ಲಕ್ಕಪ್ಪ ಆನಿಗೋಳ ಅವರಿಗೆ ಡಾಕ್ಟ್ರೆಟ್ ಪದವಿ ಪ್ರಧಾನ
ಯರಗಟ್ಟಿ 23: ಸಮೀಪದ ಯರಗಣವಿ ಗ್ರಾಮದ ಲಕ್ಕಪ್ಪ ಆನಿಗೋಳ ಅವರು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿಧ್ಯಾಲಯದ ರಾಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿಯು ಮಂಡಿಸಿದ ಸಂಶೋಧನಾ ಮಹಾಪ್ರಬಂದಕ್ಕೆ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ ಪದವಿ ಪಡೆದಿದ್ದಾರೆ.
ಲಕ್ಕಪ್ಪ ಆನಿಗೋಳ ಅವರು “ಸಿಂಥೆಸಿಸ್ ಆಫ್ ಫಂಕಷನಲೈಸ್ಡ ಮೆಟಲ್ ಆಕ್ಸೈಡ ನ್ಯಾನೊಪಾರ್ಟಿಕಲ್ಸ ಫಾರ ಬಯೋಮೇಡಿಕಲ್ ಆಂಡ ರೆನೆವೆಬಲ್ ಏನರ್ಜಿ ಅಪ್ಲಿಕೇಶನ್” ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂದಕ್ಕೆ ಪಿ ಎಚ್ ಡಿ ಪದವಿ ಲಬಿಸಿದೆ.
ಇವರಿಗೆ ಡಾ. ಪಿಎಮ್ ಗುರುಬಸವರಾಜ ಮಾರ್ಗದಶನ ನೀಡಿದ್ದಾರೆ ಹಾಗು ಆಯ್ ಆಯ್ ಟಿ ಮುಂಬೈನ ಪ್ರೋ. ರಾಮಸ್ವಾಮಿ ಮುರಗಾವೇ ಅವರು ಪರಿವಿಕ್ಷಕರಾಗಿದ್ದರು.
ಅಗಸ್ಟ 2ರಂದು ಭಾರತಿಯ ರಾಸಾಯನ ಶಾಸ್ತ್ರ ದಿನದಂದು ಲಕ್ಕಪ್ಪ ಆನಿಗೋಳ ಅವರಿಗೆ ಪಿಎಚ್ ಡಿ ಪದವಿ ಪ್ರಧಾನ ಮಾಡಿದ್ದು ವಿಷೇಶವಗಿದೆ.