ಶಿಗ್ಗಾವ್

ಹೆಚ್‌.ಐ.ವ್ಹಿ ಏಡ್ಸ ಬಗ್ಗೆ ಭಯ ಬೇಡ : ಶ್ರೀದೇವಿ ದರಬಾರೆ

ಹೆಚ್‌.ಐ.ವ್ಹಿ ಏಡ್ಸ ಬಗ್ಗೆ ಭಯ ಬೇಡ : ಶ್ರೀದೇವಿ ದರಬಾರೆ

ಲೋಕದರ್ಶನ ವರದಿ 

ಶಿಗ್ಗಾವಿ 04: ಹೆಚ್‌.ಐ.ವ್ಹಿ ಏಡ್ಸ ಬಗ್ಗೆ ಭಯ ಬೇಡ ದೇಶದ ಎಲ್ಲ ಪ್ರಜೆಗಳನ್ನು ಕಳಂಕ ತಾರತಮ್ಯದಿಂದ ಕಾಣದೇ ಪ್ರೀತಿ ವಿಶ್ವಾಸದಿಂದ ಕಂಡು ಅವರಿಗೂ ಸಹಿತ ಬದುಕಿ ಹಾಗೂ ಬದುಕಲು ಬಿಡಿ ಎಂದು ದಿವಾಣಿ ನ್ಯಾಯದೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಮತ್ತು ತಾಲೂಕ ಕಾನುನು ಸೇವಾ ಸಮಿತಿಯ ಶ್ರೀದೇವಿ ದರಬಾರೆ ಹೇಳಿದರು. 

ಪಟ್ಟಣದ ರಂಭಾಪುರಿ ಮಹಾವಿದ್ಯಾಲಯದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಆರೋಗ್ಯ ಇಲಾಖೆ, ರಂಭಾಪುರಿ ಪಿ.ಯು.ಕಾಲೇಜ ಹಾಗೂ ಎನ್‌.ಎಸ್‌.ಎಸ್ ಘಟಕ, ಸ್ಪಂದನಾ ಸಂಸ್ಥೆ, ಸಂಜೀವಿನಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ ದಿನಾಚರಣೆ ಪ್ರಯುಕ್ತ ಅರಿವು ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿದ ಅವರು ಯಾವುದೇ ರೋಗಗಳಾಗಲಿ ರೋಗಿಗಳಿಗೆ ತಾರತಮ್ಯ ಮಾಡದೇ ಆರೈಕೆ ಬೆಂಬಲದ ಜೊತೆಗೆ ಉತ್ತಮ ಚಿಕಿತ್ಸೆ ನೀಡಿದಾಗ ಅವರು ಆಯುಷ್ಯ ವೃದ್ದಿಸುತ್ತದೆ ಅಲ್ಲದೇ ಆ ರೋಗದ ಬಗ್ಗೆ ಇರುವ ಭಯವನ್ನು ಹೋಗಲಾಡಿಸುತ್ತದೆ ಆದ್ದರಿಂದ ಏಡ್ಸ ರೋಗಿಗಳಿಗೆ ಆಪ್ತಸಮಾಲೋಚನೆ ಅವಶ್ಯವಾಗಿದೆ ಎಂದರು. 

ಜಿಲ್ಲಾ ಆಸ್ಪತ್ರೆಯ ಹಿರಿಯ ಆಪ್ತಸಮಾಲೋಚಕ ಸುಧಾಕರ ದೈವಜ್ಞ ಮಾತನಾಡಿ ಹೆಚ್‌.ಐ.ವ್ಹಿ ಏಡ್ಸ ಬಗ್ಗೆ ಇನ್ನೂ ಸಾರ್ವಜನಿಕರಲ್ಲಿ ಭಯದ ವಾತಾವರಣವಿದೆ  ಧನಾತ್ಮಕವಾಗಿ ವಿಚಾರ ಮಾಡದೇ ನಕಾರಾತ್ಮಕವಾಗಿ ವಿಚಾರ ಮಾಡುತ್ತಾ ಹೋದರೆ ಮುಂದಿನ ದಿನಗಳು ಕಷ್ಟದಾಯಕವಾಗಿರುತ್ತವೆ ಅದಕ್ಕೆ ನಾವೇ ನೇರ ಹೊಣೆಗಾರರಾಗಿರುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದರು. 

ಹಿರಿಯ ನ್ಯಾಯವಾದಿ ಎಂ.ಹೆಚ್‌.ಬೇಂಡಿಗೇರಿ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ನಾವು ಧರ್ಮಪಾಲನೆ ಮತ್ತು ನೈತಿಕತೆ ಮರೆತು ಇಂತಹ ಕಾಯಿಲೆಗಳಿಗೆ ಮಾರುಹೋಗುತ್ತಿದ್ದೇವೆ ಆದ್ದರಿಂದ ಯುವಕರು ನಿಮ್ಮ ಅಮೂಲ್ಯವಾದ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಿರಿ ಎಂದರು. 

ಪ್ರೋ ಎಸ್‌.ಎನ್‌. ತೀರ್ಥ ಅಧ್ಯಕ್ಷತೆವಹಿಸಿ ಮಾತನಾಡಿ 14 ರಿಂದ 18 ವರ್ಷದ ಮಕ್ಕಳು ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದು ಆ ನಿಟ್ಟಿನಲ್ಲಿ ಅಂತಹ ತಂದೆ ತಾಯಿಯವರೆಗೆ ಮಕ್ಕಳ ವರ್ತನೆಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಲು ತಿಳಿಸುವುದು ನಮ್ಮ ಜವ್ದಾಬಾರಿ ಆಗಿದೆ ಎಂದರು. 

ಈ ಸಂದರ್ಭದಲ್ಲಿ ಆಪ್ತಸಮಾಲೋಚಕಿ ರೇಣುಕಾ ಹೊಸಮನಿ, ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ಪ್ರೊ. ಎಂ.ಎಸ್‌.ಸಿದ್ದಪ್ಪನವರ, ಎಸ್‌.ವ್ಹಿ.ಬಳಿಗಾರ, ಶೋಭಾ ನಾಯಕ್, ಶಮ್ಸ ತಬರೀಜ್, ಸ್ಪಂದನಾ ಸಂಸ್ಥೆಯ ಪರಮೇಶ, ಶಾಂತಾ ಮತ್ತೂರ, ಸಂಜೀವಿನಿ ಸಂಸ್ಥೆಯ ಹನುಮಂತ, ಪಕ್ಕಿರೇಶ ಹಿರೇಮಠ, ಚಂದ್ರು,  ಎನ್‌.ಎಸ್‌.ಎಸ್, ವಿಧ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎನ್‌.ಎಸ್‌.ಎಸ್ ಯೋಜನಾಧಿಕಾರಿ ಪ್ರೋ ಎಸ್‌.ಆರ್‌.ಪೂಜಾರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು, ಪ್ರೋ ಎನ್‌.ಎಸ್‌.ಸಂಗಣ್ಣವರ ವಂದಿಸಿದರು. 


ಸುದ್ದಿ ಓದಿ