ರಾಣೆಬೆನ್ನೂರ

ದೊಡ್ಡಪೇಟೆಯ ದೊಡ್ಡಕೆರೆಗೆ ಬಾಗೀನ ಸಮರ್ಪಣೆ

ದೊಡ್ಡಪೇಟೆಯ ದೊಡ್ಡಕೆರೆಗೆ ಬಾಗೀನ ಸಮರ್ಪಣೆ

ರಾಣೀಬೆನ್ನೂರು ನವೆಂಬರ್ 07:  ನಗರದ ದೊಡ್ಡಪೇಟೆಯ ದೊಡ್ಡ ಕೆರೆಯು ಮೈದುಂಬಿ ನವ ವಧು ವಿನಂತೆ ಕಂಗೊಳಿಸುತ್ತಿದ್ದು ಶಾಸಕರಾದ ಅರುಣ ಕುಮಾರ ಪೂಜಾರ ವಿಧಾನ ಪರಿಷತ್ತಿನ ಸದಸ್ಯ ಆರ್.ಶಂಕರ್ ನಗರಸಭಾ ಅಧ್ಯಕ್ಷೆ ರೂಪಾ ಆರ್. ಚಿನ್ನಿಕಟ್ಟಿಯವರು ಭಕ್ತಿಯಿಂದ ಪೂಜೆ ಸಲ್ಲಿಸಿ ಬಾಗಿನವನ್ನು ಗಂಗಾದೇವಿಗೆ ಸಮರ್ಪಿಸಿದರು.ಶಾಸಕ ಅರುಣಕುಮಾರರವರು ತಮ್ಮ ಧರ್ಮಪತ್ನಿ ಜಿ.ಪಂ.ಸದಸ್ಯೆ ಮಂಗಳಗೌರಿ ಪೂಜಾರರವರೊಂದಿಗೆ ಪೂಜಾ ಕಾರ್ಯ ನೆರವೇರಿಸಿದರು. 

ಆರ್.ಶಂಕರ್, ರೂಪಾ ರಾಘವೇಂದ್ರ ಚಿನ್ನಿಕಟ್ಟಿ ಉಪಾಧ್ಯಕ್ಷೆ ಕಸ್ತೂರಿ ಸಿದ್ದಣ್ಣ ಚಿಕ್ಕಬಿದರಿ ಮಾಜಿ ಜಿ.ಪಂ.ಅಧ್ಯಕ್ಷ ಮಂಜುನಾಥ ಎಚ್.ಓಲೇಕಾರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಜಿ.ಜಿ.ಹೊಟ್ಟಿಗೌಡ್ರ, ಪ್ರಭುಸ್ವಾಮಿ ಕರ್ಜಗಿಮಠ, ಅನಿಲ ಸಿದ್ದಾಳಿ, ನಗರಸಭಾ ಸದಸ್ಯರುಗಳಾದ ಪ್ರಕಾಶ ಬುರಡಿಕಟ್ಟಿ, ಮಲ್ಲಣ್ಣ ಅಂಗಡಿ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರು, ಪ್ರಕಾಶ ಪೂಜಾರ, ಪ್ರಭಾವತಿ ತಿಳವಳ್ಳಿ, ನಾಗರಾಜ ಅಡ್ಮನಿ, ರಾಮಪ್ಪ ಕರಡೆಣ್ಣನವರ ಚಂದ್ರಣ್ಣ ರಾಮಾಳದ, ಚಕ್ರಸಾಲಿ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ