ಉತ್ಸವ ಸೌಹಾರ್ದಕ್ಕೆ ಧಕ್ಕೆ ತರದಿರಲಿ: ವಾಗ್ಮೋಡೆ
ತಾಳಿಕೋಟೆ28: ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಶಾಂತಿಗೆ ಧಕ್ಕೆ ತರುವ ಘಟನೆಗಳು ನಡೆಯದಂತೆ ವರ್ತಿಸಿ, ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಿ ಎಂದು ಸಿಪಿಐ ಆನಂದ ವಾಗ್ಮೋಡೆ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಅಂಗವಾಗಿ ನಡೆದ ಶಾಂತಿ ಪಾಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆ.31ರಂದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಈ ವೇಳೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಟೆಂಟ್ ಹಾಕಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಅನ್ಯ ಧರ್ಮಿಯರಿಗೆ ತೊಂದರೆಯಾಗುವಂತ ಹಾಡುಗಳನ್ನು ಹಾಕಬಾರದು. ಪೊಲೀಸ್ ಠಾಣೆಯಲ್ಲಿಯೇ ವಿವಿಧ ಇಲಾಖೆಗಳ ಅನುಮತಿಗೆ ಒಂದೇ ಕಡೆ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ದಾಖಲೆ ನೀಡಿ ಪಡೆದುಕೊಳ್ಳಬೇಕು. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಬೆಂಕಿ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕಗೆ ಕ್ರಮ ಕೈಗೊಳ್ಳಬೇಕೆಂದು. ಠಾಣೆಯ ವ್ಯಾಪ್ತಿಯಲ್ಲಿ 120 ಕ್ಕು ಅಧಿಕ ಸಾಮುಹಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಎಲ್ಲ ಕಡೆಗಳನ್ನು ಪೊಲೀಸ್ ಬಂದೋಬಸ್ತ್ ಅಸಾಧ್ಯ. ಹಿಗಾಗಿ ಗಣೇಶ ಮಂಡಳಿಗಳು ಸ್ವಯಂ ಸೇವಕರನ್ನು ನೇಮಿಸಿ ದಿನದ 24 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಗಣೇಶ ಮೂತರ್ಿಯನ್ನು ಕಾಯಬೇಕು. ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಪ್ರತಿಷ್ಠಾಪನೆ ಸಂದರ್ಭದಲ್ಲಿ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಸುಪ್ರೀಕೋರ್ಟ ಆದೇಶದಂತೆ ಡಿಜೆಗಳನ್ನು ನಿಷೇದಿಸಲಾಗಿದ್ದು ಗಣೇಶ ಮಂಡಳಿಗಳು ಸರಕಾರದ ಆದೇಶಗಳನ್ನು ಪಾಲಿಸಬೇಕು ಎಂದರು.
ಪುರಸಭೆ ಸದಸ್ಯ ವಾಸುದೇವ ಹೆಬಸೂರ, ರಾಘವೇಂದ್ರ ವಿಜಯಪುರ, ಜೈಸಿಂಗ ಮೂಲಿಮನಿ, ಬಿಜೆಪಿ ಮುಖಂಡ ಶಿವಶಂಕರ ಹಿರೇಮಠ ಮಾತನಾಡಿ, ಸಕರ್ಾರದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸುವ ಜತೆಗೆ ಪೊಲೀಸ್ ಇಲಾಖೆಗೆ ಸಹಕರಿಸಲಾಗುವುದೆಂದು ತಿಳಿಸಿದರು. ಹೆಸ್ಕಾಂ ಇಲಾಖೆಯ ಸಹಾಯಕ ಇಂಜೀನಿಯರ್ ಶಿವನಗೌಡ ಪಾಟೀಲ, ಪುರಸಭೆ ಆರೋಗ್ಯ ಅಧಿಕಾರಿ ಶಿವಾನಂದ ಜುಮನಾಳ ಇಲಾಖೆಗಳು ಕೈಕೊಳ್ಳುವ ಕ್ರಮಗಳ ಜೊತೆ ಕೇಲವು ಎಚ್ಚರಿಕೆಗಳನ್ನು ಸಹ ತಿಳಿಸಿದರು.
ಮುಖಂಡ ರಾಜು ಹಂಚಾಟೆ ಮಾತನಾಡಿ, ಡೋಣಿ ನದಿಯಲ್ಲಿ ಗಣೇಶ ಮೂರ್ತಿವಿಸರ್ಜನೆಯ ಸ್ಥಳಕ್ಕೆ ಒಳಚರಂಡಿ ನೀರು ಬರುತ್ತಿದ್ದು ಅದನ್ನು ತಡೆಯಬೇಕು ಎಂದು ಒತ್ತಾಯ ಮಾಡಿದರು.
ಪಿಎಸೈ ವಿನೋದ ದೊಡಮನಿ, ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಮಹಿಬೂಬ್ ಚೋರಗಸ್ತಿ, ಸಹಾಯಕ ಅಗ್ನಿಶಾಮಕ ಅಧಿಕಾರಿ ಎಚ್.ಎಸ್.ಗುರನಗೋಳ, ಮುಖಂಡರುಗಳಾದ ಶಶಿದರ ಡಿಸಲೆ, ವಿಶ್ವನಾಥ ಬಿದರಕುಂದಿ, ಪುರಸಭೆ ಸದಸ್ಯ ಡಿ.ವಿ.ಪಾಟೀಲ, ನಾಗಪ್ಪ ಚಿನಗುಡಿ, ಮಲ್ಲು ಮದರಕಲ್ಲ, ಮಂಜು ಶೆಟ್ಟಿ, ಸಿದ್ದನಗೌಡ ಪಾಟೀಲ, ಸುರೇಶ ಹಜೇರಿ, ಕಾಶಿನಾಥ ಅರಳಿಚಂಡಿ, ಗ್ರಾಮೀಣ ಪ್ರದೇಶದ ಹಾಗೂ ಪಟ್ಟಣ ಪ್ರದೇಶದ ಗಣೇಶ ಉತ್ಸವ ಮಂಡಳಿ ಮುಖಂಡರು ಇದ್ದರು. ಪೊಲೀಸ್ ಸಿಬ್ಬಂದಿ ಬಸವರಾಜ ಕಳ್ಳಿಗುಡ್ಡ ನಿರೂಪಿಸಿದರು.