ತಾಳಿಕೋಟಿ

ಹೃದಯಾಘಾತದ ಬಗ್ಗೆ ಭಯ ಬೇಡ ಮುನ್ನಚ್ಚರಿಕೆ ಇರಲಿ

ಹೃದಯಾಘಾತದ ಬಗ್ಗೆ ಭಯ ಬೇಡ ಮುನ್ನಚ್ಚರಿಕೆ ಇರಲಿ
ತಾಳಿಕೋಟೆ ಪಟ್ಟಣದಲ್ಲಿ ರೋಟರಿ ಕ್ಲಬ್ ನೇತೃತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಚರ್ಮ ರೋಗ ತಜ್ಞ ಡಾ.ಸಿದ

ತಾಳಿಕೋಟೆ: ಹೃದಯಾಘಾತದ ಲಕ್ಷಣ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಆದರೆ ಮೊದಲ ಒಂದು ಗಂಟೆಯ ಅವಧಿಯೊಳಗೆ ಚಿಕಿತ್ಸೆ ದೊರೆತರೆ ಜೀವವನ್ನು ಉಳಿಸಬಹುದು ಎಂದು ಖ್ಯಾತ ಹೃದಯ ರೋಗ ತಜ್ಞ ಡಾ.ಶಂಕರಗೌಡ ಪಾಟೀಲ ಹೇಳಿದರು. 

ಅವರು ಪಟ್ಟಣದ ಡಾ.ಜಿ.ಆರ್‌.ಭಟ್ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಹಾಗೂ ಭಾರತೀಯ ವೈಧ್ಯಕೀಯ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 

ಪ್ರತಿ ಹೃದಯಾಘಾತದ ಲಕ್ಷಣಗಳೂ ಬೇರೆ ಬೇರೆಯಾಗಿರುತ್ತವೆ. ಹೀಗಾಗಿ ಈ ಹಿಂದೆ ಹೃದಯಾಘಾತವಾಗಿದ್ದವರಿಗೂ ಕೆಲವೊಮ್ಮೆ ಇದು ಮರುಕಳಿಸುವಾಗ ಗುರುತಿಸುವಂತ ಲಕ್ಷಣಗಳ ಅನುಭವವಾಗುವುದಿಲ್ಲ. ಹೃದಯಾಘಾತವಾದ ವ್ಯಕ್ತಿಗಳಲ್ಲಿ 1ಅ ಮಾತ್ರ ಜನ ಸಾವನ್ನಪ್ಪುತ್ತಾರೆ. ಶೇ.99 ಜನ ಗುಣಮುಖರಾಗುತ್ತಾರೆ. ಇದರಿಂದ ಹೃದಯಾಘಾತದಿಂದ ಬಗ್ಗೆ ಭಯ ಬೇಡ ಮುನ್ನಚ್ಚಿರಿಕೆ ಇರಲಿ ಎಂದರು. 

ಸಕ್ಕರೆ ರೋಗ ತಜ್ಞ ಡಾ.ವಿಜಯಕುಮಾರ ಭಾವಿ ಮಾತನಾಡಿ, ಎಲ್ಲ ರೋಗಗಳಿಗೆ ಮೂಲ ಕಾರಣ ಸಕ್ಕರೆ ಕಾಯಿಲೆಯಾಗಿದೆ. ಸಕ್ಕರೆ ಕಾಯಿಲೆ ಬರಲು ವಯಸ್ಸಿನ ಮಿತಿ ಇಲ್ಲಾ. ಚಿಕ್ಕ ವಯಸ್ಸಿನವರಲ್ಲಿಯೂ ಸಹ ಇತ್ತಿಚಿಗೆ ಸಕ್ಕರೆ ಕಾಯಿಲೆ ಕಂಡು ಬರುತ್ತಿದೆ. ಸಕ್ಕರೆ ಕಾಯಿಲೆ ಬಗ್ಗೆ ಭಯ ಬೇಡ. ಮುಂಜಾಗ್ರತೆ ವಹಿಸಿದರೆ ಸಾಕು. ದೇಶದ ಪ್ರತಿ 5 ಜನರಲ್ಲಿ ಒಬ್ಬರಿಗೆ ಸಕ್ಕರೆ ಕಾಯಿಲೆ ಇದೆ. ಸಕ್ಕರೆ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದೇ ರೀತಿ ಮುಂದುವರೆದರೆ ಅತಿ ಹೆಚ್ಚು ಅಕ್ಕರೆ ಕಾಯಿಲೆ ಹೊಂದಿರುವ ರೋಗಿಗಳ ಅತಿ ದೊಡ್ಡ ದೇಶವಾಗಲಿದೆ. ವರ್ಷದಲ್ಲಿ ಒಮ್ಮೆಯಾದರು ಸಕ್ಕರೆ ಕಾಯಿಲೆ ಪರೀಶೀಲಿಸಿಕೊಳ್ಳಿಎಂದು ಸಲಹೆ ನೀಡಿದರು. 

ಚರ್ಮ ರೋಗ ತಜ್ಞ ಡಾ.ಸಿದ್ರಾಮಪ್ಪ ವಾರದ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಚಿನ್ನಪ್ಪಗೌಡ ಮಾಳಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ಭಾರತೀಯ ವೈಧ್ಯಕೀಯ ಸಂಘದ ಅಧ್ಯಕ್ಷೆ ಡಾ.ಗಂಗಾಂಭಿಕಾ ಪಾಟೀಲ, ಕಾರ್ಯದರ್ಶಿ ಡಾ.ಆನಂದ ಭಟ್, ರೋಟರಿ ಕ್ಲಬ್ ಕಾರ್ಯದರ್ಶಿ ಶ್ಯಾಮ ಹಂಚಾಟೆ ವೇದಿಕೆ ಮೇಲಿದ್ದರು. ಎಸ್‌.ಕೆ.ಪದವಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು. ಶಿಬಿರದಲ್ಲಿ ಒಟ್ಟು 382 ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ರೋ.ಡಾ.ಎ.ಎ.ನಾಲಬಂದ, ಘನಶ್ಯಾಮ ಹಂಚಾಟೆ, ಬಸವರಾಜ ಕುಂಬಾರ, ಎಮ್‌.ಆರ್‌.ಕತ್ತಿ ಸೇರಿದಂತೆ ಇತರರು ಇದ್ದರು. ರೋ,ಅಶೋಕ ಬಳಗಾನೂರ ನಿರೂಪಿಸಿದರು. ಶ್ಯಾಮ ಹಂಚಾಟೆ ವಂದಿಸಿದರು.  

ಸುದ್ದಿ ಓದಿ