ಧಾರ್ಮಿಕ ಸಂಘರ್ಷಗಳಿಗೆ ಅವಕಾಶ ನೀಡುವುದು ಬೇಡ: ಶಿವಲಿಂಗ ಶಿವಾಚಾರ್ಯಶ್ರೀ
ಬ್ಯಾಡಗಿ 26: ಧಾರ್ಮಿಕ ಸಂಘರ್ಷಗಳಿಗೆ ಅವಕಾಶ ನೀಡುವುದು ಬೇಡ, ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಯಾರಿಂದಲೂ ಸಹ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಅನ್ಯ ಧರ್ಮೀಯರನ್ನೂ ಗೌರವಿಸುವಂತಹ ಮನೋಭಾವನೆ ಪ್ರತಿಯೊಬ್ಬರೂ ಬೆಳೆಸಿಕೊಳ್ಳುವಂತೆ ರಟ್ಟಿಹಳ್ಳಿ ಕಬ್ಬಿಣ ಕಂತಿಮಠದ ಶಿವಲಿಂಗ ಶಿವಾಚಾರ್ಯಶ್ರೀ ಕರೆ ನೀಡಿದರು.
ಪಟ್ಟಣದ ಬೆಟ್ಟದಮಲ್ಲೇಶ್ವರ ನಗರದಲ್ಲಿ ನೂತನವಾಗಿ ನಿರ್ಮಿಸಿದ ಕಾಳಿಕಾದೇವಿಮಂದಿರ ಉದ್ಘಾಟನೆ ಮತ್ತು ದೇವಿಮೂರ್ತಿ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ದೇವಾಲಯಗಳು ಧಾರ್ಮಿಕ ಪರಂಪರೆಗಳ ಪ್ರತೀಕವಾಗಿವೆ ಅವುಗಳ ನಿರ್ಮಾಣಕ್ಕೆ ಸಂಘರ್ಷಗಳು ನಡೆಸುವುದು ಸರಿಯಾದ ಕ್ರಮವಲ್ಲ, ಹುಟ್ಟಿದ ಪ್ರತಿಯೊಬ್ಬನಿಗೂ ತನ್ನದೇ ಆದ ಧಾರ್ಮಿಕ ವಿಧಿ ವಿಧಾನಗಳಿರುತ್ತವೆ ಆದರೆ ಆಚರಣೆಯಲ್ಲಿ ನಾವುಗಳು ಸ್ಪರ್ಧೇಗಿಳಿಯುತ್ತಿರುವುದು ಬಹಳಷ್ಟು ಅಪಾಯಕಾರಿ ವಿಷಯ ಎಂದರು.
ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗುತ್ತಿದೆ:ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಯುದ್ಧ ಪರಂಪರೆಯಿಂದ ಶಾಂತಿ ಸಾಧ್ಯವಿಲ್ಲ ಎಂಬುದನ್ನು ಅರಿತ ಬಸವೇಶ್ವರ, ಕನಕದಾಸ, ಗೌತಮ ಬುದ್ಧರು ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಧಾರ್ಮಿಕ ಭೋಧನೆಗಳಲ್ಲಿ ತೊಡಗುವ ಮೂಲಕ ದಾರ್ಶನಿಕರಾದರಲ್ಲದೇ ಇಡೀ ವಿಶ್ವಕ್ಕೆ ಅನ್ವಯಿಸುವಂತಹ ಮಾರ್ಗದರ್ಶನಗಳನ್ನು ನೀಡಿದ್ದಾರೆ ಅಂತಹದ್ದೊಂದು ವಿಶಿಷ್ಟ ಪರಂಪರೆ ಹೊಂದಿರುವ ಭಾರತ ಇದೀಗ ಧಾರ್ಮಿಕ ಸಂಘರ್ಷಗಳಿಗೆ ಕಾರಣವಾಗು ತ್ತಿರುವುದು ದುರಂತದ ಸಂಗತಿ ಎಂದರು.
ಧಾರ್ಮಿಕ ಕೆಲಸಗಳಿಗೆ ಪ್ರಸಿದ್ಧಿ: ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬ್ಯಾಡಗಿ ಪಟ್ಟಣ ಮೆಣಸಿನಕಾಯಿಗೆ ಖ್ಯಾತಿಯಾದಂತೆ, ದಾನ, ಧರ್ಮ, ಪುಣ್ಯ ಕಾರ್ಯಗಳಿಗೆ ಪ್ರಸಿದ್ಧಿ ಪಡೆದಿದೆ ಬಹು ದಿನಗಳ ಬಳಿಕ ಸಾರ್ವಜನಿಕರ ಸಹಕಾರದಿಂ ದ ಕಾಳಿಕಾಮಂದಿರ ನಿರ್ಮಿಸಲಾಗಿದೆ, ನಿತ್ಯ ಆರಾಧನೆ, ಪೂಜೆ ಪುಣ್ಯ ಸ್ಮರಣೆ ಜನಪರ ಕಾರ್ಯಕ್ರಮಗಳು ಮಂದಿರದಲ್ಲಿ ನಡೆ ಯುವಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು.
ಸನಾತನ ಸಂಸ್ಕೃತಿ ಉಳಿಯಲಿ:ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಹಬ್ಬ ಹರಿದಿನ ಗಳಲ್ಲಿ ದೇವಸ್ಥಾನ, ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನುಷ್ಯನಿಗೆ ಉತ್ತಮ ಆಲೋಚನೆಗಳು, ಸದಾಚಾರ ಭಾ ವನೆ ವೃದ್ಧಿಯಾಗಲಿದೆ, ಇತ್ತೀಚೆಗೆ ಯುವಕರು ಮೊಬೈಲ್ನಲ್ಲಿ ಕಾಲ ಕಳೆಯುತ್ತಿದ್ದು ಸನಾತನ ಸಂಸ್ಕೃತಿಯಿಂದ ದೂರ ಸರಿ ಯುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಗಂಗಣ್ಣ ಎಲಿ, ಪುರಸಭೆ ಸದಸ್ಯರಾದ ಬಿ.ಎಂ.ಛತ್ರದ ಸುಭಾಸ ಮಾಳಗಿ, ಮಾಲತೇಶ ಶಿಡ್ಲಣ್ಣನವರ, ರವಿ ಬಂಡಿವಡ್ಡರ, ಫಕ್ಕೀರ್ಪ ಮಜ್ಜಗಿ, ವಿಷ್ಣುಕಾಂತ ಬೆನ್ನೂರು ಇನ್ನಿತರರಿದ್ದರು.