ಧಾರವಾಡ - ಹುಬ್ಬಳ್ಳಿ

ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ವೈದ್ಯರಿಗೆ ಗೌರವ

ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ವೈದ್ಯರಿಗೆ ಗೌರವ

ಚಿತ್ರದುರ್ಗ:  "ವೈದ್ಯೋ ನಾರಾಯಣೋ ಹರಿ ಎಂಬಂತೆ ದೇವರ ರೂಪದಲ್ಲಿ ಧರೆಯ ಮೇಲೆ ಜನರ ಪ್ರಾಣ ರಕ್ಷಣೆಗಾಗಿ ಹಗಲಿರುಳು ಕೆಲಸದಲ್ಲಿ ತೊಡಗಿಕೊಂಡಿರುವ ವೈದ್ಯರ ಸೇವೆ ಅನನ್ಯವಾದದ್ದು ರಾಷ್ಟ್ರೀಯ ವೈದ್ಯರ ದಿನದಂದು ನಮ್ಮ ನೆಚ್ಚಿನ ವೈದ್ಯರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್ ಅಭಿಪ್ರಾಯ ಪಟ್ಟಿದ್ದಾರೆ. ಸೋಮವಾರ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ವತಿಯಿಂದ ಜಿಲ್ಲಾ ಆಯುಷ್ ಕಛೇರಿಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ ನಾಗಸಮುದ್ರ ಹಾಗೂ ಹಿರಿಯ ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್ ಟಿ. ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ರ ಈ ಬಾರಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಆಯುಷ್ ಇಲಾಖೆ ಸದಾ ಜನರ ಸೇವೆಗೆ ಸಿದ್ದವಿದೆ ಈ ಬಾರಿ ಇಲಾಖೆ ವತಿಯಿಂದ ಆಚರಿಸಲಾದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜಿಲ್ಲಾ ಕಾರ್ಯಕ್ರಮ ಹಿಂದೆಂದಿಗಿಂತಲೂ ನೀರೀಕ್ಷೆಗೂ ಮೀರಿ ಯಶಸ್ವಿಯಾಗಿ ನಡೆದಿದ್ದು ಜಿಲ್ಲೆಯ ಜನರ ಗಮನ ಸೆಳೆದಿದೆ ಇದಕ್ಕೆ ವಿವಿಧ ಇಲಾಖೆಗಳು ಮತ್ತು ಯೋಗ ಸಂಘ್ಷಸಂಸ್ಥೆಗಳು ಆಯುಷ್ ಇಲಾಖೆಗೆ ನೀಡಿದ ಸಹಕಾರವೇ ಕಾರಣವಾಗಿದೆ ಎಂದು ಹೇಳಿದರು. ಇದೇ ಸಮಯದಲ್ಲಿ ಮಾತನಾಡಿದ ಹಿರಿಯ ಆಯುಷ್ ವೈದ್ಯಾಧಿಕಾರಿ ಡಾ. ಶಿವಕುಮಾರ್ ಟಿ.ಯವರು ಜಿಲ್ಲಾ ಆಯುಷ್ ಇಲಾಖೆ ಇದುವರೆಗೂ ಹಮ್ಮಿಕೊಂಡ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲಾ ಆಯುಷ್ ವೈದ್ಯರ ಜೊತೆಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಉತ್ತಮ ಸಹಕಾರದೊರೆತಿದ್ದು ಅದಕ್ಕಾಗಿ ಆಯುಷ್ ಇಲಾಖೆಯು ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿಗಳಾದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಯ ಮಂಜುನಾಥ ಎಂ.ಆರ್‌. ಮಂಜುಳಾ, ವಸಂತಲಕ್ಷ್ಮಿ, ಮಯೂರ ಯೋಗ ಕೇಂದ್ರದ ಸುನೀತ ಮುರಳಿ, ಓಂಕಾರ ಯೋಗ ಕೇಂದ್ರ ಭರಮಸಾಗರ ತಿಪ್ಪೇಸ್ವಾಮಿ, ಆರ್ಟ್‌ ಆಫ್ ಲಿವಿಂಗ್ ಬಾಲಾಜಿ, ಗುರುಬಸಪ್ಪ , ಹಾಗೂ ಜಿಲ್ಲಾ ಯೋಗ ಕೇಂದ್ರದ ವೆಂಕಟೇಶ್ ಉಪಸ್ಥಿತರಿದ್ದರು. 


ಸುದ್ದಿ ಓದಿ