದರೆ ಅಥವಾ ಒಂದೇ ಮನೆಯಲ್ಲಿ ವಾಸವಿದ್ದ ಮಾತ್ರಕ್ಕೆ ಸೋಂಕು ಇತರರಿಗೆ ಹರಡುವದಿಲ್ಲ. ಹೆಚ್ಐವಿ ಸೋಂಕಿರನ್ನು ಕೀಳಾಗಿ ಕಾಣುವದು, ಸಾಮಾಜಿಕ ದೂರವಿರುಸುವದು ಸರಿಯಲ್ಲ ಎಂದು ಪ್ರಾಚಾರ್ಯ ಆರ್. ವಿ. ಜಾಲವಾದಿ ಹೇಳಿದರು.
ಅವರ ಪಟ್ಟಣದ ವೀ.ವಿ. ಸಂಘದ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು, ಎನ್.ಸಿ.ಸಿ, ಯುಥ್ ರೆಡ್ ಕ್ರಾಸ್ ಹಾಗೂ ಪ್ರಾಣಿಶಾಸ್ತ್ರ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಏಡ್ಸ್ ರೋಗವು ಮಹಾಮಾರಿಯಾಗಿದ್ದು ವಿಶ್ವಕ್ಕೆ ಒಂದು ಕಂಟಕವಾಗಿ ಪರಿಣಮಿಸಿದೆ. ಈ ರೋಗವು ಮಲೇರಿಯಾ, ಕ್ಷಯ ರೋಗ ಮೊದಲಾದವುಗಳಿಗಿಂತಲೂ ಭಯಾನಕವಾಗಿರುವುದರಿಂದ ಹಾಗೂ ಈ ರೋಗಕ್ಕೆ ನಿರ್ದಿಷ್ಟವಾದ ಓಷಧಗಳಿಲ್ಲದ ಕಾರಣ ಈ ರೋಗ ಹರಡದಂತೆ ಜಾಗ್ರತೆ ವಹಿಸಬೇಕೆಂದು ಕರೆ ನೀಡಿದರು. 2021ನೇ ವರ್ಷದ ಏಡ್ಸ್ ದಿನದ ಘೋಷ ವಾಕ್ಯ “ಏಡ್ಸ್ ಮುಕ್ತ ದೇಶ” ಆಗಿದೆ. ಆದ್ದರಿಂದ ಏಡ್ಸ್ ತಡೆಗಾಗಿ ಜಾಗತಿಕ ಮಟ್ಟದಲ್ಲಿ ಒಗ್ಗಟ್ಟು ಮತ್ತು ಜವಾಬ್ದಾರಿಯ ಅವಶ್ಯಕತೆ ಇದೆ ಎಂದರು.
ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಕೆ.ಬಿ.ದೇಸಾಯಿ ಮಾತನಾಡಿ, ಏಡ್ಸ್ ರೋಗವು ಸ್ವಯಾರ್ಜಿತವಾಗಿದ್ದು, ಯುವಜನಾಂಗವು ನೈತಿಕ ಜೀವನ ಸಾಗಿಸುವ ಮೂಲಕ ಅದು ಬರದಂತೆ ನೋಡಿಕೊಳ್ಳಬೆಕು ಎಂದರು.
ಈ ಸಂಧರ್ಭದಲ್ಲಿ ಎನ್.ಎಸ್.ಎಸ್. ಘಟಕ-2 ಕಾರ್ಯಕ್ರಮಾಧಿಕಾರಿ ಡಾ.ದೀಪಾ ಮಾಳಗೆ, ಯುತ್ ರೆಡ್ ಕ್ರಾಸ್ ಘಟಕಾಧಿಕಾರಿ ಡಾ.ಅಜೇಯ ಅಬ್ಬಾರ, ಎನ್.ಎಸ್.ಎಸ್. ಘಟಕ-1 ರ ಕಾರ್ಯಕ್ರಮಾಧಿಕಾರಿ ಪ್ರೋ.ರಮೇಶ ಜಾಧವ, ಆರ್.ವಿ.ಮಿಸ್ಕಿನಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೊಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.