ಶಾಲೆಗೆ ಹೋಗುವ ವಿದ್ಯಾರ್ಥಿನಿ ಮೇಲೆ ನಾಯಿ ದಾಳಿ
Dog attacks school going student
ವರದಿ: ರವಿಕುಮಾರ ತುಪ್ಪದ ಕೊಲ್ಹಾರ
ಕೊಲ್ಹಾರ 21: ಶಾಲೆಗೆ ಹೋಗುವ 11 ವರ್ಷದ ವಿದ್ಯಾರ್ಥಿಯನ್ನು ಬೀದಿನಾಯಿಗಳು ಎಳೆದಾಡಿ ಕಚ್ಚಿರುವ ಹೃದಯ ವಿದ್ರಾವಕ ಘಟನೆ ಶುಕ್ರವಾರ ಮುಂಜಾನೆ ತಾಲೂಕಿನ ಸಿದ್ದನಾಥ ಗ್ರಾಮದಲ್ಲಿ ನಡೆದಿದೆ ಸಿದ್ರಾಮಪ್ಪ ನಿಡಗುಂದಿ ಅವರ ಪುತ್ರಿ ತನುಶ್ರೀ (11)ವರ್ಷ ವಿದ್ಯಾರ್ಥಿನಿ ಸಿದ್ದನಾಥ ಗ್ರಾಮದಲ್ಲಿ ಶಾಲೆಗೆ ಹೋಗುವ ವೇಳೆ ಬೀದಿ ನಾಯಿಗಳು ಏಕಾಏಕಿ ಸುತ್ತುವರಿದು ಎಳೆದಾಡಿ ಕೈಗೆ ಮತ್ತು ಕಾಲಿಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ತೆಲಗಿ ಗ್ರಾಮದ ಪ್ರಾಥಮಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬಸವನ ಬಾಗೇವಾಡಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ ಎಂದು ಮಗುವಿನ ಸಂಬಂಧಿಕರು ಮಾಹಿತಿ ತಿಳಿಸಿದ್ದಾರೆ.
ಗ್ರಾಮದಲ್ಲಿ ಇಷ್ಟೆಲ್ಲಾ ಘಟನೆಗಳು ಸಂಭವಿಸಿದರು ಬೀದಿನಾಯಿ ದಾಳಿಗೆ ಒಳಗಾದ ತನುಶ್ರೀ ಕುಟುಂಬದ ಮನೆಗೆ ಹಾಗೂ ಕುರಿ ಸಾವನ್ನಪ್ಪಿದ ಸ್ಥಳಕ್ಕೆ ಸ್ಥಳಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಇದುವರೆಗೆ ಭೇಟಿ ನೀಡಿಲ್ಲಾ. ಕೂಡಲೇ ಬೀದಿನಾಯಿಗಳಿಗೆ ಕಡಿವಾಣ ಹಾಕಬೇಕು ಬೀದಿನಾಯಿಗಳಿಂದ ಹಾನಿಯಾದ ಕುಟುಂಬಕ್ಕೆ ಚಿಕಿತ್ಸೆ ಪರಿಹಾರ ನೀಡಬೇಕು ಇರದೆ ಹೋದರೆ ಸಿದ್ದನಾಥ ಗ್ರಾಮ ಪಂಚಾಯಿತಿಗೆ ಬಿಗ್ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಕೊಲ್ಹಾರ ತಾಲೂಕು ಸಿದ್ದಾನಥ ಗ್ರಾಮದ ಹೊರವಲಯದಲ್ಲಿ ಜಮೀನಿನಲ್ಲಿ ಬೀದಿನಾಯಿಗಳ ದಾಳಿಗೆ ಯಂಕಪ್ಪ ಮಳೆಪ್ಪನವರಿಗೆ ಸೇರಿದ್ದ 5 ಕುರಿ ಮರಿಗಳು ಸಾವನ್ನಪ್ಪಿ 2 ಕುರಿ ಮರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಮನಕ್ಕೆ ತಂದು ಬೀದಿನಾಯಿಗಳ ನಾಯಿಗಳನ್ನು ಹಿಡಿಯುವುದಕ್ಕೆ ಕ್ರಮ ಕೈಗೊಳ್ಳುತ್ತೇನೆ.
- ಆನಂದ ಕೊಟ್ಯಾಳ ಸಿದ್ದನಾಥ ಗ್ರಾಂ ಪಂ. ಅಭಿವೃದ್ಧಿ ಅಧಿಕಾರಿ
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 