ವೈದ್ಯರಿಗೆ ಸನ್ಮಾನ್
ಶಿಗ್ಗಾವಿ: ವೈದ್ಯರ ದಿನಾಚರಣೆಯ ಅಂಗವಾಗಿ ತಾಲೂಕಿನ ವೈದ್ಯರನ್ನು ಪಟ್ಟಣದ ವಾಲ್ಮೀಕಿ ಸಭಾ ಭವನದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಹನುಮಂತಪ್ಪ.ಪಿ.ಹೆಚ್, ತಜ್ಞ ವೈದ್ಯರಾದ ಡಾ.ಲಕ್ಷ್ಮಣ ನಾಯಕ, ಡಾ. ವಿವೇಕ ಜೈನಕೇರಿ, ಡಾ.ಸುಭಾಸ ಲೋಖ್ರೆ, ಡಾ. ಡಾ. ಗುರುರಾಜ, ಡಾ. ಉದಯ, ಡಾ. ರೋಷನ್, ಡಾ. ಪ್ರತಿಭಾ, ಡಾ. ಮನೋಜ ನಾಯ್ಕ, ಡಾ. ಹನುಮಂತಪ್ಪ ಗುಡಚಿ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.