ಬಿಜ್ಜಳನ ಸೈನಿಕರೊಂದಿಗೆ ಹೋರಾಡಿ ವಚನ ಸಂಗ್ರಹ ಸಂರಕ್ಷಣೆ: ಕುಕನೂರು
ಕಂಪ್ಲಿ 24: ಪಟ್ಟಣದ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ನಿಂದ 169ನೇ ಮಹಾಮನೆ ಕಾರ್ಯಕ್ರಮ ನಡೆಯಿತು.
ಶಿವಶರಣ ಹಡಪದ ಅಪ್ಪಣ್ಣ ಸಮಾಜದ ತಾಲೂಕು ಉಪಾಧ್ಯಕ್ಷ ಅಶೋಕ ಕುಕನೂರು ‘ದೋಹರ ಕಕ್ಕಯ್ಯನ ವಿಚಾರಧಾರೆ’ ಕುರಿತು ಮಾತನಾಡಿ, ಬಸವಣ್ಣನವರಂತೆ ದೋಹರ ಕಕ್ಕಯ್ಯ ಶಿವಶರಣ ಸಹ ಸಮಾಜ ಪರಿವರ್ತನೆಯಲ್ಲಿ ತೊಡಗಿಕೊಂಡಿದ್ದು, ಸಮಾಜ ಸುಧಾರಕರಾಗಿದ್ದರು. ಇನ್ನೊಂದು ವರ್ಗದ ವಿರೋಧ, ಕಿರುಕುಳವನ್ನು ಅನುಭವಿಸಿದರೂ ಸಮಾಜ ನಿರ್ಮಾಣ ಭಾವನೆಯಿಂದ ಜೀವಿತದ ಕಡೆಯವರೆವಿಗೂ ವಿಮುಖರಾಗಲಿಲ್ಲ. ವಚನಸಂಗ್ರಹ ಕಟ್ಟುಗಳನ್ನು ಕಾಪಾಡಲು ಬಿಜ್ಜಳನ ಸೈನಿಕರೊಂದಿಗೆ ಹೋರಾಡಿ ಸಂರಕ್ಷಿಸುವಲ್ಲಿ ಮುಂದಾಗುತ್ತಾನೆ. ವಿಚಾರಧಾರೆ ಮಾರ್ಮಿಕವಾಗಿವೆ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪ್ರಕಾಶ ಅಧ್ಯಕ್ಷತೆವಹಿಸಿ ಮಾತನಾಡಿ,ಮನೋಭಾವನೆ ಬೆಳೆಸಿಕೊಂಡಾಗಲೇ ಜೀವನ ಸರಳ, ಸುಂದರ ಮತ್ತು ಅರ್ಥಪೂರ್ಣವಾಗಲು ಸಾಧ್ಯ ಎಂದರು.ಡಾ.ಎಪಿಜೆ ಅಬ್ದುಲ್ ಕಲಾಮ್ ಟ್ರಸ್ಟ್ ಸಂಚಾಲಕ ಬಡಿಗೇರ ಜಿಲಾನ್ಸಾಬ್, ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣ ಎಸ್.ಪೋಳ, ಶಿಕ್ಷಕ ಹಂಚಿನಾಳ ಪೀರಾಸಾಬ್ ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಎಸ್.ಡಿ.ಬಸವರಾಜ, ಎಸ್.ರಾಮಪ್ಪ, ಸಜ್ಜೇದ ವೀರಭದ್ರ್ಪ, ಕೆ.ಚಂದ್ರಶೇಖರ್, ಚಂದ್ರಯ್ಯ ಸೊಪ್ಪಿಮಠ, ಎನ್.ವಿರುಪಾಕ್ಷಿ ಶಿಕ್ಷಕ ಎಸ್.ರಾಮಪ್ಪ ಸೇರಿ ಅನೇಕರಿದ್ದರು ನೇತ್ರಾವತಿ ಪ್ರಾರ್ಥಿಸಿದರು.